vachana; ಶಿಕ್ಷಣ ಇಲಾಖೆಯಲ್ಲಿ ವಚನ ಸಾಹಿತ್ಯದ ಅವಗಣನೆ: ಸಾಣೇಹಳ್ಳಿ ಸ್ವಾಮೀಜಿ ಬೇಸರ

ಚಿತ್ರದುರ್ಗ, ಆ.18: ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕುವ `ಪ್ರತಿಭಾ ಕಾರಂಜಿ’ (Prathibha Karanji) ಸ್ಪರ್ಧೆಯಲ್ಲಿ ಲಘುಸಂಗೀತ ವಿಭಾಗದಿಂದ ವಚನಕಾರರ ವಚನ  ಸಾಹಿತ್ಯ ((vachana literature) ಮತ್ತು ಹರಿದಾಸರ ದಾಸ ಸಾಹಿತ್ಯವನ್ನು ಹಾಡದಂತೆ ನಿರ್ಬಂಧ ವಿಧಿಸಿರುವುದು ವಚನಕಾರರಿಗೆ ಮತ್ತು ದಾಸವರೇಣ್ಯರಿಗೆ ಮಾಡಿರುವ ಅವಮಾನ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು (Sri Panditharadhy Shivacharya Swamiji) ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಇವರು, ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಲಘುಸಂಗೀತಕ್ಕೆ ಹೇಳಿಮಾಡಿಸಿದ ರೀತಿಯಲ್ಲಿ ಇವೆ ಎನ್ನುವುದಕ್ಕೆ ಅವು ಜನಪ್ರಿಯವಾಗಿರುವುದೇ ಸಾಕ್ಷಿ. ಆದಾಗ್ಯೂ ಸರ್ಕಾರ ಇದನ್ನು ಪರಿಗಣಿಸದೆ ಉಭಯ ಸಾಹಿತ್ಯವನ್ನು ಕಡೆಗಣಿಸಿರುವುದು ಕನ್ನಡದ (kannada) ಆತ್ಮವನ್ನೇ ಅವಮಾನಿಸಿದಂತಾಗುತ್ತದೆ. ಕಳೆದ ಏಳೆಂಟು ವರ್ಷಗಳಿಂದಲೂ ಜಾರಿಯಲ್ಲಿರುವ ಈ ನಿಯಮವನ್ನು ಇದುವರೆಗೂ ಯಾರೊಬ್ಬರೂ ಪ್ರಶ್ನಿಸದಿರುವುದು ವಿಷಾದನೀಯ. ಇದೊಂದು ವ್ಯವಸ್ಥಿತ ಪಿತೂರಿಯಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಶಿಕ್ಷಣ ಸಚಿವರು, ಅಧಿಕಾರಿಗಳು ಕೂಡಲೇ ಎಚ್ಚೆತ್ತು ಆಗಿರುವ ದೋಷಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

Application; ಪಾಲಿಹೌಸ್, ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ

ಎಲ್ಲ ಶಾಲೆಗಳಲ್ಲೂ ಅಗತ್ಯ ಪ್ರಮಾಣದಲ್ಲಿ ಸಂಸ್ಕೃತ, ಉರ್ದು ಶಿಕ್ಷಕರಿಲ್ಲದಿದ್ದರೂ ಧಾರ್ಮಿಕ ವಿಭಾಗದಲ್ಲಿ ಭಗವದ್ಗೀತೆ,(Bhagavad Gita) ಕುರಾನ್ ಪಠಣಕ್ಕೆ ಅವಕಾಶವನ್ನು ನೀಡಿರುವಾಗ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವಾಗ ಕನ್ನಡದ ವಚನಗಳಿಗೆ, ದಾಸ ಸಾಹಿತ್ಯಕ್ಕೆ ಏಕೆ ಅವಕಾಶ ನೀಡಿಲ್ಲ ಎನ್ನುವುದು ಪ್ರಶ್ನಾರ್ಹ. ಪ್ರತ್ಯೇಕ ವಿಭಾಗದ ಅಡಿಯಲ್ಲಿ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯಕ್ಕೂ ಅವಕಾಶ ನೀಡಿದರೆ ಮಕ್ಕಳ ಮನೋಭೂಮಿಕೆಯಲ್ಲಿ ಸತ್ವಯುತ, ವೈಚಾರಿಕ, ವೈಜ್ಞಾನಿಕ ಬೀಜ ಬಿತ್ತಿದಂತಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!