ಕುಮಾರಪಟ್ಟಣಂ ಮಟ್ಕಾ ಬಿಡ್ಡರ್ ಗಳು ಅರೆಸ್ಟ್.! ಕೆಪಿಎಂ ಪೊಲೀಸ್ ಘರ್ಜನೆಗೆ ತತ್ತರಿಸಿದ ದಂಧೆಕೋರರು
ದಾವಣಗೆರೆ: ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓಸಿ ಜೂಜಾಟದ ಅಂಕಿ-ಸ0ಖ್ಯೆಗಳನ್ನು ಬರೆದು ಕೊಡುತ್ತಿದ್ದವರು ಕುಮಾರಪಟ್ಟಣಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೂನ್ 18ರಂದು ಕುಮಾರಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಯಾಲ ಹೊಸಪೇಟೆ ಎಸ್.ಬಿ.ಐ ಬ್ಯಾಂಕ್ ಎದುರಿನ ಹಳೆ ಚೆಕ್ ಪೋಸ್ಟ್ ಕಡೆಯಿಂದ ಹರಿಹರ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತರಾದ ನವೀನಕುಮಾರ ತಂದೆ ಬೀರಪ್ಪ ಪೂಜಾರ ಕೋಡಿಯಾಲ ಹೊಸಪೇಟೆ ಹಾಗೂ ನಾಗರಾಜ ತಂದೆ ಬೀರಪ್ಪ ಪೂಜಾರ ಕೋಡಿಯಾಲ ಹೊಸಪೇಟೆ ತಾಲೂಕು, ರಾಣೇಬೆನ್ನೂರು ಇವರು ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಓಸಿ ಜೂಜಾಟ ಆಡಿಸುತ್ತಿದ್ದರು. ಈ ಮಾಹಿತಿ ತಿಳಿದ ರಾಣೇಬೆನ್ನೂರು ವ್ಯಾಪ್ತಿಯ ಕುಮಾರಪಟ್ಟಣಂ ಪೊಲೀಸರು ಆರೋಪಿತರಿಂದ 2500 ರೂ. ಎರಡು ಬಾಲ್ ಪೆನ್, ಎರಡು ಓಸಿ ಅಂಕೆ ಸಂಖ್ಯೆ ಬರೆದ ಚೀಟಿಗಳನ್ನು ಪಡೆದು ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
garudavoice21@gmail.com 9740365719