ದುಷ್ಟರ ಕೃತ್ಯದಿಂದ ಬಲೆಗೆ ಬಿದ್ದಿದ್ದ ನವಿಲು ಸಾವು: ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ: ಕ್ರಮಕ್ಕೆ ಒತ್ತಾಯಿಸಿದ ರೈತ ಸಂಘ

ದಾವಣಗೆರೆ: ದುಷ್ಕರ್ಮಿಗಳ ಕೃತ್ಯದಿಂದ ನವಿಲೊಂದು ಬಲೆಗೆ ಬಿದ್ದು ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ಗ್ರಾಮದಲ್ಲಿ ಬುಧವಾರ ನಡೆದಿದೆ.

ಯಾರೋ ದುಷ್ಕರ್ಮಿಗಳು ಹಾಕಿರುವ ಬಲೆಗೆ ನವಿಲು ಬಿದ್ದು ಒದ್ದಾಡಿ ಸಾವನಪ್ಪಿದ್ದು, ಇದನ್ನು ಗಮನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮುಖಂಡರುಗಳಾದ ರಾಜು ದೊಡ್ಡಘಟ್ಟ, ಸಂತೋಷ್ ನಾಯ್ಕ ಕಬ್ಬಳ, ಮಂಜುನಾಥ ದೊಡ್ಡಗಟ್ಟ, ಕೆಎಂ ಅಣ್ಣಪ್ಪ ಕಣಿವೆಬಿಳಚಿ, ಹನುಮಂತಪ್ಪ ಕಣಿವೆಬಿಳಚಿ, ನಾಗ ನಾಯ್ಕ ಯಲದಹಳ್ಳಿ ಇವರುಗಳು ಸೇರಿ ಸಂಬಂಧಪಟ್ಟ ಅರಣ್ಯ ಉಪ ವಲಯಾಧಿಕಾರಿ ಸದಾಶಿವ ಇವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ನಂತರ ಅರಣ್ಯ ಉಪ ವಲಯ ಅಧಿಕಾರಿ ಸದಾಶಿವ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ.

ಇದೇ ವೆ ರೈತ ಸಂಘದ ಜಿಲ್ಲಾ ಮುಖಂಡರುಗಳು ಇಂತಹ ಘಟನೆ ಇನ್ನು ಮುಂದೆ ಮರುಕಳಿಸದಂತೆ ಗಮನಹರಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!