piles; ಭಯಂಕರ ವ್ಯಾದಿ ಪೈಲ್ಸ್ ಏಕೆ ಬರುತ್ತೆ.? ಗುಣ ಲಕ್ಷಣಗಳೇನು ಗೊತ್ತಾ.?

ದಾವಣಗೆರೆ, ಸೆ. 02: ಲ್ಯಾಟಿನ್ ನ  ಪೈಲಾ (ಎಂದರೆ ಚೆಂಡಿನ ಆಕಾರ) ಎಂಬ ಪದದಿಂದ ಹುಟ್ಟಿದೆ. ಗುದಮಾರ್ಗ ತೆರೆಯುವಾಗ ಉಂಟಾಗುವ ಮಾಂಸಾಂಕುರಗಳು ಗುದಮಾರ್ಗವನ್ನು ತಡೆಯುತ್ತದೆ ಮತ್ತು ಶತ್ರುಗಳಂತೆ ತೊಂದರೆಗೊಳಿಸುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಇದನ್ನು ಅರ್ಶಸ್ ಎಂದು ಕರೆಯಲಾಗಿದೆ. ವಿಶ್ವದ ಶೇಕಡ 40ರಷ್ಟು ಜನರಿಗೆ ಪೈಲ್ಸ್ ತೊಂದರೆ ಇದೆ ಎನ್ನುತ್ತವೆ ಸಮೀಕ್ಷೆಗಳು. ಮನುಷ್ಯನ ಗುದದ್ವಾರದಲ್ಲಿ ಅನೇಕ ರಕ್ತನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತವೆ ಇದಕ್ಕೆ ಪೈಲ್ಸ್ (ಅರ್ಶಸ್) (piles) ಎನ್ನುತ್ತಾರೆ. ಇದನ್ನು ಭಯಂಕರ ವ್ಯಾದಿ ಎಂತಲೇ ಹೇಳಬಹುದು.

ಮಲ ವಿಸರ್ಜನೆ ಸಮಯದಲ್ಲಿ ನೋವು ಉರಿ ರಕ್ತ ಸೋರುವುದು ಮಾಂಸಾಂಕುರಗಳು ಹೊರಗೆ ಬರುವುದು ಮಲಬದ್ಧತೆ ಇಂತಹ ಪ್ರಕ್ರಿಯೆ ಪೈಲ್ಸ್ ಇಂದ ಆಗುವಂತವು, ಪೈಲ್ಸ್ ಬಾದೆ ಬಹಳ ಕಷ್ಟ ಆದರೂ ಇದೊಂದು ಗುಣಪಡಿಸಲಾಗದ ರೋಗವಲ್ಲ ಆದರೂ ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತ ಉಪಶಮನ ಕಾಣಬಹುದು.

transfer; ದಾವಣಗೆರೆ ಡಿ ಎಚ್ ಒ, ಆರ್ ಸಿ ಎಚ್ ಸೇರಿ ಒಂದೇ ದಿನ 600 ಕ್ಕೂ ಹೆಚ್ಚು ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ

ಪೈಲ್ಸ್ ಬಾದಿತರು ಸಣ್ಣ ಪುಟ್ಟ ಉಪಶಮನಕಾರಿ ಔಷಧ ಮಾರ್ಗಗಳನ್ನು ಕಂಡುಕೊಂಡು ಹಾಗೆಯೇ ಸುಮ್ಮಗಿದ್ದು ಬಿಡುತ್ತಾರೆ. ಪೈಲ್ಸ್ ಬಗ್ಗೆ ತಿಳುವಳಿಕೆ ಅತಿಮುಖ್ಯ. ಸಾಮಾನ್ಯವಾಗಿ ಪೈಲ್ಸ್ ಹೊಂದಿರುವವರು ವೈದ್ಯರಿಂದ ವಿಶೇಷವಾಗಿ ಮಹಿಳೆಯರು ಹಿಂಜರಿಯುತ್ತಾರೆ. ಆದರೂ ಪೈಲ್ಸ್ ಖಾಯಿಲೆಗೆ ಸಕಾಲಿಕ ಚಿಕಿತ್ಸೆ ಬಹಳ ಮುಖ್ಯ ಇಲ್ಲದಿದ್ದರೆ ಸಮಸ್ಸೆ ಗಂಭೀರವಾಗುವ ಸಾಧ್ಯತೆಗಳು ಹೆಚ್ವು ಕೆಲವೊಂದು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯೆ ಅಗತ್ಯವಾಗಬಹುದು. ನಾನಾವಿಧ ಗುದದ್ವಾರದ ಒಳಗಡೆ ಇರುವ ಪೈಲ್ಸ್ ಅಂತರ್ಗತ ಪೈಲ್ಸ್ ಎನ್ನುತ್ತಾರೆ. ಅದು ಹೊರಗಡೆ ಬಂದರೆ ಬಹಿರ್ಗತ ಪೈಲ್ಸ್ ಎನ್ನುತ್ತಾರೆ. ಸಾಧಾರಣವಾಗಿ ಒಳಗಡೆ ಇರುವ ಪೈಲ್ಸ್ ನಲ್ಲಿ ನೋವು ಅಷ್ಟಾಗಿ ತಿಳಿಯವುದಿಲ್ಲ. ಹೊರಗಡೆ ಬರುವ ಪೈಲ್ಸ್ ನಲ್ಲಿ ವಿಪರೀತವಾದ, ಸಹಿಸಲಾಗದ ನೋವು ಇರುತ್ತದೆ ಇದರಲ್ಲಿ ರಕ್ತ ಹೆಪ್ಪುಗಟ್ಟಿದರೆ ನೋವು ಇನ್ನೂ ಹೆಚ್ಚಾಗುತ್ತದೆ.

ಕಾರಣಗಳೇನು?

– ಮಲವಿಸರ್ಜನೆ ಸಮಯದಲ್ಲಿ ಅತಿಯಾಗಿ ತಿಣುಕುವುದು.

-ಪದೇ ಪದೇ ಮಲಬದ್ದತೆ ಪಚನಕ್ರಿಯೆಗೆ ತೊಂದರೆ ಉಂಟು ಮಾಡುವಂತ ಜಂಕ್ ಪುಡ್ ಸೇವನೆ.

– ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು.

– ಲಿವರ್ ಸಂಬಂಧಿ ರೋಗ.

– ಶುಚಿತ್ವದ ಕೊರತೆ.

– ಹೆಚ್ಚು ಮಾಂಸಾಹಾರ ಸೇವನೆ ಅಜೀರ್ಣ.

– ಹೆರಿಗೆ ನಂತರ ಸೇವಿಸುವ ವಿಶೇಷ ಆಹಾರ.

– ಅನುವಂಶೀಯತೆ

– ಬಹಳ ಸಮಯದವರೆಗೆ ಒಂದೇ ಕಡೆ ಕುಳಿತುಕೂಳ್ಳುವುದು ಅಥವಾ ನಿಲ್ಲುವುದು.

– ಗರ್ಭೀಣಿಯರಲ್ಲಿ ಮಲ ವಿಸರ್ಜಿಸುವಾಗ ಗುದದ್ವಾರದ ಮೇಲೆ ಹೆಚ್ಚು ಒತ್ತಡ ಇರುವುದು.

– ಆಧುನಿಕ ಜೀವನ ಶೈಲಿ

ರೋಗ ಲಕ್ಷಣಗಳು:

– ಗುದದ್ವಾರದಿಂದ ರಕ್ತವು ಹನಿ ಹನಿಯಾಗಿ ಬೀಳುವುದು ಅಥವಾ ಚಿಮ್ಮುವುದು.

– ಗುದನಾಳದೂಳಗೆ ಅಥವಾ ಸುತ್ತಲೂ ಊತ.

– ಗುದದ್ವಾರದಿಂದ ಗಂಟು ( ಮೊಳಕೆ ) ಹೊರಬರುವುದು.

– ಮಲ ವಿಸರ್ಜನೆ ವೇಳೆ ಮತ್ತು ನಂತರ ನೋವು.

– ಕಷ್ಟದಿಂದ ಮಲ ವಿಸರ್ಜನೆ

ಆಯುರ್ವೇದ ಚಿಕಿತ್ಸೆ:

ಶಸ್ತ್ರ ಚಿಕಿತ್ಸೆಯ ಭಯದಿಂದ ಅನೇಕ ರೋಗಿಗಳು ಉದಾಸೀನ ಮಾಡುತ್ತಾರೆ. ಆಯುರ್ವೇದದಲ್ಲಿ ರೋಗದ ಅವಸ್ತಾನುಸಾರ ಔಷಧ ಚಿಕಿತ್ಸೆ ಕ್ಷಾರ ಕರ್ಮ ಚಿಕಿತ್ಸೆ, ಕ್ಷಾರ ಸೂತ್ರ, ಅಗ್ನಿಕರ್ಮದಂತಹ ಯಶಸ್ವಿ ಚಿಕಿತ್ಸೆಗಳಿವೆ ಇದರ ಜೊತೆಗೆ ಜೀರ್ಣ ಕ್ರಿಯೆ ಸುಧಾರಣೆ ಮಾಡಿಕೊಳ್ಳುವುದು ಮುಖ್ಯ. ಶಸ್ತ್ರಚಿಕಿತ್ಸೆ ಮುಖ್ಯವಾಗಿ ಮುಂದುವರೆದ ಹಂತದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯ ಈ ಹಂತದಲ್ಲಿ ಹಳ್ಳಿಮದ್ದು, ನಕಲಿ ವೈದ್ಯರ ಔಷಧಿಗಳು ಪ್ರಾಣಕ್ಕೆ ಕುತ್ತು ಬರಬಹುದು.

ಆಹಾರ ಪದ್ಧತಿ:

-ನೀರಿನಾಂಶ ಹೆಚ್ಚಿರುವ ಹಸಿರು ತರಕಾರಿ, ಸೊಪ್ಪು, ಗೆಜ್ಜರಿ, ಮೂಲಂಗಿ ,ಸೌತೇಕಾಯಿ ಸೇವಿಸಿ ಹೆಚ್ಚು ನೀರು, ಎಳನೀರು, ಶರಬತ್ತು, ಮಜ್ಜಿಗೆ, ಹಣ್ಣುಗಳನ್ನು ಸೇವಿಸಿ.

– ಪ್ರತಿದಿನ ಕನಿಷ್ಟ 3-4 ಲೀಟರ್ ನೀರು ಕುಡಿಯಿರಿ. ಎಣ್ಣೆಯಲ್ಲಿ ಕರಿದ ಬೇಕರಿ ಪದಾರ್ಥಗಳು ಹಸಿಮೆಣಸಿನಕಾಯಿ ಆಲೂಗಡ್ಡೆ ಬದನೆಕಾಯಿ ಸೇವಿಸಬೇಡಿ.

-ಅತಿಯಾದ ಚಹಾ, ಕಾಫಿ, ಕೂಲ್ಡ್ ಡ್ರಿಂಕ್ಸ್, ಮಾಂಸ, ಮೊಟ್ಟೆ ಒಳ್ಳೆಯದಲ್ಲ.

-ಮದ್ಯಪಾನ, ಧೂಮಪಾನ ತಂಬಾಕು ಸೇವನೆ ಬೇಡ

-ಸ್ವಲ್ಪ ವ್ಯಾಯಾಮ ನಡಿಗೆ ಒಳ್ಳೆಯದು.

-ಒಂದೇ ಸಮಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು.

– ಮಲವಿಸರ್ಜನೆ ಸಮಯದಲ್ಲಿ ತಿಣುಕಬಾರದು.

-ನಿತ್ಯವು ಒಂದು ನಿಗದಿತ ಸಮಯದಲ್ಲಿ ಟಾಯ್ಲೆಟ್ ಗೆ ಹೊಗುವುದು.

ಗಮನದಲ್ಲಿರಬೇಕಾದ ಅಂಶಗಳು:

ಪ್ರದೇಶದಲ್ಲಿ ಕಂಡುಬರುವ ರೋಗಗಳಲ್ಲಿ ಮೂಲವ್ಯಾದಿ ಆಗಿರಲೇ ಬೇಕಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಗುದದ್ವಾರದ ಕ್ಯಾನ್ಸರ್ ಇರಲೂಬಹುದು. ಆದ್ದರಿಂದ ಏನೇ ಸಮಸ್ಯೆ ಇದ್ದರೆ ತಕ್ಷಣ ವೈದ್ಯರ ಬಳಿ ತೋರಿಸಿ ಸೂಕ್ತ ಪರಿಹಾರ ಪಡೆದುಕೊಂಡು ಈ ಭಯಂಕರ ರೋಗ ಪೈಲ್ಸ್ (ಅರ್ಶಸ್ ) ಗೆ ಖಂಡಿತ ಗುಡ್ ಬೈ ಹೇಳಬಹುದು.

– ಡಾ. ಬಿ ಶಿವಕುಮಾರ್, ಹಿರಿಯ ವೈದ್ಯಾದಿಕಾರಿಗಳು

ಆಯುಷ ಪಂಚಕರ್ಮ ವಿಭಾಗ, ಚಿಗಟೇರಿ ಜಿಲ್ಲಾ ಆಸ್ಪತ್ರೆ.

ದಾವಣಗೆರೆ – 9886624267

Leave a Reply

Your email address will not be published. Required fields are marked *

error: Content is protected !!