coffee; ಕಾಫಿ ಹೀಗೆ ಕುಡಿದರೆ ಮಾತ್ರ ದೇಹ ತೂಕ ಇಳಿಯುತ್ತೆ…!
ನಮ್ಮಲ್ಲಿ ಹಲವು ಪಾನೀಯಗಳಿದ್ದರೂ ಕಾಫಿ (coffee) ಎಲ್ಲರ ಅಚ್ಚುಮೆಚ್ಚಿನ ಪಾನೀಯ. ಕಾಫಿ ಕುಡಿಯದೇ ದಿನ ಆರಂಭವಾಗುವುದೇ ಇಲ್ಲ ಎನ್ನುವವರಿದ್ದಾರೆ. ಇದರಲ್ಲಿರುವ ಕೆಫಿನ್ ಅಂಶ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಈ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೇ, ಹೊಟ್ಟೆ ಹಸಿವನ್ನು ನಿಯಂತ್ರಣದಲ್ಲಿರಿಸುತ್ತದೆ. ಹಾಗೆಯೇ ಇದೇ ಕಾಫಿ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ ಎಂದರೆ ನಂಬಲೇ ಬೇಕು. ಆದರೆ ಕುಡಿಯುವ ವಿಧಾನ ತಿಳಿದಿರಬೇಕು ಅಷ್ಟೇ. ಹಾಗಾದರೆ ತೂಕ ಇಳಿಕೆಗೆ ಕಾಫಿ ಹೇಗೆ ಕುಡಿಯಬೇಕು. ಇಲ್ಲಿದೆ ಮಾಹಿತಿ..
1. ಕಾಫಿಯಲ್ಲಿ ಹಾಲು ಹಾಕದೇ ಬ್ಲಾಕ್ ಕಾಫಿ ಕುಡಿಯುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ ತುಂಬಾ ಕಡಿಮೆ ಕೊಬ್ಬಿನಾಂಶವಿರುವ ಹಾಲು ಬಳಸಿ
2. ಸಿಹಿ ಕಡಿಮೆ ಇರಲಿ. ಬಳಸದಿದ್ದರೆ ಇನ್ನು ಒಳ್ಳೆಯದು.
3. ಸಿಹಿ ಬೇಕೆಂದಲ್ಲಿ ಸಕ್ಕರೆ ಬದಲು ಬೆಲ್ಲ ನಿಮ್ಮ ಆದ್ಯತೆಯಾಗಿರಲಿ
4. ದಿನದಲ್ಲಿ ಒಂದೆರಡು ಬಾರಿ ಕುಡಿದರೆ ಒಳಿತು. ಅತಿಯಾದ ಕಾಫಿ ಸೇವನೆ ಆರೋಗ್ಯಕರವಲ್ಲ.
5. ಅತಿಯಾದ ಕಾಫಿ ಸೇವನೆ ನಿದ್ರಾಹೀನತೆ, ತಲೆನೋವಿಗೆ ಕಾರಣವಾಗುತ್ತದೆ.
ಗಂಗಾ ಕಲ್ಯಾಣ: ಬಾಕಿ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ
ಯಾವಾಗ ಕಾಫಿ ಕುಡಿಯಬೇಕು?
ವ್ಯಾಯಾಮ ಮಾಡುವ ಮೊದಲು ಬ್ಲಾಕ್ ಕಾಫಿ ಸೇವಿಸಿದರೆ ಒಳ್ಳೆಯದು. ವ್ಯಾಯಾಮದ ನಂತರವೂ ಸೇವಿಸಬಹುದು. ಆದರೆ ಸಕ್ಕರೆ ಬಳಸದೆ ಕುಡಿಯಿರಿ. ಮಧ್ಯರಾತ್ರಿಯಲ್ಲಿ ಕಾಫಿ ಕುಡಿಯಬೇಡಿ. ಏಕೆಂದರೆ ನಿದ್ರೆ ಕಡಿಮೆಯಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.