ಪಾಲಿಕೆ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ನಡೆಗೆ, ಪ್ರಸನ್ನ ಕುಮಾರ್ ಟಾಂಗ್

ಪಾಲಿಕೆ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್

ದಾವಣಗೆರೆ: ಕಳೆದ 5 ವರ್ಷ ಬಜೆಟ್ ಘೋಷಣೆ ಮೂಲಕ ಜನರಿಗೆ ಮಕ್ಮಲ್ ಟೊಪಿ ಹಾಕಿದ ಕಾಂಗ್ರೆಸ್ ಏನೂ ಮಾಡದೆ.? ಇಂದು, ತಾವು ಜನ ಪ್ರತಿನಿಧಿಗಳು ಎಂಬುದನ್ನೂ ಮರೆತು, ತಾವೇ ಕಿವಿ ಮೇಲೆ ಹೂವ ಇಟ್ಟು ಕೊಂಡು, ಮತ್ತೆ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಕಾಂಗ್ರೆಸ್ ಆಡಳಿತಾವಧಿಯ ಬಜೆಟ್ ವೇಳೆ ಘೋಷಿಸಿದ್ದ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ನವರು‌ 2015-16 ರಿಂದ 2019 ರವರೆಗೆ ಮಂಡಿಸಿರುವ ಬಜೆಟ್ ನಲ್ಲಿ‌ ಮಾಡಿರುವ ಘೋಷಣೆಗಳು ಎಲ್ಲಿ ಹೋದವು.?
ಸೈಕಲ್ ಪಾತ್ ಎಲ್ಲಿ ಹೋಯಿತು.?
ಟೆರೆಸ್ ಗಾರ್ಡನ್ ಎಲ್ಲಿ ಹೋಯಿತು.?
ಡಿಜಿಟಲ್ ಲೈಬ್ರರಿ ಎಲ್ಲಿ ಹೋಯಿತು.?
ಗರಡಿ ಮನೆ ಉನ್ನತೀಕರಣ ಏನಾಯಿತು.?
ಸ್ಕೈ ವಾಕ್ ಎಲ್ಲಿ ಹೋಯಿತು‌.?
ಕೇವಲ ಘೋಷಣೆಗಳನ್ನು ಮಾಡುವ ಮೂಲಕ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.

ಆದರೆ, ಬಿಜೆಪಿ ಆಡಳಿತ ಬಂದ ನಂತರ ಕಳೆದ 3 ವರ್ಷಗಳಲ್ಲಿ, ಘೋಷಸಿದ್ದನ್ನು ಮಾಡಿ ತೋರಿಸಿದೆ. ಡಿಜಿಟಲ್ ಲೈಬ್ರರಿ ಮಾಡಿದ್ದೇವೆ, ಗರಡಿ ಮನೆ ಉನ್ನತೀಕರಣಕ್ಕಾಗಿ ಟೆಂಡರ್ ಪ್ರಗತಿಯಲ್ಲಿದೆ, ಮಳೆ ನೀರು ಪ್ರವಾಹ ತಡೆಯಲು ಚರಂಡಿಗಳ ಅಭಿವೃಧ್ಧಿ (ಸ್ಟ್ರೋಮ್ ವಾಟರ್ ಡ್ರೈನ್) ಸೇರಿದಂತೆ ಅನೇಕ ರಸ್ತೆಗಳನ್ನು ಅಭಿವೃಧ್ಧಿ ಮಾಡಿದ್ದೇವೆ,
ಪಾಲಿಕೆ ಆವರಣದಲ್ಲಿ ಹೊಸ ಕ್ಯಾಂಟೀನ್ ನಿರ್ಮಾಣ ಮಾಡಿದ್ದೇವೆ.
ಇಂದಿನ ರಾಷ್ಟ್ರೀಯ ಕಾಂಗ್ರೆಸ್ ಗೂ ದೇಶದ ಭವಿಷ್ಯದ ಚಿಂತೆ ಇಲ್ಲಾ, ಜನರು ತಮ್ಮನ್ನು ಸತತವಾಗಿ ಅಧಿಕಾರದಿಂದ ದೂರ ಇರಿಸಿದ್ದಾರೆ ಎಂಬ ಹತಾಶೆಯಲ್ಲಿ ಮುಳುಗಿದೆ, ಪ್ರತಿಯೊಂದಕ್ಕೂ ವಿರೋಧ ಮಾಡುವಂತಹ, ಮಾನಸೀಕತೆ ಇರುವಂತಹ ನೇತೃತ್ವದಲ್ಲಿ‌ ಮುಂದೆ ಸಾಗುತ್ತಿದೆ.
ಆದರೆ, ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅಮೇರಿಕ ದೊಂದಿಗೆ ಪರಮಾಣು ಒಪ್ಪಂದ ಮಾಡುವ ಸಂಬಂಧ, ಅವರ ಬೆಂಬಲಿತ ಪಕ್ಷಗಳೇ ಅವರ ಸಾಥ್ ನೀಡಿರಲಿಲ್ಲಾ. ಆದರೆ, ಅಟಲ್ ಜಿ ದೇಶದ ಭವಿಷ್ಯಕ್ಕಾಗಿ ಅಂದು ಬೆಂಬಲಿಸಿದ್ದರು, ಇದು ಒಂದು ಜವಾಬ್ದಾರಿಯುತ ಪ್ರತಿ ಪಕ್ಷದ ನಡೆಯಾಗಿರಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!