raksha bandhan; ಅಣ್ಣ ತಂಗಿ ಮತ್ತು ಅಕ್ಕ ತಮ್ಮಂದಿರ ಬಾಂಧವ್ಯದ ಹಬ್ಬ- ಅನುಪಮ.ಆರ್, ವಿದ್ಯಾರ್ಥಿನಿ

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಲ್ಲಿ ರಕ್ಷಾಬಂಧನ (raksha bandhan) ಕೂಡ ಪ್ರಮುಖವಾಗಿದೆ. ಸಂಬಂಧವನ್ನು ಬೆಸೆಯುವ ಬಾಂಧವ್ಯದ ಹಬ್ಬವಾಗಿದೆ. ರಕ್ಷಾ ಬಂಧನ ಹಬ್ಬವನ್ನು ರಾಷ್ಟ್ರದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಇದು ಹಿಂದುಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ದಿನ ಸೋದರಿಯೂ ತನ್ನ ಸೋದರನ ಕೈಗೆ ರಕ್ಷೆಯ ದಾರವನ್ನು ಕಟ್ಟುತ್ತಾಳೆ. ಇದನ್ನೇ ರಾಖಿ ಎಂದು ಕರೆಯಲಾಗುತ್ತದೆ. ಈ ದಾರವನ್ನು ಕಟ್ಟುವ ವೇಳೆ ತಂಗಿ ತನ್ನ ಅಣ್ಣನಿಗೆ ದೀರ್ಘಾಯುಷ್ಯ ಆರೋಗ್ಯವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಸಹೋದರನು ಕೂಡ ತನ್ನ ಸಹೋದರಿಯನ್ನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ.

ಮೊದಲಿಗೆ ಸಹೋದರಿ ಸಹೋದರನ ಹಣೆಗೆ ತಿಲಕವನ್ನು ಇಟ್ಟು ನೆತ್ತಿಯ ಮೇಲೆ ಅಕ್ಷತೆಯನ್ನು ಹಾಕಬೇಕು ನಂತರ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ , ಸಿಹಿಯನ್ನು ತಿನ್ನಿಸಬೇಕು.
ಪ್ರೀತಿ ಮಮತೆ ವಾತ್ಸಲ್ಯಗಳ ಪ್ರತೀಕ ಈ ಸುದಿನ ಸಹೋದರಿಯರ ರಕ್ಷಣೆ ಸಹೋದರನ ಹೊಣೆ ಎಂದು ಸಾರುವ ಶುಭದಿನವಾಗಿದೆ. ಭಾವನೆಗಳಿಗೆ ಸಂಬಂಧಿಸಿದ ಹಬ್ಬವೇ ರಕ್ಷಾ ಬಂಧನ.
“ಅಣ್ಣನ ಯಶಸ್ಸು
ಆಯಸ್ಸು ದೊರಕಲಿ
ಎಂಬ ಭಾವನೆಯಿಂದ ಮಾಡುವ ಪವಿತ್ರ ಹಬ್ಬ,”

ಹಿಂದೂ ಪುರಾಣದ ಪ್ರಕಾರ ಮಹಾಭಾರತದ ಅವಧಿಯಿಂದಲೇ ರಕ್ಷಾಬಂಧನದ ಇತಿಹಾಸ ಆರಂಭವಾಗುತ್ತದೆ. ಭಗವಾನ್ ಶ್ರೀ ಕೃಷ್ಣನು ಶಿಶು ಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ ಎಲ್ಲರೂ ಕೈ ಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಪ್ರತಿಫಲವನ್ನು ನೀಡಿದ ಶ್ರೀ ಕೃಷ್ಣ ಅಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದ ವಾಗುವಂತೆ ಮಾಡಿದ ದ್ರೌಪದಿಯ ಮಾನ ಕಾಪಾಡುತ್ತಾನೆ. ಅಣ್ಣ ತಂಗಿಯ ಬಂಧನಕ್ಕೆ ಬೆಲೆಯನ್ನು ಕಟ್ಟಲಾಗದು, ಇಬ್ಬರು ಸದಾ ಬೆಂಬಲವಾಗಿ ನಿಲ್ಲುತ್ತಾರೆ.

ಅನುಪಮ.ಆರ್, 
ಪತ್ರಿಕೋದ್ಯಮ ವಿದ್ಯಾರ್ಥಿನಿ.

Leave a Reply

Your email address will not be published. Required fields are marked *

error: Content is protected !!