raksha bandhan; ಪವಿತ್ರ ಸಂಬಂಧದ ಹಬ್ಬ ರಕ್ಷಾ ಬಂಧನ- ಪ್ರಿಯಾಂಕ. ಯು, ವಿದ್ಯಾರ್ಥಿನಿ

ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಹಬ್ಬ ರಕ್ಷಾ ಬಂಧನ (raksha bandhan). ಭಾರತೀಯ ಧಾರ್ಮಿಕ ಸಂಸ್ಕೃತಿಯ ಪ್ರಕಾರ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯೆಂದು ಆಚರಿಸಲಾಗುತ್ತದೆ.

ಈ ಹಬ್ಬವು ಸಹೋದರ ಸಹೋದರಿಯರನ್ನು ಪ್ರೀತಿಯಲ್ಲಿ ಬಂಧಿಸುತ್ತದೆ. ಸಹೋದರಿ ತನ್ನ ಸಹೋದರನ ಹಣೆಯ ಮೇಲೆ ತಿಲಕವನ್ನು ಇರಿಸಿ ರಕ್ಷಣೆಯನ್ನು ಕೋರುತ್ತಾಳೆ. ಇದನ್ನು ರಾಖಿ ಎಂದು ಕರೆಯಲಾಗುತ್ತದೆ. ಹಿಂದೂ ಮತ್ತು ಜೈನರ ಹಬ್ಬವಾಗಿದ್ದು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ.

ರಕ್ಷಾಬಂಧನದಲ್ಲಿ ರಾಖಿ ಅಥವಾ ರಕ್ಷಾ ಸೂತ್ರ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ರಾಖಿಗಳನ್ನು ಕಚ್ಚಾ ಹತ್ತಿದಂತಹ ಹಗ್ಗದ ವಸ್ತುಗಳಿಂದ ಹಿಡಿದು ಬಣ್ಣ ಬಣ್ಣದ ರೇಷ್ಮೆ ದಾರ ಮತ್ತು ಚಿನ್ನ ಅಥವಾ ಬೆಳ್ಳಿಯಂತಹ ದುಬಾರಿ ವಸ್ತುಗಳವರೆಗೆ ಇರಬಹುದು.

ಯಾವುದೇ ಧರ್ಮ ಜಾತಿ, ದೇಶದ ಎಲ್ಲೇ ಮೀರಿ ಈ ಹಬ್ಬಕ್ಕೆ ನಿಜವಾದ ಬಂಧು ಬಳಗದ ಜೊತೆಗೆ ಹಲವಾರು ಭಾವನಾತ್ಮಕ ಸಂಬಂಧಗಳು ತಳಕು ಹಾಕಿಕೊಂಡಿವೆ. ಹಾಗೆ ಪ್ರತಿಯೊಂದು ಸಂಬಂಧವು ಜಾತಿ ಧರ್ಮಗಳ ಮೂಲಕ ತನ್ನದೇ ಆದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವಂತಹ ಈ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ.

ಪ್ರಿಯಾಂಕ. ಯು

ವಿದ್ಯಾರ್ಥಿನಿ

Leave a Reply

Your email address will not be published. Required fields are marked *

error: Content is protected !!