raksha bandhan; ಭಾವನೆಯ ಸಂಕೇತದ ಹಬ್ಬ ರಕ್ಷಾ ಬಂಧನ- ಆಫ್ರಿನ್, ವಿದ್ಯಾರ್ಥಿನಿ

ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದಂತಹ ಇತಿಹಾಸ ಮತ್ತು ಒಂದು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಇದನ್ನು ಹಿಂದುಗಳು ಆಚರಿಸುವ ಪ್ರಸಿದ್ಧ ಹಬ್ಬವಾಗಿ ಕಾಣಬಹುದು ರಕ್ಷಾ ಬಂಧನಕ್ಕೆ ರಾಕಿ ಹಬ್ಬ ಎಂದು ಸಹ ಹಾಡು ಭಾಷೆಯಲ್ಲಿ ಕರೆಯಲಾಗುತ್ತದೆ. ರಕ್ಷ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧ ಒಟ್ಟಾರೆಯಾಗಿ ರಕ್ಷಣೆಯ ಬಂಧ ರಕ್ಷಾ ಬಂಧನ (raksha bandhan) ಎಂದು ಹೇಳಬಹುದು.

ಸಹೋದರ ಮತ್ತು ಸಹೋದರಿಯ ಮಧ್ಯೆ ಪ್ರೀತಿ, ರಕ್ಷಣೆ, ಮತ್ತು ವಾತ್ಸಲ್ಯವು ಗಟ್ಟಿಗೊಳಿಸುತ್ತದೆ ಸಹೋದರನ ಯೋಗ ಕ್ಷೇಮ ಹಾಗೂ ಒಳಿತಾಗುವುದರ ಬಗ್ಗೆ ದೇವರಲ್ಲಿ ಪ್ರಾರ್ಥಿಸುತ್ತಾ ರಾಖಿ ಕಟ್ಟುತ್ತಾಳೆ. ದುಷ್ಟರಿಂದ ಅಥವಾ ಕೆಟ್ಟವರಿಂದ ರಕ್ಷಿಸಲು ಸಹೋದರನು ಪ್ರತಿಜ್ಞೆ ಮಾಡುತ್ತಾನೆ ಆ ರಾಖಿನಲ್ಲಿ ಅಪಾರ ಶಕ್ತಿ ಇದೆ ಎಂದು ಭಾವಿಸುತ್ತಾರೆ.

ಈ ರಕ್ಷಾ ಬಂಧನಕ್ಕೆ ಸಂಬAಧಿಸಿದAತೆ ಪ್ರಸಿದ್ಧವಾದಂತಹ ಕಥೆಗಳು ಈ ಮಹಾಭಾರತದಿಂದ ಬಂದಿದೆ ಪಾಂಡವರ ಪತ್ನಿ ತನ್ನ ಸೀರೆಯ ಒಂದು ತುದಿಯನ್ನು ಶ್ರೀಕೃಷ್ಣನ ಬೆರಳಿಗೆ ಕಟ್ಟಿದಾಗ ದತ್ತ ಸಾವವನ್ನು ನಿಲ್ಲಿಸಿದಳು. ಇದನ್ನು ಕಂಡ ಕೃಷ್ಣನು ಯಾವಾಗಲೂ ರಕ್ಷಿಸುತ್ತೇನೆ ಎಂದು ಭರವಸೆ ಪ್ರಮಾಣವನ್ನು ನೀಡಿದನು ಹಾಗೆಯೇ ಇಂದ್ರನ ಪತಿ ಇಂದ್ರಾಣಿಯು ಅವನ ಕೈಗೆ ಅಳದಿದ್ದಾರವನ್ನು ಕಟ್ಟಿದಳು ಇದರಿಂದ ತನ್ನ ರಾಜ್ಯವನ್ನು ಮರಳಿ ಪಡೆಯಲು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಹೀಗೆ ಹಲವಾರು ಪೌರಾಣಿಕ ಕಥೆಗಳಲ್ಲಿ ಕಾಣಬಹುದು.

ರಕ್ಷಾ ಬಂಧನ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಸುಪ್ರಭಾತ ಬಟ್ಟೆಯನ್ನ ಹಾಕಿಕೊಂಡು ರಾಕಿಯನ್ನು ತಟ್ಟೆಯಲ್ಲಿ ಇಟ್ಟುಕೊಂಡು ಅಲಂಕರಿಸಿ ಸಹೋದರನ ಹಣೆಯ ಮೇಲೆ ತಿಲಕವನ್ನು ಇಟ್ಟು ಬಲಗೈಗೆ ರಾಖಿ ಕಟ್ಟಿ ಅವನ ನಿರ್ವಹಿಸಿ ಮತ್ತು ಯೋಗ ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಸಹೋದರನಿಗೆ ಆರತಿಯನ್ನು ಮಾಡಿ ಸಿಹಿಯನ್ನು ತಿನಿಸುವಂತ ಪದ್ಧತಿಯನ್ನು ಕಾಣಬಹುದಾಗಿದೆ ಈ ರಕ್ಷಾ ಬಂಧನವನ್ನು ವರ್ಷಕ್ಕೆ ಒಂದು ಬಾರಿ ಅಣ್ಣ ತಂಗಿ ಹಾಗೂ ಒಡಹುಟ್ಟಿದವರಾಗಿರಬಹುದು ಹಾಗೆಯೇ ಬೇರೆಯವರ ಮಧ್ಯೆ ಒಂದು ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ .

ಈ ದಿನದಂದು ಸಹೋದರಿಯರಿಗೆ ಚಾಕ್ಲೆಟ್ ಗಳು ,ಹಣ,ಉಡುಪುಗಳು ಹೀಗೆ ಉಡುಗೊರೆ ಯಾಗಿ ಕೊಡಲಾಗುತ್ತದೆ. ಒಂದೊAದು ಕುಟುಂಬದ ಸದಸ್ಯರು ಸೇರಿ ಒಂದೇ ತರಹದ ಭಟ್ಟೆ ಗಳನ್ನ ಧರಿಸುತ್ತಾರೆ .ಬಣ್ಣ ಬಣ್ಣದ ರಾಖಿ ಗಳನ್ನಾ ಖರೀದಿಸುತ್ತಾರೆ ಇಲ್ಲವೆಂದರೆ ಪ್ರೀತಿಯಿಂದ ತನ್ನ ಕೈಯಾರೆ ತಯಾರಿಸಿ ಆನಂದದಿAದ ಆಚರಿಸುತ್ತಾರೆ.

ಆಫ್ರಿನ್ ಎಸ್

Leave a Reply

Your email address will not be published. Required fields are marked *

error: Content is protected !!