ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲ ಹಗರಣಗಳ ಮರು ತನಿಖೆ – ಡಿಕೆ ಶಿವಕುಮಾರ್
ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಎಲ್ಲ ಹಗರಣಗಳ ಮರು ತನಿಖೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಬಸ್ಸು ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಓರ್ವ ಶಾಸಕ ತನ್ನ ಕಾರು ಚಾಲಕನನ್ನು ಕೊಲೆ ಮಾಡಿಸಿದ್ದಾನೆಂದು ಸರ್ಕಾರದ ಭಾಗವೇ ಆಗಿರುವ
ಸಚಿವರೊಬ್ಬರು ಆರೋಪಿಸಿದ್ದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದರು.
ಪಿಂಪ್, ಕೊಲೆ ಅಂತೆಲ್ಲಾ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಸಚಿವ ಮುರುಗೇಶ ನಿರಾಣಿ, ವಿಪ ಸದಸ್ಯ ವಿಶ್ವನಾಥ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರೂ ಬಿಜೆಪಿ ಸರ್ಕಾರ ಅಂತಹವರ ವಿರುದ್ಧ ಕೇಸ್ ದಾಖಲಿಸುವುದಿ
ರಲಿ, ನೋಟೀಸ್ ಸಹ ನೀಡಲಿಲ್ಲ. ಒಬ್ಬ ಶಾಸಕನಲ್ಲಿ ಕೆಲಸಕ್ಕಿದ್ದ ಕಾರು ಚಾಲಕನ ಕೊಲೆ ಬಗ್ಗೆ ಸಚಿವನ ಆರೋಪವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕೇಸ್ ದಾಖಲಿಸಲಿ. ಇಲ್ಲದಿದ್ದರೆ ನಮಗೂ ಅವಕಾಶ ಸಿಗುತ್ತದೆ. ಬಿಜೆಪಿ ಸರ್ಕಾರ
ದ ಎಲ್ಲಾ ಹಗರಣ, ಪ್ರಕರಣಗಳ ಮರು ತನಿಖೆ ನಡೆಸುವುದಂತೂ ನಿಶ್ಚಿತ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷವು ವ್ಯಕ್ತಿ ಪೂಜೆಯನ್ನು ಯಾವತ್ತಿಗೂ ಮಾಡುವುದಿಲ್ಲ. ಪಕ್ಷ ಪೂಜೆಯನ್ನು ಮಾಡುತ್ತದೆ. ಇದನ್ನೆಲ್ಲಾ ನೀವು ಗಮನದಲ್ಲಿಟ್ಟುಕೊಳ್ಳಬೇಕೆಂಬ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟಿಕೆಟ್ ಆಕಾಂಕ್ಣಿಗಳಿಗೆ ಸೂಚ್ಯವಾಗಿ ರವಾನಿಸಿದರು. ಕಾಂಗ್ರೆಸ್ಸಿನಲ್ಲಿ ವ್ಯಕ್ತಿ ಪೂಜೆ ಇಲ್ಲ. ನಮ್ಮದೇನಿದ್ದರೂ ಪಕ್ಷ ಪೂಜೆ ಎಂಬುದು ಗಮನದಲ್ಲಿರಲಿ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ 10-15 ಜನ ಆಕಾಂಕ್ಷಿಗಳಿದ್ದೇ ಇರುತ್ತಾರೆ. ಹಾಗೆಂದು ಎಲ್ಲರಿಗೂ ಅವಕಾಶ ಸಿಗುವುದೂ ಕಷ್ಟ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಬೇಕಾದಷ್ಟು ಅವಕಾಶ ಸಿಕ್ಕೇ ಸಿಗುತ್ತದೆ. ಪಾಲಿಕೆ, ನಿಗಮ ಮಂಡಳಿ
ಅಧ್ಯಕ್ಷ ಸ್ಥಾನ, ಎಂಪಿ, ಎಂಎಲ್‌ಎಸ್, ಎಂಎಲ್‌ಸಿ ಹೀಗೆ ಒಂದಲ್ಲ ಒಂದು ಅವಕಾಶ ಸಿಗುತ್ತವೆ. ತಾಳ್ಮೆ, ಒಗ್ಗಟ್ಟಿನಿಂದ ಎಲ್ಲರೂ ಸಂಘಟಿತರಾಗಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಽಕಾರಕ್ಕೆ ತರಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಜೊತೆಗೆ ಸೇರಿ ಸರ್ಕಾರ ಮಾಡಿದೆವು. ಆದರೆ, ಬಿಜೆಪಿಯವರು ಆಪರೇಷನ್ ಕಮಲ ಮಾಡಿ, ಸರ್ಕಾರ ರಚಿಸಿದರು. ಅಽಕಾರ ಯಾವ ಕಾರಣಕ್ಕೆ ಮಾಡಿದರು? ತಮ್ಮದು ಡಬಲ್ ಇಂಜಿನ್ ಸರ್ಕಾರವೆಂದು ನಿಮ್ಮ ಸೇವೆ ಮಾಡುತ್ತೇವೆಂದು ಹೊರಟರು. ಆದರೆ, ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಲಿಲ್ಲ. ನಿಮ್ಮ ಜಿಲ್ಲೆಯ ನಾಯಕತ್ವದ ಬಗ್ಗೆ ನಂಬಿಕೆ ಇಲ್ಲದ, ನಿಮ್ಮ ಜಿಲ್ಲೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲವೆಂಬುದಕ್ಕೆ ಸಾಕ್ಷಿ ಇದು ಎಂದು ಅವರು ಟೀಕಿಸಿದರು.
ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹತ್ತಾರು ಕೋಟಿ ಖರ್ಚು ಮಾಡಿ, ಜನರಿಗೆ ಉಚಿತವಾಗಿ ಲಸಿಕೆ ಕೊಟ್ಟರು. ನರೇಂದ್ರ ಮೋದಿ, ಯಡಿಯೂರಪ್ಪ ಸರ್ಕಾರಕ್ಕೂ ಲಸಿಕೆಯ ನ್ನು ಕೊಡಲಾಗಲಿಲ್ಲ. ತಮ್ಮ ಸ್ವಂತ ಹಣವನ್ನು ಜನರ ಜೀವ ಉಳಿಸಲು ಸಂಕಲ್ಪ ಮಾಡಿ, ಸೇವೆ ಮಾಡಿಕೊಂಡು ಬಂದವರು ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ. ಹಿರಿಯರ ಬಗ್ಗೆ ನಮಗೆ ಗೌರವ ಇದೆ. ದೇಶ, ರಾಜ್ಯದಲ್ಲಿ ರೈತರ ಪರ ನಿಂತು, ಕಾರ್ಮಿಕರು, ರೈತರು, ವರ್ತಕರಿಗೆ ಸ್ಪಂದಿಸಿವೆ. ಆಹಾರ, ಲಸಿಕೆ, ಅಂಬ್ಯುಲೆನ್ಸ್ ಕೊಟ್ಟು ಸ್ಪಂದಿಸಿದೆವು. ಆದರೆ, ಬೀದಿ ವ್ಯಾಪಾರಸ್ಥರು, ಎಲ್ಲಾ ಕೆಲಸಗಾರರಿಗೆ 10 ಸಾವಿರ ಖಾತೆಗೆ ಹಾಕಿ ಅಂದೆವು. ಯಾರಿಗಾದರೂ ಹಣ ಬಂತಾ? ರೈತರಿಗೆ ಬಂತಾ? ಬೆಳೆಯನ್ನು ನಿಯಂತ್ರಿಸಲಾಗಲಿಲ್ಲ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಡಿಕೆಶಿ ಹರಿಹಾಯ್ದರು.