ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನ ಕೊವಿಡ್ ನಿಂದ ರಕ್ಷಿಸಿ – ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಡಾ.ಎಚ್.ಕೆ.ಎಸ್. ಸ್ವಾಮಿ

 

ದಾವಣಗೆರೆ: ದೇಶದಲ್ಲಿ ಬಹಳಷ್ಟು ತಾಯಂದಿರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಕರೋನಾದ 3 ನೇ ಅಲೆಯಿಂದ ಅವರನ್ನು ರಕ್ಷಿಸಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್. ಸ್ವಾಮಿ ಹೇಳಿದರು.

ಇಲ್ಲಿನ ತರಳಬಾಳು ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ‘ತಾಯಿ ಮಕ್ಕಳ ಆರೋಗ್ಯ ರಕ್ಷಿಸಿ’ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌಷ್ಟಿಕಾಂಶದ ಕೊರತೆಯಿದ್ದವರಿಗೆ ಕರೋನಾ ರೋಗ ನಿರೋಧಕ ಶಕ್ತಿಯನ್ನ ಕಡಿಮೆಗೊಳಿಸುತ್ತದೆ. ಹಾಗಾಗಿ, ಕರೋನ 3ನೇ ಅಲೆ ಹರಡಲು ಸಹಕಾರಿಯಾಗುತ್ತದೆ. ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಮತ್ತು ಅವರ ಪೌಷ್ಟಿಕಾಂಶಗಳ ಬಗ್ಗೆ ಗಮನ ಹರಿಸಬೇಕು. ಬಡತನ ಹೆಚ್ಚಾಗಿರುವ ಹಳ್ಳಿಗಳಲ್ಲಿ, ಅಪೌಷ್ಠಿಕತೆ ಹೆಚ್ಚಾಗಿದ್ದು, ರಕ್ತಹೀನತೆ, ತೂಕ ಕಡಿಮೆ ಇರುವುದು, ಕಂಡುಬರುತ್ತದೆ. ಅಂತವರಿಗೆ ಸರಿಯಾಗಿ ಪೌಷ್ಠಿಕಾಂಶಗಳನ್ನು ನೀಡಿ, ಆರೋಗ್ಯವನ್ನು ಸುಧಾರಿಸಿದರೆ, ಮಾತ್ರ 3 ನೇ ಅಲೆಯಿಂದ ನಾವು ಮಕ್ಕಳನ್ನು ರಕ್ಷಿಸಬಹುದು ಎಂದು ಹೇಳಿದರು.

ಹಲವು ಗ್ರಾಮಗಳಲ್ಲಿ ಇದುವರೆಗೂ ಮಕ್ಕಳು ಮಾಸ್ಕ್ ಧರಿಸುವುದಿಲ್ಲ, ಸಾಮಾಜಿಕ ಅಂತರ ಇಟ್ಟುಕೊಳ್ಳುವುದಿಲ್ಲ, ತಾಯಂದಿರು ಮಕ್ಕಳಿಗೆ ಅದರ ಬಗ್ಗೆ ತಿಳಿವಳಿಕೆ ನೀಡುತ್ತಿಲ್ಲ, ಹಾಗಾಗಿ ಅಲ್ಲಿ ಹೆಚ್ಚು ಕರೋನ ಹಬ್ಬಲು ಅವಕಾಶವಿದೆ. ಈಗ ಹಳ್ಳಿಗಳಿಗೆ ಮಕ್ಕಳ ವೈದ್ಯರನ್ನು ಕರೆದುಕೊಂಡು ಹೋಗುತ್ತಿರುವ ಜನಜಾಗೃತಿ ಕಾರ್ಯಕ್ರಮದಲ್ಲಿ, ಮಕ್ಕಳಿಗೆ ಪೌಷ್ಟಿಕಾಂಶಗಳನ್ನು ನೀಡುವಂಥ ವ್ಯವಸ್ಥೆ ಆಗಬೇಕು ಎಂದರು.

ಶಾಲೆಗಳಲ್ಲೂ ಸಹ ಹಾಲಿನ ಪುಡಿ, ಮೊಳಕೆ ಬರಿಸಿದ ಕಾಳು, ಹಸಿ ತರಕಾರಿ, ಸೊಪ್ಪು, ಕ್ಯಾರೆಟ್, ಹಣ್ಣು ನೀಡಿ ಅವುಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಮಕ್ಕಳಿಗೆ ಸರಿಯಾಗಿ ಉಗುರುಗಳನ್ನು ಸ್ವಚ್ಛವಾಗಿಡುವುದು, ದಿನಕ್ಕೊಮ್ಮೆ ಸ್ನಾನ ಮಾಡಿಸುವುದು, ಕೈಕಾಲುಗಳನ್ನು ತೊಳೆಯುವುದು, ಸ್ವಚ್ಚವಾದ ವಸ್ತ್ರ ಧರಿಸುವುದು. ತಲೆಗೆ ಎಣ್ಣೆ ಹಾಕಿ ತಲೆ ಬಾಚುವುದು, ಚಪ್ಪಲಿ ಹಾಕಿಕೊಂಡು ಓಡಾಡುವುದು, ಶೌಚಾಲಯ ಬಳಕೆ ಮಾಡುವುದು, ಊಟ ಮಾಡುವ ಮುಂಚೆ ಮತ್ತು ಶೌಚಾಲಯದ ನಂತರ ಸೋಪಿನಿಂದ ಕೈ ತೊಳೆದುಕೊಳ್ಳುವುದು, ಸ್ಯಾನಿಟೈಸರ್ ಬಗೆ ಸಹ ಅವರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಸಾಕಷ್ಟು ತಾಯಂದಿರುಗಳು ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಕೆಲಸಕ್ಕೆ ಗಾರ್ಮೆಂಟ್ಸ್ ಗಳಿಗೆ, ಮನೆ ಕಟ್ಟಲು, ಕೂಲಿಕಾರ್ಮಿಕರಾಗಿ ಹೊಲಗದ್ದೆಗಳಿಗೆ ಹೋದಾಗ. ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾಗ. ಮಕ್ಕಳ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕೆಲವು ಸಂಘ ಸಂಸ್ಥೆಗಳು ಸಹಾಯ ಮಾಡಬೇಕಾಗುತ್ತದೆ. ಕೆಲವು ತಾಯಂದಿರುಗಳು ಅನಕ್ಷರಸ್ಥರಾಗಿರುವುದರಿಂದ, ಅವರಿಗೆ ಕರೋನ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಯಿ ಮಕ್ಕಳ ಬಿತ್ತಿ ಪತ್ರಗಳನ್ನ ಪ್ರದರ್ಶಿಸಿ, ಹಾಡಿನ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಾವ್ಯ. ಜಾನವಿ, ಶ್ರೀನಿವಾಸ, ಸುರಕ್ಷಾ, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!