30 DDPI ವರ್ಗಾವಣೆ ಮಾಡಿದ ಶಾಲಾ ಶಿಕ್ಷಣ ಇಲಾಖೆ; ಜಿ. ಕೊಟ್ರೇಶ್ ದಾವಣಗೆರೆ ಡಿಡಿಪಿಐ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ  ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವರ್ಗಾಯಿಸಿ ಆದೇಶಿಸಿದೆ.

ವಿಜಯನಗರ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿದ್ದ ಜಿ. ಕೊಟ್ರೇಶ್ ಇವರನ್ನ ದಾವಣಗೆರೆ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಆಡಳಿತ) ಉಪ ನಿರ್ದೇಶಕ ಸ್ತಾನಕ್ಕೆ ವರ್ಗಾಯಿಸಿದೆ. ಇದುವರೆಗೂ ದಾವಣಗೆರೆ ಜಿಲ್ಲೆಯ ಡಿಡಿಪಿಐ ಆಗಿ ಕಾಯ್ ನಿರ್ವಹಿಸುತ್ತಿದ್ದ ಜಿ.ಆರ್ ತಿಪ್ಪೇಶಪ್ಪ ಇವರನ್ನು ಚಿತ್ರದುರ್ಗದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರು ಹುದ್ದೆಗೆ ವರ್ಗಾಯಿಸಿದೆ.

DDPI TRANSFER LIST.

Leave a Reply

Your email address will not be published. Required fields are marked *

error: Content is protected !!