ಆತ್ಮ ವಿಶ್ವಾಸವೇ ಯಶಸ್ವಿಗೆ ಸ್ಪೂರ್ತಿ – ಪ್ರೊ. S B ಮಲ್ಲೂರ್

ಆತ್ಮ ವಿಶ್ವಾಸವೇ ಯಶಸ್ವಿಗೆ ಸ್ಪೂರ್ತಿ - ಪ್ರೊ. S B ಮಲ್ಲೂರ್

ದಾವಣಗೆರೆ: ವಿದ್ಯಾರ್ಥಿಗಳ ಯಶಸ್ಸಿಗೆ ಮುಖ್ಯ ಮಾನದಂಡ ಆತ್ಮವಿಶ್ವಾಸ. ಯಾವುದೇ ಗುರಿಯನ್ನು ಎತ್ತರದ ಸ್ಥಾನದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ ಎಂದು ರೋಟರಿ ಕ್ಲಬ್ ದಾವಣಗೆರೆ ಮಿಡ್ ಟೌನ್ ಅಧ್ಯಕ್ಷರಾದ ಪ್ರೊ. S B ಮಲ್ಲೂರ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗಣಿತಶಾಸ್ತ್ರ ವಿಭಾಗದ ಪ್ರಾಯೋಗಿಕ ಕೊಠಡಿ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಈ ಸಂಸ್ಥೆಯಿಂದ ನೀಡಲಾದ ಗಣಕಯಂತ್ರಗಳ ಸದುಪಯೋಗವನ್ನು ಪಡೆದುಕೊಳ್ಳಿ. “ಬದಲಾವಣೆ ಆಗುವುದರ ಜೊತೆ ಬದಲಾಗಬೇಡಿ. ಬದಲಾಗುವ ಪೂರ್ವದಲ್ಲಿ ಬದಲಾಗಿ”. ಆತ್ಮವಿಶ್ವಾಸ ಯಶಸ್ಸಿಗೆ ಸ್ಪೂರ್ತಿ ಎಂಬ ಮಾತನ್ನು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು…

ವಿದ್ಯಾರ್ಥಿಗಳ ಕುರಿತು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಆರ್. ಅಂಜನಪ್ಪರವರು ದೀನ, ದಲಿತ, ಅಸಹಾಯಕರು ದೇವರಿಗೆ ಸಮಾನ ಇಂತವರಿಗೆ ತಮ್ಮ ದಾನವನ್ನು ನೀಡಬೇಕು.

ವಿದ್ಯಾರ್ಥಿಗಳ ಪ್ರತಿಭೆಗಳು ಮಣ್ಣಲ್ಲಿ ಮುಚ್ಚಿವೆ ಅವುಗಳನ್ನು ಹೆಕ್ಕಿ ತೆಗೆದು ಹೊಳಪನ್ನು ಕೊಡುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ತಿಳಿಸಿದರು.ನಂತರದಲ್ಲಿ ರೋಟರಿ ಜಿಲ್ಲೆ 3160 ಡಿಸ್ಟಿಕ್ ಲಿಟ್ರಸಿ ಛೇರ್ಮೆನ್ ಆದ ವಿಶ್ವಜಿತ್ ಕೆ ಜಾಧವ್ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್. ಆರ್. ಅಂಜನಪ್ಪ , ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾ ದೇವಿ, ರೋಟರಿ ಕ್ಲಬ್ನ ಅಸಿಸ್ಟೆಂಟ್ ಗೌರ್ನರ್ ಆದ ಮೃತ್ಯುಂಜಯಪ್ಪ ಮತ್ತು ದಾವಣಗೆರೆ ವಿದ್ಯಾನಗರ ರೋಟರಿ ಕ್ಲಬ್ ನ ಕಾರ್ಯದರ್ಶಿಗಳಾದ ಎಸ್. ಎನ್. ಮಳವಳ್ಳಿ , ರೇವಣ್ಣ, ರಾಘವೇಂದ್ರ, ಚಂದ್ರಪ್ಪ ಶೇಖರ್, ಹಾಗೂ ಕಾರ್ಯಕ್ರಮದಲ್ಲಿ ಸಹ ಪ್ರಾದ್ಯಾಪಕರಾದ ಡಾ. ನಟರಾಜ್ ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು..

Leave a Reply

Your email address will not be published. Required fields are marked *

error: Content is protected !!