ಶಾಸಕ ರೇಣುಕಾಚಾರ್ಯರನ್ನ ಹೊಗಳಿದ ಮುಸ್ಲಿಂ ಮುಖಂಡರು…

ಹೊನ್ನಾಳಿ.ಜೂ.೩೦: ಮನುಷ್ಯ ಹುಟ್ಟಿದ ಮೇಲೆ ಸಾಯಲೇ ಬೇಕು, ಸಾಯುವುದರ ಒಳಗೆ ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಆತನ ಹೆಸರು ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಸಾಧ್ಯವಾಗುತ್ತದೆ ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಂದು ನ್ಯಾಮತಿ ಜಾಮೀಯ ಮಸೀದಿ ಧರ್ಮಗುರು ಅಸ್ಲಾಂ ಪಾಷ ಶಾಸಕರನ್ನು ಕೊಂಡಾಡಿದರು.
ನಗರದ ಗುರುಭವನದಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಮುಸ್ಲೀಂ ಸಮಾಜದ ಮುಖಂಡರ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯಲ್ಲಿ ಮಾತನಾಡಿದ ಧರ್ಮಗುರುಗಳು, ನಮ್ಮ ಸಮಾಜದಲ್ಲಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಇರುವುದು ನಿಜ, ಅದನ್ನು ಹೋಗಲಾಡಿಸಿ ಪ್ರತಿಯೊಬ್ಬರಿಗೂ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡ ಬೇಕಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಅವರು ಅವಳಿ ತಾಲೂಕಿನ ಜನರನ್ನು ತಮ್ಮ ಕುಟುಂಬಕ್ಕಿಂತ ಹೆಚ್ಚಿನ ರೀತಿ ಕಾಳಜಿ ಮಾಡುವ ಮೂಲಕ ನಮ್ಮನ್ನು ಆರೈಕೆ ಮಾಡಿದ್ದಾರೆ ಅಲ್ಲದೇ ಜಾಗೃತಿಯ ಸಂದೇಶ ಸಾರಿದ್ದಾರೆ, ಇಂತಹ ಮಹಾನ್ ವ್ಯಕ್ತಿಯ ಕೆಲಸಕ್ಕೆ ನಾವು ಕೂಡ ಸಾಥ್ ನೀಡಿ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡ ಬೇಕಿದೆ ಎಂದರು.
ನನ್ನ ಸ್ನೇಹಿತ ಕೊರೊನಾ ಸೋಂಕಿನಿಂದ ಮೃತಪಟ್ಟಾಗ ಖುದ್ದು ಶಾಸಕರೇ ಅಂಬ್ಯುಲೆನ್ಸ್ನಲ್ಲಿ ಮೃತ ದೇಹ ತಂದು, ಮೃತ ದೇಹ ಮುಟ್ಟದೇ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುವಂತೆ ಹೇಳಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಅವರ ಹೇಳಿದ ರೀತಿ ಅಂತ್ಯ ಸಂಸ್ಕಾರ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿದೆ ಎಂದರು.
ಹಗಲುರಾತ್ರಿ ಎನ್ನದೇ ಯಾವುದೇ ರಾಜಕೀಯ ಮಾಡದೇ ಪಕ್ಷಾತೀತವಾಗಿ ಧಣಿವರಿಯದ ನಾಯಕರಾಗಿ ಶಾಸಕರು ನಮಗಾಗಿ ಕೆಲಸ ಮಾಡುತ್ತಿದ್ದು ನಾವು ಅವರಿಗೆ ಸಹಕಾರ ನೀಡುವ ಮೂಲಕ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸ ಬೇಕೆಂದರು.
ಇದೇ ವೇಳೆ ಮಾತನಾಡಿದ ಹೊಸಹಳ್ಳಿ ಗ್ರಾಮದ ಮಹಮ್ಮದ್ ಅಲಿ, ವ್ಯಾಕ್ಸಿನ್ ತೆಗೆದುಕೊಂಡರೇ ಏನೋ ಆಗುತ್ತೇ ಎಂಬ ಭಯ ನಮ್ಮ ಸಮುದಾಯದಲ್ಲಿದ್ದು ನಾವೆಲ್ಲಾ ಜನರಿಗೆ ಜಾಗೃತಿ ಮೂಡಿಸ ಬೇಕಿದೆ ಎಂದರು. ಇದೂವರೆಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 70 ಸಾವಿರಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದು ಯಾರಾದರೂ ಸತ್ತೀದ್ದಾರ ಎಂದು ಪ್ರಶ್ನೇ ಮಾಡಿದ ಮಹಮ್ಮದ್ ಅಲಿ, ಲಸಿಕೆ ಹಾಕಿಸಿಕೊಳ್ಳುವವರು ಎಲ್ಲರೂ ಕೂಡ ಮನುಷ್ಯರೇ, ಅದಕ್ಕೆ ಯಾವುದೇ ಜಾತಿ ಭೇದ ಇಲ್ಲಾ ಎಂದರು. ಶಾಸಕರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದು, ಮುಸ್ಲಿಂ ಸಮುದಾಯದವರು ನಿಮಗೆ ಸದಾ ನಿಮಗೆ ಚಿರಋಣಿ ಎಂದ ಅವರು, ಮುಸ್ಲಿಂ ಸಮಾಜದ ಮುಖಂಡರು, ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳ ಬೇಕೆಂದರಲ್ಲದೇ, ಮಸೀದಿಯಲ್ಲಿನ ಮೈಕ್ ಮೂಲಕ ಅಥವಾ ವೈಯಕ್ತಿಕವಾಗಿ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸ ಬೇಕೆಂದರು.
ಕುಂದೂರಿನ ಫಾರೂಕ್ ಮಾತನಾಡಿ ಮನೆಯ ಯಜಮಾನ ಬಿಗಿ ಇದ್ದರೇ ನಾವೆಲ್ಲಾ ಚೆನ್ನಾಗಿರುತ್ತೇವೆ. ಇಷ್ಟೇಲ್ಲಾ ಜವಾಬ್ದಾರಿವಹಿಸಿ ಶಾಸಕರು ಕೆಲಸ ಮಾಡುತ್ತಿದ್ದಾರೆ ನಾವೂ ಕೂಡ ಅವರ ಜೊತೆ ಕೈ ಜೋಡಿಸಿ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡ ಬೇಕಿದೆ ಎಂದರು. ನಮ್ಮ ಜನರಲ್ಲಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಇದ್ದು, ನಾವೆಲ್ಲಾ ಅದನ್ನು ಹೋಗ ಲಾಡಿಸಿ ಲಸಿಕೆ ಹಾಕಿಸ ಬೇಕಿದೆ ಎಂದರು. ನಮ್ಮಿಂದ ಕೊರೊನಾ ಬೇರೆಯವರಿಗೆ ಹರಡ ಬಾರದು, ನಾವು ಚೆನ್ನಾಗಿ ಇರ ಬೇಕು, ಬೇರೆಯವರು ಚೆನ್ನಾಗಿರ ಬೇಕು ಆಗಿದ್ದಾಗ ಮಾತ್ರ ಕೊರೊನಾ ತಡೆಯ ಸಾಧ್ಯ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ ಲಸಿಕೆ ಬಗ್ಗೆ ಮುಸ್ಲಿಂ ಬಾಂದವರಲ್ಲಿನ ತಪ್ಪುಕಲ್ಪನೆ ನಿವಾರಣೆ ಆಗ ಬೇಕಿದೆ ಎಂದರಲ್ಲದೇ, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಒಟ್ಟಿಗೆ ಹೋಗ ಬೇಕಿದ್ದು ಎಲ್ಲರೂ ಲಸಿಕೋತ್ಸವಕ್ಕೆ ಕೈ ಜೋಡಿಸ ಬೇಕಿದೆ ಎಂದರು. ಲಸಿಕೋತ್ಸವ ಸದುಪಯೋಗ ಆಗ ಬೇಕೆಂದರೆ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳ ಬೇಕು ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ, ಸಿಪಿಐ ದೇವರಾಜ್, ತಹಶೀಲ್ದಾರ್ ತನುಜಾ ಟಿ ಸವದತ್ತಿ, ಎಸೈಗಳಾದ ಬಸವನಗೌಡ ಬಿರಾದರ್, ರಮೇಶ್, ಸಿಡಿಪಿಓ ಮಹಾಂತೇಶ್, ಮುಖ್ಯಾಧೀಕಾರಿ ಪಂಪಾಪತಿ ಸೇರಿದಂತೆ ಮತ್ತೀತತರಿದ್ದರು.