DC VIDEO: 3 ನೇ ಅಲೆ ಎದುರಿಸಲು ಜಾಗೃತರಾಗಿ, ಕೊವಿಡ್ ಲಸಿಕೆ ಪಡೆಯಿರಿ : ಜಿಲ್ಲಾಧಿಕಾರಿ ವಿಡಿಯೋ ಮೂಲಕ ಮನವಿ

Watch DC Video Message to Public
ದಾವಣಗೆರೆ: ಮೂರನೇ ಅಲೆ ಎದುರಿಸಲು ಜನರು ಯಾವುದೇ ಗೊಂದಲಕ್ಕೊಳಗಾಗದೇ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ ನಲ್ಲಿ ಕರೋನಾ ಮೂರನೇ ಅಲೆ ಬರುವ ಸಾಧ್ಯತೆ ಇರುವುದಾಗಿ ತಜ್ಞರ ತಂಡ ಅಂದಾಜಿಸಿದ್ದು, ಈಗಾಗಲೇ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಅದು ನಮ್ಮ ಜಿಲ್ಲೆಗೆ ಕಾಲಿಡದಂತೆ ತಡೆಯುವ ಹೊಣೆ ಈಗ ಜಿಲ್ಲೆಯ ಜನರದ್ದು, ಅದಕ್ಕಾಗಿ ಅಗತ್ಯ ಸುರಕ್ಷತಾ ಕ್ರಮದ ಜತೆಗೆ, ಲಸಿಕೆ ಪಡೆಯಿರಿ ಎಂದು ವೀಡಿಯೋ ಮೂಲಕ ಸಂದೇಶ ಮೂಲಕ ಕೋರಿಕೊಂಡಿದ್ದಾರೆ.
ಕೆಲವರು ಲಸಿಕೆ ಬಗೆಗಿನ ಗೊಂದಲದಿಂದ ಲಸಿಕೆ ಪಡೆಯಲಿಲ್ಲ. ಇದರಿಂದ ಅನೇಕ ಸಾವು-ನೋವು ಸಂಭವಿಸಿದವು. ಈಗ ಮೂರನೇ ಅಲೆ ಬರುವ ಸಾಧ್ಯತೆ ಇದ್ದು, ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಪೋಷಕರು ಲಸಿಕೆ ಪಡೆಯುವುದೊಂದೆ ಕರೋನಾ ನಾಶ ಪಡಿಸಲು ಇರುವ ಮಾರ್ಗ ಎಂದು ಸಲಹೆ ನೀಡಿದ್ದಾರೆ.
ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಪಟ್ಟಣಗಳು ಸೇರಿದಂತೆ ಕೆಲವೆಡೆ ಜನರು ಸೋಂಕು ಸಂಪೂರ್ಣ ಹೋಗಿದೆ ಎಂದುಕೊಂಡು ಸುರಕ್ಷತಾ ಕ್ರಮ ಅನುಸರಿಸದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಇನ್ನೇನೂ ಮೂರನೇ ಅಲೆಯ ಬಗ್ಗೆಯೂ ತಜ್ಞರು ತಿಳಿಸಿದ್ದು, ಜನರು ಮಾರ್ಗಸೂಚಿ ಅನುಸಾರ ನಡೆದುಕೊಂಡು ಕರೋನಾ ಮುಕ್ತ ಮಾಡಲು ನಮ್ಮೊಂದಿಗೆ ಸಹಕರಿಸಿ ಎಂದು ಕೋರಿದ್ದಾರೆ.