ಸೂಳೆಕೆರೆ ಭದ್ರನಾಲಾ ಏರಿ ಮಣ್ಣು ಸಾಗಾಟ! ಜಲ ಸಂಪನ್ಮೂಲ ಇಲಾಖೆ ಏನ್ಮಾಡ್ತಿದೆ?
ದಾವಣಗೆರೆ: ಅಕ್ರಮ ಮಣ್ಣು ಸಾಗಾಟ ದಂಧೇಕೋರರ ಹಾವಳಿ ಹೆಚ್ಚಾಗುತ್ತಿದೆ. ಹೇಳೋರು ಕೇಳೋರಿಲ್ಲ ಎಂಬ ಧೈರ್ಯದ ಮೇಲೆ ಸರ್ಕಾರಿ ಸ್ವತ್ತನ್ನೇ ಟಾರ್ಗೇಟ್ ಮಾಡಿ ಕೆರೆ, ಕಟ್ಟೆ, ಭದ್ರಾ ನಾಲೆಗೆ ತಡೆಗೋಡೆಯಂತಿರುವ ಮಣ್ಣನ್ನು ದಂಧೇಕೋರರು ಬಗೆದು ಬರಡಾಗಿಸುತ್ತಿದ್ದಾರೆ. ಸೂಳೆಕೆರೆಯ ಭದ್ರಾ ನಾಲೆ ಪರಿಮಿತಿಯಲ್ಲಿರುವ ಸರ್ಪೋಟಿಂಗ್ ವಾಲ್‌ನಂತಿರುವ ಏರಿ ಮಣ್ಣನ್ನು ಕೆಲವು ಜನರು ತಮ್ಮ ವಯಕ್ತಿಕ ಕೆಲಸಗಳಿಗಾಗಿ ಬಗೆಯುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಜಲಸಂಪನ್ಮೂಲ ಇಲಾಖೆ ಕೂತಿದೆ.
ಸೂಳೆಕೆರೆ ಭದ್ರಾ ನಾಲಾ ವ್ಯಾಪ್ತಿಯಲ್ಲಿದ್ದ ಏರಿ ಮಣ್ಣನ್ನು ಜೆಸಿಬಿ ಮೂಲಕ ಅಗೆದು ತುಂಬುತ್ತಿದ್ದವರನ್ನ ಪ್ರಜ್ಞಾವಂತ ಜನರು ತಡೆದಿರುವ ಘಟನೆ ನಡೆದಿದೆ. ಅಕ್ರಮ ಮಣ್ಣು ಸಾಗಾಟ ಮಾಡುವವರದ್ದು ದಿನ ಇದೇ ಕೆಲಸ, ಒಂದು ದಿನವಾದರೂ ಸಂಬಂಧಪಟ್ಟ ಅಧಿಕಾರಿಗಳು ಬಂದು ತಡೆಯಲಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಸುಮಾರು 150 ಮೀಟರ್ ನಷ್ಟಿದ್ದ ಸರ್ಪೋಟಿಂಗ್ ವಾಲ್ ನಂತಿದ್ದ ಏರಿ ಮಣ್ಣನ್ನು ಖಾಲಿ ಮಾಡಲಾಗಿದ್ದು, ಇನ್ನೂ ಕೇವಲ 2 ರಿಂದ 3 ವರ್ಷದೊಳಗೆ ಇಲ್ಲಿನ ಸಂಪೂರ್ಣ ಗ್ರಾವೆಲ್ ಮಣ್ಣು ಖಾಲಿಯಾದರೂ ಅಚ್ಚರಿಪಡುವಂತಿಲ್ಲ.
ಭದ್ರಾ ನಾಲಾ ಪರಿವ್ಯಾಪ್ತಿ ಅಡಿಯಲ್ಲಿ ಬರುವ ಏರಿ ಮಣ್ಣನ್ನು ದಿನಂಪ್ರತಿ ಕಳ್ಳತನದಿಂದ ಸಾಗಾಣಿಕೆ ಮಾಡಲಾಗುತ್ತಿದ್ದು, ಸಂಬಂಧಪಟ್ಟ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಕಮೀಷನ್ ದಂಧೆಯಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರಾ ಎನ್ನುವ ಅನುಮಾನ ಮೂಡುತ್ತದೆ. ಜೂನ್ 10 ರಂದು ದಾವಣಗೆರೆ ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇಲಾಖೆಯ ಚಿಕ್ಕತೊಗಲೇರಿ, ಹಿರೇತೊಗಲೇರಿ ಹಾಗೂ ಕುರ್ಕಿ ಗ್ರಾಮಗಳ ವ್ಯಾಪ್ತಿಗಳ ಭದ್ರಾ ನಾಲಾ ಪರಿ ವ್ಯಾಪ್ತಿಯಡಿಯಲ್ಲಿರುವ ಏರಿ ಮಣ್ಣನ್ನು ಕೆಲವು ಜನರು ತಮ್ಮ ವಯಕ್ತಿಕ ಕಾರಣಗಳಿಗಾಗಿ ಕಳ್ಳತನದಿಂದ ಸಾಗಿಸುತ್ತಿರುವ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಇಂದು ಸೂಳೆಕರೆ ಭದ್ರಾನಾಲಾ ವ್ಯಾಪ್ತಿಯಲ್ಲಿ. ಕೆಲವು ಕಡೆ ನಡೆಯುತ್ತಿದ್ದರೂ ಜನರ ಬೇಜವಾಬ್ದಾರಿತನ, ನಮಗ್ಯಾಕೆ ಬೇಕು ಎನ್ನುವ ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಹಾಗಾಗಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
garudavoice21@gmail.com 9740365719