2018-19ರಲ್ಲಿ ನಿರ್ಮಿಸಿದ ಅರಬಘಟ್ಟೆ ಬಸ್ ನಿಲ್ದಾಣ ಬೀಳುವ ಹಂತದಲ್ಲಿದೆ! ಸಂಸದ ಜಿ.ಎಂ. ಸಿದ್ದೇಶ್ವರ್ ಅನುದಾನದಲ್ಲಿ ದಾವಣಗೆರೆ ನಿರ್ಮಿತಿ ಕೇಂದ್ರದ ಕಾಮಗಾರಿ

ದಾವಣಗೆರೆ: ಸರ್ಕಾರದಿಂದ ಕೈಗೊಂಡ ಯಾವುದೇ ಕಾಮಗಾರಿಗಳು ಬಹುಕಾಲದವರೆಗೆ ಬಾಳಿಕೆ ಬರುವುದು ಕಷ್ಟ. ಅಭಿವೃದ್ದಿ ಹೆಸರಿನಲ್ಲಿ ಸರ್ಕಾರದಿಂದ ಲಕ್ಷಾಂತರ ರೂಗಳ ಅನುದಾನ ಜಾರಿಗೊಳಿಸಿಕೊಂಡು ಲಪಟಾಯಿಸುವ ತಂತ್ರ ಅನುಸರಿಸುತ್ತಾರೆ ಎನ್ನುವುದಕ್ಕೆ ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತದೆ.

ಹೊನ್ನಾಳಿ ತಾಲೂಕಿನ ಅರಬಘಟ್ಟೆ ಕ್ರಾಸ್ ಬಳಿ ನಿರ್ಮಿಸಿರುವ ಬಸ್ ನಿಲ್ದಾಣ ಸಂಪೂರ್ಣ ಕಳಪೆಯಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಅನುದಾನದಲ್ಲಿ ಈ ಬಸ್ ನಿಲ್ದಾಣ ಕಾಮಗಾರಿ ಕೈಗೊಂಡಿದ್ದು, ಈ ಬಸ್ ನಿಲ್ದಾಣ ನಿರ್ಮಾಣಕ್ಕೆ 3 ಲಕ್ಷ ವೆಚ್ಚ ಮಾಡಲಾಗಿದೆ. 2018-19ನೇ ಸಾಲಿನಲ್ಲಿ ದಾವಣಗೆರೆ ನಿರ್ಮಿತಿ ಕೇಂದ್ರ ಕಾಮಗಾರಿ ಮಾಡಿದ್ದು ಬೀಳುವ ಹಂತದಲ್ಲಿದೆ. ಬಸ್ ನಿಲ್ದಾಣದ ಗೋಡೆ, ಮೇಲ್ಚಾವಣಿ ಸೇರಿದಂತೆ ಅಲ್ಲಲ್ಲಿ ಸಿಮೆಂಟ್ ಕಿತ್ತು ಹೋಗಿದ್ದು ಬೀಳುವ ಹಂತದಲ್ಲಿದೆ. ಅಷ್ಟೇಅಲ್ಲದೆ ಬಸ್ ನಿಲ್ದಾಣದ ಮೂಲೆಗಳಲ್ಲಿ ಬಿರುಕು ಬಿಟ್ಟಿದ್ದು ಜೋರಾದ ಗಾಳಿ ಬೀಸಿದರೆ ಇಡೀ ಬಸ್ ನಿಲ್ದಾಣವೇ ಧರೆಗುರುಳಲಿದೆ.

ಸರ್ಕಾರದಿಂದ ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಅನುದಾನದಿಂದ ಕೈಗೊಳ್ಳುವ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ ಎಂಬುದಕ್ಕೆ ಬೀಳುವ ಹಂತದಲ್ಲಿರುವ ಈ ಬಸ್ ನಿಲ್ದಾಣವೇ ನಿದರ್ಶನ. ದಾವಣಗೆರೆ ನಿರ್ಮಿತಿ ಕೇಂದ್ರದಿ0ದ ಈ ಕಾಮಗಾರಿ ನಡೆದಿದ್ದು, ಬಸ್ ನಿಲ್ದಾಣ ಬೀಳುವ ಹಂತದಲ್ಲಿದ್ದರು ಇಲ್ಲಿಯವರೆಗೆ ಸಂಸದರ ಗಮನಕ್ಕೆ ಬಂದಿಲ್ಲವೇ, ಬಸ್ ನಿಲ್ದಾಣ ಕಾಮಗಾರಿ ಕೈಗೊಂಡು 4 ವರ್ಷ ಬಾಳಿಕೆ ಬರಲಿಲ್ಲವೆಂದರೆ ಹೇಗೆ? ಇದಕ್ಕೆಲ್ಲ ಈಗ ಉತ್ತರವನ್ನು ಸರ್ಕಾರ ಕೊಡಬೇಕೋ? ಸಂಸದರು ಕೊಡಬೇಕೋ? ಅಥವಾ ದಾವಣಗೆರೆ ನಿರ್ಮಿತಿ ಕೇಂದ್ರ ಕೊಡಬೇಕೋ? ಯಾರು ಈ ಕಳಪೆ ಕಾಮಗಾರಿಗೆ ಹೊಣೆ.

ಒಂದು ಕಾಮಗಾರಿ ಕೈಗೊಂಡರೆ ಇಷ್ಟೇ ವರ್ಷ ಬಾಳಿಕೆ ಬರಬೇಕು, ಇಷ್ಟು ಪ್ರಮಾಣದಲ್ಲಿ ಸಿಮೆಂಟ್, ಜಲ್ಲಿ, ಸರಳು, ಇತ್ಯಾದಿ ಪರಿಕರಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ನಿಯಮಗಳಿದ್ದರು. ಹಣದ ಆಸೆಗಾಗಿ ಹಾಗೂ ಜನರ‍್ಯಾರು ಕೇಳೋಲ್ಲ ಎಂಬ ಭಂಡ ಧೈರ್ಯದಿಂದ ಈ ರೀತಿಯ ಕೆಲಸಗಳು ನಡೆಯುತ್ತಲೇ ಇವೆ. ಜನ ಎಚ್ಚೆತ್ತು ಇಂತಹ ಕಳಪೆ ಕಾಮಗಾರಿ ಕೈಗೊಂಡವರ ವಿರುದ್ದ ದೂರು ದಾಖಲಿಸಲು ಮುಂದಾಗಬೇಕು. ಏಕೆಂದರೆ ಈ ಕಾಮಗಾರಿ ಕೈಗೊಳ್ಳುವುದೇ ಜನರ ಹಣದಿಂದ ಎಂಬುದನ್ನು ಮರೆಯಬಾರದು.

ದಾವಣಗೆರೆ ನಿರ್ಮಿತಿ ಕೇಂದ್ರದಿ0ದ ಸೂರಗೊಂಡನಕೊಪ್ಪದ ಮದ್ಯವರ್ಜನ ಶಿಬಿರ ಕೇಂದ್ರ ನಿರ್ಮಿಸಿದ್ದು, ಅದು ಕೂಡಾ ಕಳಪೆಯಾಗಿರುವ ಕುರಿತು ಜೂನ್ 10ರಂದು ಪ್ರಕಟಿಸಲಾಗಿತ್ತು. ಈಗ ಹೊನ್ನಾಳಿ ತಾಲೂಕಿನ ಅರಬಘಟ್ಟೆ ಕ್ರಾಸ್ ಬಳಿಯ ಈ ಬಸ್ ನಿಲ್ದಾಣವೂ ಕಳಪೆಯಾಗಿದ್ದು, ಬಸ್ ನಿಲ್ದಾಣದ ಕಾಮಗಾರಿಯೂ ದಾವಣಗೆರೆ ನಿರ್ಮಿತಿ ಕೇಂದ್ರದಿ0ದ ಮಾಡಿದ್ದು, ಇದು ಸಹ ಕಳಪೆ ಗುಣಮಟ್ಟದಲ್ಲಿದ್ದು, ಬೀಳುವ ಹಂತದಲ್ಲಿದೆ.

garudavoice21@gmail.com 9740365719

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!