ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ: ಕೇಂದ್ರ‌ ಹಾಗೂ ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಇಲ್ಲಿನ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸಿಪಿಐ ಜಿಲ್ಲಾ ಖಜಾಂಚಿ, ಹಿರಿಯ ಮುಖಂಡ ಸಿಪಿಐ ಆನಂದರಾಜ್ ಮಾತನಾಡಿ, ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಣ್ಣು ಮತ್ತು ಕಿವಿ ಎರಡೂ ಇಲ್ಲ. ಜನಪರ ಆಡಳಿತ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಆವರಗೆರೆ ಚಂದ್ರು ಮಾತನಾಡಿ, ರೈತರ ಫಸಲುಗಳ ಖರೀದಿ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತೆರೆಯದೆ ಸರ್ಕಾರ ರೈತರಿಗೆ ವಂಚಿಸಿದೆ ಎಂದು ಹರಿಹಾಯ್ದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆನಂದರಾಜ್ ಮಾತನಾಡಿ, ಸರ್ಕಾರ ಕೋವಿಡ್ ವೈರಸ್ಗೆ ಔಷಧಿಯನ್ನು ಸರ್ಕಾರ ತಯಾರಿಸದೆ, ಖಾಸಗಿ ಕಂಪನಿಗಳಿಗೆ ಲಸಿಕೆ ತಯಾರಿಸಲು ಅನುಮತಿ ನೀಡಿ ಖಾಸಗಿ ಕಂಪನಿಗಳ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಯು ಸಿ ಐ ಜಿಲ್ಲಾ ಕಾರ್ಯದರ್ಶಿ ಕೈದಾಳ ಮಂಜುನಾಥ್ ಮಾತನಾಡಿ, ಲಾಕ್ ಡೌನ್ ಹೆಸರಿನಲ್ಲಿ ದುಡಿಯುವ ಜನರನ್ನು ರೈತರನ್ನು ಮನೆಯಲ್ಲಿ ಬಂದಿಸಿಟ್ಟು ಅಗತ್ಯವಸ್ತುಗಳ ಬೆಲೆ ಏರಿಸಿ ಬಂಡವಾಳಶಾಹಿಗಳಿಗೆ ನೆರವಾಗಿ, ಸರ್ಕಾರ ಜನರಿಗೆ ದ್ರೋಹ ಎಸಗಿದ್ದು ಇದೆಲ್ಲದರ ವಿರುದ್ಧ ಜನರನ್ನು ಜಾಗೃತಿಸಬೇಕಾಗಿದೆ ಎಂದು ಕರೆ ನೀಡಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಹೆಚ್ ಜಿ ಉಮೇಶ್, ಕಾಂ ಆವರಗೆರೆ ವಾಸು ಸಿಪಿಐ-ಎಂ ನ ಈ ಶ್ರೀನಿವಾಸ್  ಎಸ್ ಯು ಸಿ ಐ ನ ಕಾಂ ಭಾರತಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಡಪಕ್ಷಗಳ ಮುಖಂಡರುಗಳಾದ  ಟಿ ಎಸ್ ನಾಗರಾಜ್, ಐರಣಿ ಚಂದ್ರು ,ಸರೋಜಾ, ಕೆ. ಶ್ರೀನಿವಾಸ್, ಕುಕ್ಕವಾಡ ಮಂಜುನಾಥ, ನರೇಗಾ ರಂಗನಾಥ, ಗದಿಗೇಶ ಪಾಳ್ಯದ, ಮಹಮ್ಮದ್ ರಫೀಕ್, ಭಾರತಿ, ಸೌಮ್ಯ, ದಾದಾಪೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!