ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡದಿದ್ದರೆ ಹೋರಾಟ

ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ

ಬೆಂಗಳೂರು : ಸರಕಾರವು ರಾಜ್ಯ ಸರಕಾರಿ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ ಘೋಷಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಸರಕಾರ ಸಚಿವಾಲಯದ ನೌಕರರ ಸಂಘವು ಎಚ್ಚರಿಕೆ ನೀಡಿದೆ.

2023-24ರ ಬಜೆಟ್‌ನಲ್ಲಿ 7ನೆ ವೇತನ ಆಯೋಗದ ಜಾರಿಯಾಗಲಿ, ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಯಾಗಲಿ, ಮಧ್ಯಂತರ ಪರಿಹಾರ ಘೋಷಣೆ ಮಾಡುವ ಮತ್ತು ಎನ್‌ಪಿಎಸ್ ರದ್ದತಿ ಮಾಡುವ ಯಾವುದೇ ಕೆಲಸವನ್ನು ಮಾಡಿಲ್ಲ. ಆಯವ್ಯಯದಲ್ಲಿ ನೌಕರರ ಬೇಡಿಕೆಯನ್ನು ಈಡೇರಿಸದೆ ಕಡೆಗಣಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.

ರಾಜ್ಯದಲ್ಲಿ, 2,58,709 ಹುದ್ದೆಗಳು ಖಾಲಿ ಇದ್ದು,ಆದರೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರಕಾರಿ ನೌಕರರು ಹಗಲಿರುಳು ದಕ್ಷತೆಯಿಂದ ಶ್ರಮವಹಿಸಿ ಸೇವೆ ಸಲ್ಲಿಸಿ ದೇಶದಲ್ಲಿಯೇ ರಾಜಸ್ವ ಸಂಗ್ರಹಣೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿರಲು ಕಾರಣೀಭೂತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸರಕಾರ ನೌಕರರ ವೇತನ ಭತ್ಯೆ ಪರಿಷ್ಕರಣೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸದೆ ಅನ್ಯಾಯ ಎಸಗುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಸರಕಾರಿ ನೌಕರರು ಎಚ್ಚೆತ್ತುಕೊಂಡು ಹೋರಾಟಕ್ಕೆ ಅಣಿಯಾಗುವಂತೆ ಪ್ರಕಟನೆಯ ಮೂಲಕ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!