ಜಗಳೂರಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸುಲೋಚನಮ್ಮ ಹನುಮಂತಪ್ಪ ಆಯ್ಕೆ
ದಾವಣಗೆರೆ : ಜಗಳೂರು ತಾಲೂಕಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಲೋಚನಮ್ಮ ಹನುಮಂತಪ್ಪ, ಉಪಾಧ್ಯಕ್ಷರಾಗಿ ಆಶಾಖಾತೂನ್ ಜಾಕವುಲ್ಲಾ ಆವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು. ಸೋಮವಾರ ತಾಲೂಕಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರೀಯೆ ನಡೆಯಿತು. ಹಿಂದಿನ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ನರೇಂದ್ರ ರಾಜೀನಾಮೆಯಿಂದ ತೆರವಾಗಿತ್ತು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸುಲೋಚನಮ್ಮ ಹನುಮಂತಪ್ಪ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಶಾಖಾತೂನ್ ಜಾಕವುಲ್ಲಾ ಹೊರೆತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣಾ ನಿಯಮದಂತೆ ಅಧ್ಯಕ್ಷರಾಗಿ ಸುಲೋಚನಮ್ಮ ಹನುಮಂತಪ್ಪ ಉಪಾಧ್ಯಕ್ಷರಾಗಿ ಆಶಾಖಾತೂನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಗಮ್ಮ, ಹರೀಶ್, ಕೆಂಗಮ್ಮ, ಸುಧಾಮಣಿ ಈ ನಾಲ್ವರು ಸದಸ್ಯರು ಗೈರು ಹಾಜರಾಗಿದ್ದರು. 16 ಜನ ಸದಸ್ಯರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪಿಡಿಓ ಮರಳಸಿದ್ದಪ್ಪ, ಮುಖಂಡರಾದ ಬಂಗಾರಪ್ಪ, ಸಿದ್ದೇಶ ಸೇರಿದಂತೆ ಮತ್ತಿತರರು ಹಾಜರಿದ್ದರು.
garudavoice21@gmail.com 9740365719