ವಯಸ್ಸಿನ ದಾಖಲೆ ಪರಿಶೀಲಿಸದೆ ದಾವಣಗೆರೆ ಪೌರಕಾರ್ಮಿಕರ ನಿವೃತ್ತಿ!

ದಾವಣಗೆರೆ : ದಾವಣಗೆರೆ ನಗರದ ಪ್ರತಿ ಗಲ್ಲಿಗಳನ್ನು ಸ್ವಚ್ಚಗೊಳಿಸುತ್ತಿದ್ದ ಪೌರಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸದೆ, ಯಾವುದೇ ಸೇವಾಭದ್ರತೆ ನೀಡದೆ ಏಕಾಏಕಿ ವಯಸ್ಸಾಗಿದೆ ಎಂದು ಪೌರಕಾರ್ಮಿಕರನ್ನು ನಿವೃತ್ತಿಗೊಳಿಸಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಇತ್ತೀಚೆಗೆ ಗುತ್ತಿಗೆ ಪದ್ದತಿ ರದ್ದಾಗಿ ನೇರಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಯಾವುದೇ ಸೇವಾ ಭದ್ರತೆ ಇಲ್ಲದೆ ಏಕಾಏಕಿ ಕಾರ್ಮಿಕರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಿರುವ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿದ್ದಾರೆ.

ದಾವಣಗೆರೆ ನಗರದ ಸ್ವಚ್ಛತೆಯನ್ನು ಕಾಪಾಡುವ ದಲಿತ ಪೌರ ಕಾರ್ಮಿಕರಿಗೆ ಯಾವುದೇ ಸೇವಾ ಭದ್ರತೆ ಇಲ್ಲ, ಇಷ್ಟುದಿನ ಜೀತ ಪದ್ಧತಿಯ ರೀತಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಂಡಿದೆ. ನೇರ ಪಾವತಿ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಏಕಕಾಲದಲ್ಲಿ  60 ವರ್ಷ ವಯಸ್ಸಾಗಿದೆ ಎಂದು ದಾಖಲಾತಿಗಳನ್ನು ಪರಿಶೀಲಿಸದೆ ವಯೋನಿವೃತ್ತಿ ನೀಡಲಾಗಿದೆ. ಗುತ್ತಿಗೆ ಪದ್ದತಿ ನಡೆಯುವ ಸಂದರ್ಭದಲ್ಲಿ ಗುತ್ತಿಗೆದಾರ ಕೊಟ್ಟ ಮಾಹಿತಿಯ ಮೇಲೆಯೇ ಅನಕ್ಷರಸ್ಥರಾಗಿರುವ ಪೌರಕಾರ್ಮಿಕರನ್ನು ಸರಿಯಾದ ವಯಸ್ಸಿನ ದೃಢೀಕರಿಸದೆ ಕಾರ್ಮಿಕರನ್ನು ನಿವೃತ್ತಿಗೊಳಿಸುತ್ತಿರುವುದು ಸರಿಯಲ್ಲ. ಪೌರ ಕಾರ್ಮಿಕರ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಜೀತ ಪದ್ಧತಿಯ ರೀತಿ ಇರುವ ನೇರ ಪಾವತಿ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!