same sex marriage; ಸಲಿಂಗ ವಿವಾಹಕ್ಕೆ ಸುಪ್ರೀಂ ಕೋರ್ಟ್ ಟ್ವಿಸ್ಟ್

ಹಿಜಾಬ್ ವಿಚಾರಣೆಗೆ `ಸುಪ್ರೀಂ' ಅಸ್ತು

ಹೊಸದಿಲ್ಲಿ: ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಸಲಿಂಗ ವಿವಾಹಕ್ಕೆ (same sex marriage) ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ತೀರ್ಪನ್ನು ನೀಡಿದ್ದು, ಇದು ಸಂಸತ್ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಾಗಿದೆ. ಇದರಲ್ಲಿ ಕೋರ್ಟ್’ಗೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಒಪ್ಪಿಕೊಂಡಿದೆ.

ದೇಶದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನ 3:2 ಮತದಿಂದ ತಿರಸ್ಕರಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ನೇತೃತ್ವದಲ್ಲಿ ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೋಹ್ಲಿ, ಪಿ.ಎಸ್. ನರಸಿಂಹ ಪಿಠದ್ ಸೇರಿದಂತೆ ಒಟ್ಟು ಐದು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ.

Female foeticide; ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ

ಐವರು ನ್ಯಾಯಮೂರ್ತಿಗಳು ಸಂವಿಧಾನದಡಿ ಸಲಿಂಗಿಗಳು ಮದುವೆಯಾಗಲು ಯಾವುದೇ ಮೂಲಭೂತ ಹಕ್ಕಿಲ್ಲ ಎಂದು ಒಕ್ಕೊರಲಿನಲ್ಲಿ ತೀರ್ಪು ನೀಡಿದ್ದಾರೆ. ಆದರೆ, ಇವರಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ಸಂಜಯ್ ಕಿಶನ್ ಕೌಲ್ ಸಲಿಂಗ ವಿವಾಹವನ್ನು ಕಾನೂನುಬದ್ದಗೊಳಿಸುವ ಮನವಿಯನ್ನು ಬೆಂಬಲಿಸಿದರೆ, ಉಳಿದವರು ಕೆಲವು ಅಂಶಗಳಲ್ಲಿ ಸಿಜೆಐ ಗೆ ಸಹಮತ ವ್ಯಕ್ತಪಡಿಸಿದರೂ, ಸಲ್ಲಿಂಗ ವಿವಾಹಕ್ಕೆ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಶೇಷ ವಿವಾಹ ಕಾಯ್ದೆ 1954 ರಲ್ಲಿರುವ ಲಿಂಗಸಮಾನ ಅಥವಾ ಜೆಂಡರ್ ನ್ಯೂಟ್ರಲ್ ಭಾಷೆಯನ್ನು ಸಂಪೂರ್ಣವಾಗಿ ಓದಿ ಸಲಿಂಗ ವಿವಾಹಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಪುರುಷ ಮತ್ತು ಮಹಿಳೆ ಎಂದು ಇರುವುದನ್ನು ಸಂಗಾತಿಗಳು (Spouses) ಎಂದು ವ್ಯಾಖ್ಯಾನಿಸಬೇಕು ಎಂಬುದಾಗಿ ಕೇಳಿಕೊಂಡಿದ್ದರು.

ಇದಕ್ಕೆ ನ್ಯಾಯಮೂರ್ತಿ ಚಂದ್ರಚೂಡ ಅವರು ಪ್ರತಿಕ್ರಿಯಿಸಿ, ಆ ರೀತಿ ಮಾಡಿದ್ರೆ ನ್ಯಾಯಾಂಗ ಹೊಸ ಶಾಸನವನ್ನು ರಚಿಸಿದಂತೆ ಆಗುತ್ತದೆ. ಸುಪ್ರಿಂಕೋರ್ಟ್ ತನ್ನ ವ್ಯಾಪ್ತಿಯನ್ನು ಮೀರಿದಂತೆ ಆಗುತ್ತದೆ. ಹೀಗಾಗಿ ಈ ವಿಚಾರವನ್ನು ಪಾರ್ಲಿಮೆಂಟ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು. ಈ ವೇಳೆ ಐವರು ನ್ಯಾಯಮೂರ್ತಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!