ಶಿಕ್ಷಕರ ವರ್ಗಾವಣೆಗೆ ಸಚಿವ ಸುರೇಶ್ ಕುಮಾರ್ ಸಿಹಿ ಸುದ್ದಿ ಕೊಟ್ಟಿದ್ದಾರಾ…? ಸಂಪೂರ್ಣ ಸುದ್ದಿ ಓದಿ

ಬೆಂಗಳೂರು: ವರ್ಗಾವಣೆಗೆ ಕೋರಿ ಸಾವಿರಾರು ಶಿಕ್ಷಕರು ಎರಡ್ಮೂರು ವರ್ಷದಿಂದ ಕಾಯುತ್ತಿದ್ದು, 75 ಸಾವಿರ ಅರ್ಜಿಗಳು ಸ್ವೀಕಾರವಾಗಿವೆ. ಇದೇ 30 ರಂದು ಅಧಿಕೃತ ವೇಳಾಪಟ್ಟಿ ಮತ್ತು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಶಿಕ್ಷಕ ಮಿತ್ರ ಆಪ್ ಮೂಲಕ ಕೌನ್ಸಿಲಿಂಗ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿಕ್ಷಕರ ವರ್ಗಾವಣೆ ಪಟ್ಟಿ ವಿಚಾರವಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನೇಕ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಹೀಗಾಗಿ ಶಿಕ್ಷಣ ಸ್ನೇಹಿ ವರ್ಗಾವಣೆ ನೀತಿ ತರುತ್ತೇವೆ ಎಂದಿದ್ದೆವು. ಕಡ್ಡಾಯ ವರ್ಗಾವಣೆಗೆ ಹೋಗಿದ್ದವರಿಗೆ ನಿಮ್ಮ ಹತ್ತಿರದ ಸ್ಥಳದಲ್ಲಿ ಕೆಲಸ ಮಾಡಬಹುದು ಎಂದು ಅವಕಾಶ ನೀಡಿದ್ದೆವು ಎಂದರು
ವರ್ಗಾವಣೆ ಪಟ್ಟಿ ಅಧಿಕೃತ ವೇಳಾಪಟ್ಟಿ ಮತ್ತು ಅಧಿಸೂಚನೆ 30 ರಂದು ಪ್ರಕಟಗೊಳ್ಳುತ್ತಿದೆ, ಅಂದಿನಿಂದಲೇ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಪಾರದರ್ಶಕವಾಗಿ ಇದನ್ನು ಮಾಡಬೇಕು ಎಂದುಕೊಂಡಿದ್ದೆವು. ಶಿಕ್ಷಕ ಮಿತ್ರ ಆಪ್ ಮೂಲಕ ಕೌನ್ಸಿಲಿಂಗ್ ಮಾಡಲಾಗುತ್ತದೆ. ಕೌನ್ಸಿಲಿಂಗ್ ಸ್ಥಳಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕೂತು ಕೌನ್ಸಿಲಿಂಗ್ ಅಟೆಂಡ್ ಮಾಡಬಹುದು ಎಂದು ತಿಳಿಸಿದರು.