ತಾಂಡಗಳಲ್ಲಿ ಮುಂದುವರೆದ ಕೊರೋನಾ ಲಸಿಕಾ ಜನಜಾಗೃತಿ
ದಾವಣಗೆರೆ. ಜೂ.೧; ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಮತ್ತು ಪರಿಶಿಷ್ಟ ಜಾತಿಯ ರಾಜ್ಯಾಧ್ಯಕ್ಷರಾದ ಎಫ್.ಹೆಚ್. ಜಕ್ಕಪ್ಪನವರ್ ಇವರುಗಳ ಆಶಯದಂತೆ ಮಾಯಕೊಂಡ ಕ್ಷೇತ್ರ, ಹೆದ್ನಿ ತಾಂಡದಲ್ಲಿ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆ ಪರಿಶಿಷ್ಟ ಜಾತಿ ವಿಭಾಗ ಜಿಲ್ಲಾಧ್ಯಕ್ಷರಾದ ಬಿ.ಹೆಚ್. ವೀರಭದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿ, ತಾಂಡದ ಜನರೆಲ್ಲರೂ ಯಾವುದೇ ಭಯಪಡದೇ ಕೊರೋನಾ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿಯ ಉಪಾಧ್ಯಕ್ಷರಾದ ಡಾ. ತುಳಸಿನಾಯ್ಕರವರು ಈ ಸಂದರ್ಭದಲ್ಲಿ ಕೊರೋನದ ಬಗ್ಗೆ ಜನರಿಗಿರುವ ತಪ್ಪು ಅಭಿಪ್ರಾಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವಂತಪ್ಪನವರು ಕೂಡ ಲಸಿಕೆಯ ಬಗ್ಗೆ ಜನಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಕೊಂಡ ಬ್ಲಾಕ್ ಅಧ್ಯಕ್ಷರಾದ ಬಿ.ಟಿ. ಹನುಮಂತಪ್ಪನವರು ವಹಿಸಿದ್ದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ರಾಜ್ಯ ಉಪಾಧ್ಯಕ್ಷರಾದ ನಾಗರಾಜನಾಯ್ಕ ಕೂಡಗನೂರು ಗ್ರಾಮ ಪಂಚಾಯ್ತ ಅಧ್ಯಕ್ಷರಾದ ಸಿದ್ದಪ್ಪನವರು, ಮಾಯಕೊಂಡ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ವೆಂಕಟೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಹೆದ್ನಿ ಗ್ರಾಮದ ಬ್ಲಾಕ್ ಅಧ್ಯಕ್ಷರು ಅಂಜನಪ್ಪ, ಪರಶುರಾಮಪ್ಪ, ಜಯರಾಮನಾಯ್, ಪರಮೇಶ್ವರನಾಯ್ಕ, ಕಂದಗಲ್ಲು ಇನ್ನಿತರ ಊರಿನ ಮುಖಂಡರು ಉಪಸ್ಥಿತರಿದ್ದರು.