ವಿಲಾಸಿ ಹಾಗೂ ಭೋಗ ಜೀವನಕ್ಕಾಗಿ ಕಳ್ಳತನ ಮಾಡಿದ ಕಳ್ಳರಿಗ ಪೊಲೀಸರ ವಶಕ್ಕೆ!

Theft, luxury, a detour for a life of indulgence..!

ದಾವಣಗೆರೆ : ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ್ ಕುಮಾರ್ ಎಂಬುವರ ಮನೆಯಲ್ಲಿ ಒಂದು ವರ್ಷದ ಹಿಂದೆ ಕಳ್ಳತನ ನಡೆದಿದ್ದು, ಇಬ್ಬರು ಕಳ್ಳರು ಈಗ ಸಿಕ್ಕಿಬಿದ್ದಿದ್ದಾರೆ.

ದಾವಣಗೆರೆಯ ಮಂಡಿಕ್ಕಿ ಬಟ್ಟಿ ಬಡಾವಣೆ ವಾಸಿ ಮಹಮ್ಮದ್ ಸಲೀಂ(23) ಮತ್ತು ರಾಣೆಬೆನ್ನೂರು ಪಟ್ಟಣದ ಎಸ್‌ಜೆಎಂ ನಗರದ ವಾಸಿ ಸೈಯದ್ ಶೇರು(27) ಬಂಧಿತ ಆರೋಪಿಗಳು.

ಇವರಿಬ್ಬರು ಬಡತನದಲ್ಲಿ ಬಂದ ಯುವಕರು, ಜೀವನಕ್ಕಾಗಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಬಡತನದಲ್ಲಿದ್ದ ಇವರನ್ನು ವಿಲಾಸಿ ಜೀವನಕ್ಕಾಗಿ ಕಳ್ಳತನ ದಾರಿ ತೋರಿತು. ಅಲ್ಲಿಂದ ಕಳ್ಳತನಕ್ಕೆ ಇಳಿದ ಈ ಜೋಡಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿತು. ಅಂತೆಯೇ ರಾಣೆಬೆನ್ನೂರು, ದಾವಣಗೆರೆ, ಹರಿಹರದಲ್ಲಿ ಕಳ್ಳತನಕ್ಕೆ ಇಳಿಯಿತು. ಅಲ್ಲಿ ಇವರ ವಿರುದ್ದ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೈಲಿನಲ್ಲಿದ್ದ ಕಳ್ಳರು ಹರಿಹರದಲ್ಲಿ ನಡೆದ ಕಳ್ಳತನ ಸಂಬಂಧ ಇವರಿಬ್ಬರು ಜೈಲಿಗೆ ಹೋಗಿದ್ದರು‌. ಬಳಿಕ ಬಿಡುಗಡೆಯಾದ ನಂತರವೂ ಬುದ್ದಿ ಕಲಿಯದ ಈ ಜೋಡಿ ಮತ್ತೆ ಕಳ್ಳತನಕ್ಕೆ ಇಳಿಯಿತು. ಬಳಿಕ ದಾವಣಗೆರೆಯ ಮಲ್ಲಾಪುರಕ್ಕೆ ಭೇಟಿ ನೀಡಿ ಚೇತನ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದರು.

ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ್ ಕುಮಾರ್ ಎನ್ನುವವರ ಮನೆಯ ಬೀಗ ಮುರಿದು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬೆನ್ನೇತ್ತಿದ ಡಿಎಸ್ಪಿ ಬಸವರಾಜ್ ಖಡಕ್ ಆಫೀಸರ್ ಸಿಪಿಐ ಕಿರಣ್ ನೇತೃತ್ವದ ತಂಡವನ್ನು ರಚಿಸಿದ್ದರು. ಬಳಿಕ ಕಾರ್ಯಾಚರಣೆಗೆ ಇಳಿದ ಕಿರಣ್ ತಂಡ ಮೊದಲು ಸಲೀಂ ಎಂಬುವನನ್ನು ಖೆಡ್ಡಾಗೆ ಬೀಳಿಸಿಕೊಂಡಿತು. ಬಳಿಕ ಸೈಯದ್ ಶೇರು ಎಂಬಾತನನ್ನು ಬಲೆಗೆ ಬೀಸಿತು.

ಖಾಕಿ ಪಡೆಯ ಬಲೆಗೆ ಬಿದ್ದಿದ್ದು ಹೇಗೆ?

ಕಳ್ಳತನದ ಪ್ರಕರಣದ ಬೆನ್ನತ್ತಿದ್ದ ಖಾಕಿ ಪಡೆ ಇತರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ವಿವರಣೆ ಪಡೆಯಿತು. ಬಳಿಕ ಈ ಪ್ರಕರಣದಲ್ಲಿದ್ದವರು ಯಾರು ಎಂದು ಬೆನ್ನೇತ್ತಿದ್ದಾಗ ಇವರಿಬ್ಬರು ಸಿಕ್ಕರು. ಇವರಿಬ್ಬರು ಕದ್ದ ಬಂಗಾರವನ್ನು ಬಂಗಾರದ ವ್ಯಾಪಾರಿಗೆ ಕಡಿಮೆ ಬೆಲೆಗೆ ನೀಡಿದ್ದರು. ಅಲ್ಲದೇ 44 ಗ್ರಾಂ ಬಂಗಾರವನ್ನು ಕರಗಿಸಿ ಗಟ್ಟಿ ಮಾಡಿಕೊಂಡಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 57,000/- ರೂ ಮೌಲ್ಯದ ಒಂದು ಎಲ್ ಇಡಿ ಟಿವಿ, ಬಂಗಾರದ ಬೆಂಡೋಲೆ, ಮೂಗು ಬೊಟ್ಟು, ಕೆನೆ ಸರಪಣಿ, ಬೆಳ್ಳಿಯ ಕಾಲು ಚೈನ್ ನ್ನು ಪೊಲೀಸರು ವಾಪಸ್ ಪಡೆದುಕೊಂಡಿದ್ದಾರೆ.

ಕೃತ್ಯಕ್ಕೆ ಬಳಸಿದ್ದ 40,000 ರೂ ಬೆಲೆಯ ಒಂದು ಬೈಕ್ ಸೇರಿದಂತೆ ಎರಡೂ ಪ್ರಕರಣಗಳಲ್ಲಿ ಒಟ್ಟು 3.47 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಇದ್ದವರು:

ಬೆರಳಚ್ಚು ಮುದ್ರೆ ಘಟಕ ಮಂಜುನಾಥ ಎಸ್. ಕಲ್ಲದೇವರ, ಹಾರೂನ್ ಅಕ್ತರ್, ಹಾಗೂ ಜೋವಿತ್ ರಾಜ್ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ, ಮಹೇಶ್ ರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!