ಶಾಲೆ ಮತ್ತು ಕಾಲೇಜುಗಳಲ್ಲಿ ಒಮಿಕ್ರಾನ್ ಬಗ್ಗೆ ಜಾಗೃತಿ ಇರಲಿ ಆದರೆ ಶಾಲೆ ಮತ್ತು ಕಾಲೇಜುಗಳು ಬಂದ್ ಮಾಡುವ ಆತಂಕ ಬೇಡ
2019ರಲ್ಲಿ ಚೀನಾದಲ್ಲಿ ಆರಂಭವಾದ ಕೋವಿಡ್-19 ವೈರಸ್ ಈಗ ಅದರ ಹಲವಾರು ರೂಪಾಂತರವನ್ನು ಪಡೆದುಕೊಳ್ಳುತ್ತಿದೆ ಕೊರೋನಾದ ಹೊಸ ರೂಪಾಂತರ ಒಮಿಕ್ರಾನ್ ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಸುದ್ದಿ ಹರಿದಾಡುತ್ತಿದೆ. ಈಗ ತಾನೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಮತ್ತು ಶಾಲಾ ಕಾಲೇಜುಗಳಿಂದ ದೂರವಿದ್ದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳ ಕಡೆ ಮುಖಮಾಡಿ ಇನ್ನೂ ಒಂದು ವರ್ಷ ಮುಗಿದಿಲ್ಲ ಇದರ ಮಧ್ಯ ಈ ಹೊಸ ರೂಪಾಂತರ ಓಮಿಕ್ರಾನ್ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾಭ್ಯಾಸದಿಂದ ದೂರವಿದ್ದ ವಿದ್ಯಾರ್ಥಿಗಳು ಈಗತಾನೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದಾರೆ ಇದರ ಮಧ್ಯದಲ್ಲಿ ಹೊಸ ರೂಪಾಂತರದ ಪರಿಣಾಮದಿಂದ ಶಾಲೆ ಮತ್ತು ಕಾಲೇಜುಗಳು ಬಂದ್ ಆಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಾಲೆ ಮತ್ತು ಕಾಲೇಜುಗಳು ಬಂದ್ ಅದರೆ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಮತ್ತು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಆಸಕ್ತಿ ಕಡಿಮೆಯಾಗುತ್ತದೆ ಆದ್ದರಿಂದ ಶಾಲೆ ಮತ್ತು ಕಾಲೇಜುಗಳಲ್ಲಿ ಓಮಿಕ್ರಾನ್ ಬಗ್ಗೆ ಜಾಗೃತಿ ಮೂಡಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ ಧರಿಸಿ ಸರ್ಕಾರದ ಮಾರ್ಗಸೂಚಿ ಗಳನ್ನು ಪಾಲಿಸಿ.
ಇಫ್ತೆಖಾರ್ ಅಹ್ಮದ್ ಬಿಳಿಚೋಡು
(SFI) ಭಾರತೀಯ ವಿದ್ಯಾರ್ಥಿ ಫೆಡರೇಷನ್ ಉಪಾಧ್ಯಕ್ಷರು,
ದಾವಣಗೆರೆ