ದಿವಂಗತ ಸಾಲುಮರದ ವೀರಾಚಾರಿ  ಮನೆಗೆ ಭೇಟಿ ನೀಡಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಲುಮರದ ತಿಮ್ಮಕ್ಕ

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಮಿಟ್ಲಕಟ್ಟೆಯ ಪರಿಸರ ಪ್ರೇಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿವಂಗತ ಸಾಲುಮರದ ವೀರಾಚಾರಿ ರವರ ಮನೆಗೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ರವರು ವಿರಾಚಾರಿ ರವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಪರಿಸರ ಸಂರಕ್ಷಣಾ ವೇದಿಕೆ ಪರಿಸರ ಪ್ರೇಮಿಗಳು ಮಿಟ್ಲೆ ಕಟ್ಟೆ ಗ್ರಾಮಸ್ಥರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಮಿಟ್ಲಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಟ್ಟು ಸಾಲುಮರದ ವೀರಾಚಾರಿ ರವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಪರಿಸರ ಪ್ರಶಸ್ತಿ ಪುರಸ್ಕೃತ ಬಳ್ಳೂರು ಉಮೇಶ್ ರವರು ಮಾತನಾಡಿ. ಪರಿಸರ ಹಾಗೂ ಸಾಮಾಜಿಕ ಹೋರಾಟಕ್ಕೆ ತಮ್ಮ ಜೀವವನ್ನೇ ತ್ಯಾಗ ಮಾಡಿದ ವೀರಾಚಾರಿ ರವರನ್ನು ಸ್ಮರಿಸುತ್ತಾ ಬಡವರ ದೀನ ದಲಿತರ ಹಸಿವು ನೀಗಿಸಲು ಸರ್ಕಾರ ಸೊಸೈಟಿಗಳನ್ನು ಮಾಡಿದೆ. ಅದರಲ್ಲಿ ಕೆಲವು ಸೊಸೈಟಿಗಳು ಬಡವರಿಗಾಗಿ ಬಂದ ಹಕ್ಕಿಯನ್ನು ಬಡವರಿಗೆ ನೀಡದೆ ಹಣದೋಚುತ್ತಿರುವುದು ದುರಾದೃಷ್ಟಕರ.

salumarada thimmakka visit salumarada veerachari house

ಇದನ್ನು ವಿರೋಧಿಸಿ ಹೋರಾಟ ಮಾಡಿದ ವೀರ ಚಾರಿ ರವರು ಹಾತುರದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು. ಇವರ ಪರಿಸರ ಸೇವೆ ಅನನ್ಯ ಇನ್ನೂ ಇವರು ಹೆಚ್ಚಿನ ದಿನ ಕಾಲ ಬದುಕಿ ಹೆಚ್ಚಿನ ಪರಿಸರ ಪ್ರೇಮಿಗಳಿಗೆ ದಾರಿದೀಪವಾಗಬೇಕಾಗಿತ್ತು. ವೀರಾಚಾರಿ ರವರನ್ನು ಕೇವಲ ಅವರ ಕುಟುಂಬ ಕಳೆದುಕೊಂಡಿಲ್ಲ. ಇಡೀ ಪರಿಸರವೆ ಒಬ್ಬ ಪರಿಸರ ಯೋಧನನ್ನು ಕಳೆದುಕೊಂಡಿದೆ. ಅವರು ರಸ್ತೆ ಬದಿಗಳಲ್ಲಿ ನೆಟ್ಟಿರುವ ಮರಗಳಿಗೆ ಬೆಸ್ಕಾಂ ಹಾಗೂ ಇತರ ಯಾವುದೇ ಇಲಾಖೆಯಿಂದ ತೊಂದರೆಯಾಗಬಾರದು ಎಂದು ಹಾಗೂ ವೀರಾಚಾರಿ ಹಾಗೂ ಅವರ ಕುಟುಂಬಕ್ಕೆ ಸಲ್ಲಬೇಕಾದ ಗೌರವನ್ನು ವೀರಚಾರಿಯವರ ಹೆಸರು ಶಾಶ್ವತವಾಗಿ ಉಳಿಯುವ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಲುಮರದ ತಿಮ್ಮಕ್ಕ ಅಜ್ಜಿ ಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದಂತ ಮಿಟ್ಲಕಟ್ಟೆಯ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಚಂದ್ರಪ್ಪನವರು ಮಾತನಾಡಿ ವಿಟ್ಲಕಟ್ಟೆಯ ಹೆಮ್ಮೆಯ ಪುತ್ರ
ವಿರಾಚಾರಿ ರವರನ್ನು ಕಳೆದುಕೊಂಡಿದ್ದು ಒಂದು ದೊಡ್ಡ ಶಕ್ತಿಯನ್ನೇ ಕಳೆದುಕೊಂಡಂತಾಗಿದೆ ನಮ್ಮ ಊರಿಗೆ ಅವರ ಕೊಡುಗೆ ಅಪಾರ ಅವರ ಜೀವನವನ್ನೇ ಪರಿಸರಕ್ಕೆ ಮುಡಿಪಾಗಿಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಸರ್ಕಾರವು ಅವರ ಕುಟುಂಬಕ್ಕೆ ನೆರವು ನೀಡಲಿ ಎಂದು ಹೇಳಿದರು. ವೇದಿಕೆಯಲ್ಲಿ ಸಾಲುಮರದ ವೀರಾಚಾರಿ ರವರ ಪತ್ನಿ ಅನಸೂಯಮ್ಮ ಪ್ರಾದೇಶಿಕ ಅರಣ್ಯಾಧಿಕಾರಿಗಳಾದ ದೇವರಾಜ್, ಉಪ ಅರಣ್ಯಾಧಿಕಾರಿಯಾದ ಇದಾಯತ್, ಸಾಮಾಜಿಕ ಉಪ ಅರಣ್ಯಾಧಿಕಾರಿಯಾದ ರಾಮದಾಸ್, ಅರಣ್ಯ ರಕ್ಷಕರಾದ ಜ್ಯೋತಿ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಗಿರೀಶ್ ದೇವರಮನೆ, ಪರಿಸರ ಪ್ರೇಮಿಗಳಾದಂತ ಕೆ, ಟಿ ಗೋಪಾಲ ಗೌಡ್ರು, ವೇದಿಕೆಯಲ್ಲಿ ಇದ್ದರು. ಪ್ರಸನ್ನ ಬೆಳ್ಕೆರೆ, ನಾಗರಾಜ್ ಸುರ್ವೆ, ಹನುಮಂತಪ್ಪ ಆರ್ ಬಿ, ಎಂ, ಜಿ,ಶ್ರೀಕಾಂತ್, ಸ್ಥಳೀಯ ಸದಸ್ಯರಾದ ನಾಗರಾಜ್ ಬಸಯ್ಯನವರು, ಶಾಮಿಯಾನ ಸುರೇಶ್, ರಾಮನ ಗೌಡ್ರು ಇತರ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!