dandiya dance; ದಾಂಡಿಯಾ ಆಡಿದ ಶಾಮನೂರು ಶಿವಶಂಕರಪ್ಪ, ಹೆಜ್ಜೆ ಹಾಕಿದ ಯುವತಿಯರು

ದಾವಣಗೆರೆ, ಅ.23: ದಾಂಡಿಯ ನೃತ್ಯ.. ಈ ನೃತ್ಯದ ಹಾಡು ಕೇಳಿದರೆ ಸಾಕು ನಿಂತಲ್ಲಿಯೆ ಹೆಜ್ಜೆಗಳು ಹುಟ್ಟುತ್ತವೆ. ಕುಳಿತಲ್ಲಿಯೇ ಕೈ ಕಾಲುಗಳು ಕುಣಿಯಲಾರಂಭಿಸುತ್ತವೆ. ಇದಕ್ಕೆ 90 ವರ್ಷದ ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ಕೂಡ ಹೊರತಾಗಿಲ್ಲ. ಕೈಯಲ್ಲಿ ಕೋಲು ಹಿಡಿದುಕೊಂಡು ದಾಂಡಿಯಾ (Dandiya dance) ಹಾಡಿಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.

ದಾವಣಗೆರೆಯ ಹ್ಯಾಪಿ ಇವೆಂಟ್ ಮತ್ತು ಜನನಿ ಟ್ರಸ್ಟ್ ವತಿಯಿಂದ ರವಿ ಶಾಮನೂರ್ ಫಿಲಂಸ್ ಹಾಗೂ ಗ್ರೀನ್ ಪಾರ್ಕ್ ಇವರ ಸಹಾಯದೊಂದಿಗೆ ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ನವಮಿ ಕಾರಿವಾಲ್ 2.0 ಕಾರ್ಯಕ್ರಮವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸಿ ದಾಂಡಿಯಾಕ್ಕೆ ಯುವತಿಯೊರೊಂದಿಗೆ ಕೈ ಜೋಡಿಸಿದರು. ದಾಂಡಿಯಾರಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿವಶಂಕರಪ್ಪ ಯುವತಿಯರ ಜತೆ ದಾಂಡಿಯಾರಾಸ್ ನ ನೃತ್ಯದಲ್ಲಿ ಪಾಲ್ಗೊಂಡರು. ಅತ್ತ ಹಾಲಿವುಡ್ ಹಾಡಿಗೆ ಯುವತಿಯರು ಹೆಜ್ಜೆ ಹಾಕುತ್ತಾ ಮುಂದುವರಿದರೆ…ಶಾಮನೂರು ಇವರಿಗೆ ಸಾಥ್ ನೀಡಿದರು. ವಯಸ್ಸು90 ಆದರೂ ಶಾಮನೂರು ಶಿವಶಂಕರಪ್ಪ ದಾಂಡಿಯಾ ರಾಸ್ ಹಾಡಿ ಇತರರನ್ನು ರಂಜಿಸಿದ್ದು ವಿಶೇಷವಾಗಿತ್ತು.

ದಾಂಡಿಯಾ ಡ್ಯಾನ್ಸ್ ಇದೀಗ ಬೆಣ್ಣೆ ನಗರಿಯಲ್ಲಿಯೂ ಕೆಲ ವರ್ಷಗಳಿಂದ ಪ್ರಸಿದ್ದಿಗಳಿಸಿದೆ.ಇಲ್ಲಿನೆಲೆಸಿರುವ ಉತ್ತರ ಭಾರತದವರಷ್ಟೆ? ಅಲ್ಲದೇ ಕನ್ನಡಿಗರೂ ಕೂಡಾ ನೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನ ಮಾಲ್, ಅಪಾರ್ಟ್ಮೆಂಟ್ ಸೇರಿದಂತೆ ಅಲ್ಲಲ್ಲಿಅಪಾರ ಪ್ರಮಾಣದಲ್ಲಿ ವ್ಯಾಪಕವಾಗಿ ಆಯೋಜನೆಗೊಂಡಿರುವ ದಾಂಡಿಯಾ ರಾಸ್ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ.

bjp ticket; ಮತ್ತೊಂದು ಬಿಜೆಪಿ ಟಿಕೆಟ್ ಡೀಲ್..! ಈ ಬಾರಿ ನಳಿನ್ ಹೆಸರು ಥಳುಕು.!

ನವನವೀನನವಾಗಿ ಆಚರಿಸಲ್ಪಡುವ ನವರಾತ್ರಿ ಹಬ್ಬದಂದು ಉತ್ತರ ಭಾರತದಲ್ಲಿದುರ್ಗಾ ಪೂಜೆಯ ಜತೆಗೆ ಸಾಂಪ್ರದಾಯಿಕ ನೃತ್ಯ ದಾಂಡಿಯಾ ರಾಸ್ ಮೆರುಗು ನೀಡುತ್ತದೆ. ಇದರ ಜತೆಗೆ ಕೆಲವುಕಡೆ ದಾಂಡಿಯಾ ಸ್ಪರ್ಧೆಗಳು, ನೃತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದರಂತೆ ಪ್ರತಿ ಜಿಲ್ಲೆಯಲ್ಲಿಯೂ ದಾಂಡಿಯಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಮೊದಲೆಲ್ಲಾ ಗುಜರಾತ್‌ನಲ್ಲಿ ಮಾತ್ರವೇ ದಾಂಡಿಯಾ ನೃತ್ಯವನ್ನು ಆಚರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿಎಲ್ಲೆಡೆ ಈ ನೃತ್ಯದ ಝಲಕ್ ನೋಡಬಹುದು.

ದೇಶದ ವಿವಿಧೆಡೆ ನವರಾತ್ರಿಯ ಸಂಭ್ರಮವನ್ನು ಇಮ್ಮಡಿಗೊಳಿಸಲು ವರ್ಣಮಯ ನೃತ್ಯವನ್ನು ಆಯೋಜಿಸುತ್ತಾರೆ, ಕೆಲವೆಡೆ ಸ್ಪರ್ಧೆ ಕೂಡಾ ನಡೆಯುತ್ತದೆ. ಸಾಮಾನ್ಯವಾಗಿ ಸಂಜೆ ಈ ನೃತ್ಯವನ್ನು ಆಯೋಜಿಸುತ್ತಾರೆ. ಹೆಚ್ಚಾಗಿ ಗುಂಪುಗಳಲ್ಲಿಈ ನೃತ್ಯವನ್ನು ಮಾಡುವುದರಿಂದ ನೂರಾರು ಮಂದಿ ಒಟ್ಟಾಗಿ ಹೆಜ್ಜೆ ಹಾಕಿದಾಗ ವರ್ಣಮಯ ನೃತ್ಯಲೋಕ ತೆರೆದುಕೊಳ್ಳುತ್ತದೆ.

ಗಾರ್ಭಾ ನೃತ್ಯಕ್ಕೂ ದಾಂಡಿಯಾ ರಾಸ್‌ಗೂ ಸಣ್ಣ ಭಿನ್ನತೆ ಇದೆ. ಗಾರ್ಭಾ ನೃತ್ಯ ಪೂಜೆಯ ಮೊದಲು ನಡೆದರೆ ದಾಂಡಿಯಾ ನಂತರ ನಡೆಯುತ್ತದೆ. ಗಾರ್ಭಾ ನೃತ್ಯಕ್ಕೆ ಕೋಲಿನ ಅವಶ್ಯಕತೆ ಇಲ್ಲ. ದಾಂಡಿಯಾದಲ್ಲಿಕೋಲಾಟವೇ ಪ್ರಧಾನ. ದಾಂಡಿಯಾ ಕೇವಲ ನವರಾತ್ರಿಗೆ ಸೀಮಿತವಾಗಿಲ್ಲ. ಸುಗ್ಗಿ ಹಬ್ಬ, ಕಾಮನ ಹಬ್ಬ, ಸಂತೋಷದ ಕ್ಷಣಗಳಲ್ಲೆಲ್ಲಇದು ವಿಜೃಂಭಿಸುತ್ತದೆ. ಸಿನಿಮಾಗಳಲ್ಲೂಇದೊಂದು ಜನಪ್ರಿಯ ನೃತ್ಯ ಪ್ರಕಾರವಾಗಿದೆ.

ಸದ್ಯ ದಾಂಡಿಯಾ ರಾಸ್ ಬೆಣ್ಣೆನಗರಿಯಲ್ಲಿ ಕಳೆಗಟ್ಟಿದೆ. ಅಲ್ಲಲ್ಲಿನೃತ್ಯ ಸ್ಪರ್ಧೆ, ಇವೆಂಟ್‌ಗಳು ನಡೆಯುತ್ತಿವೆ. ಇದರ ವೀಕ್ಷಣೆಗೆ
ಹಾಗೂ ಭಾಗವಹಿಸವವರಿಗಾಗಿ ಟಿಕೆಟ್ ಆನ್‌ಲೈನ್ ಬುಕ್ಕಿಂಗ್ ಕೌಂಟರ್‌ಗಳೂ ತೆರೆದುಕೊಂಡಿವೆ. ನೃತ್ಯದ ಮೂಲಕ ದುಷ್ಟಶಕ್ತಿಯ ವಿರುದ್ಧದ ದುರ್ಗಾದೇವಿಯ ವಿಜಯವನ್ನು ಸಂಭ್ರಮಿಸುವ ಒಂದು ವಿಧಾನವಿದು. ಇಲ್ಲಿಬಳಸುವ ಸುಂದರ, ಅಲಂಕೃತ ಕೋಲುಗಳು ದುರ್ಗೆ ಮತ್ತು ಮಹಿಷಾಸುರನ ಖಡ್ಗವನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿಯೇ ಇದನ್ನು ಖಡ್ಗ ನೃತ್ಯ ಎಂದೂ ಕರೆಯುತ್ತಾರೆ. ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಿದ್ದ ಈ ನೃತ್ಯದಲ್ಲಿ ಇತ್ತೀಚಿನ ದಿನಗಳಲ್ಲಿಪುರುಷರೂ ಸೇರಿ ದುರ್ಗೆಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಕಲರ್‌ಫುಲ್ ಉಡುಗೆ ಧರಿಸಿದ ಮಹಿಳೆಯರು ವೃತ್ತಾಕಾರವಾಗಿ ಒಟ್ಟು ಸೇರಿ ನೃತ್ಯ ಮಾಡುವುದು ದಾಂಡಿಯಾ ವಿಶೇಷ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನರ ಪತ್ನಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ವನಿತಾ ಸಮಾಜದ ಶ್ರೀಮತಿ ಲತಿಕಾ ದಿನೇಶ್ ಕೆ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಹಾಗೂ ಆಯೋಜಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!