ದಾವಣಗೆರೆ ಜಿಲ್ಲೆಯಲ್ಲಿ 244 ಜನರಿಗೆ ಕೊವಿಡ್ ಸೊಂಕು : 58 ಮಕ್ಕಳಿಗೆ ಕೊರೊನಾ

ದಾವಣಗೆರೆ: ಭಾನುವಾರ ದಾವಣಗೆರೆ ಜಿಲ್ಲೆಯಲ್ಲಿ 244 ಜನರಿಗೆ ಕರೋನಾ ದೃಢಪಟ್ಟಿದ್ದು, 28 ಜನರು ಗುಣಮುಖರಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 163 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 0-18 ರ ವಯೋಮಾನದ ಶಾಲಾ ಮಕ್ಕಳಿಗೆ ಸೋಂಕು ದೃಢಪಟ್ಟಿದೆ.

ಚನ್ನಗಿರಿ‌ 19, ಜಗಳೂರು 6, ಹರಿಹರ 31, ಹೊನ್ನಾಳಿ 19, ಹೊರ ಜಿಲ್ಲೆಯ 6 ಜನರಿಗೆ ಸೋಂಕು ದೃಢಗೊಂಡಿದ್ದು, ಒಟ್ಟು 244 ಜನರಿಗೆ ಸೋಂಕು ತಗುಲಿರುವ ವರದಿಯಾಗಿದೆ‌.

ಇಂದು ಜಿಲ್ಲೆಯಲ್ಲಿ 0-5 ವರ್ಷದ ನಾಲ್ಕು ಮಕ್ಕಳು ಹಾಗೂ 6-18 ವಯಸ್ಸಿನ 58 ಮಕ್ಕಳು ಕೊವಿಡ್ ಪಾಸಿಟಿವ್ ಗೆ ತುತ್ತಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!