ದಾವಣಗೆರೆ ಜಿಲ್ಲೆಯಲ್ಲಿ ಇಂದು 153 ಸೋಂಕಿತರು.! ಇಂದು 23 ಮಕ್ಕಳಿಗೆ ಕೊರೊನಾ ಪಾಸಿಟಿವ್: ಜಿಲ್ಲೆಯಲ್ಲಿ ಒಟ್ಟು 132 ಮಕ್ಕಳಿಗೆ ಕೊವಿಡ್ ಸೊಂಕು

ದಾವಣಗೆರೆ: ಬುಧವಾರ ಜಿಲ್ಲೆಯಲ್ಲಿ 153 ಜನರಿಗೆ ಕರೋನಾ ದೃಢಪಟ್ಟಿದ್ದು, 18 ಜನರು ಗುಣಮುಖರಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 107 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 0-18 ರ ವಯೋಮಾನದ 23 ಶಾಲಾ ಮಕ್ಕಳು ಸೋಂಕಿತ ಪ್ರಕರಣ ದೃಢಪಟ್ಟಿದೆ.
ಇನ್ನೂ ಚನ್ನಗಿರಿ 6 ಜಗಳೂರು 11 ಹರಿಹರ 19, ಹೊನ್ನಾಳಿ 7 ಹೊರ ಜಿಲ್ಲೆಯ ಮೂವರಿಗೆ ಸೋಂಕು ದೃಢಗೊಂಡಿದ್ದು, ಒಟ್ಟು 153 ಜನರಿಗೆ ಸೋಂಕು ತಗುಲಿರುವ ವರದಿಯಾಗಿದೆ.
ಜಿಲ್ಲೆಯಲ್ಲಿ 14-01-2022 ರವರೆಗೆ 0-18 ವಯಸ್ಸಿನ ಒಟ್ಟು 132 ಮಕ್ಕಳಿಗೆ ಕೊರೊನಾ ಸೊಂಕು ತಗುಲಿದೆ ಎಂದು ಜಿಲ್ಲಾ ವೈಧ್ಯಕೀಯ ಘಟಕದ ವೈದ್ಯರು ತಿಳಿಸಿದ್ದಾರೆ