ದಾವಣಗೆರೆ: ನಗರದ ಎಲ್ ಬಿ ಕೆ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 76 ನೇ ಜನ್ಮದಿನದ ಸಮಾರಂಭವನ್ನು ಆಗಸ್ಟ್ 3 ರಂದು ಬೆಳಗ್ಗೆ 11.30 ಕ್ಕೆ ಹೊಂಡದ ವೃತ್ತದಲ್ಲಿರುವ ಶ್ರೀ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಆಯೋಜಿಸಲಾಗಿದೆ.
ಇಂದು ನಡೆಯುವ ಸಮಾರಂಭದ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಟ್ರಸ್ಟ್ ಗೌರವಾಧ್ಯಕ್ಷ ಬಿ.ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್,ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್,ಮೇಯರ್ ವಿನಾಯಕ ಪೈಲ್ವಾನ್,ಕಾಂಗ್ರೆಸ್ ಮುಖಂಡರಾದ ಎಂ.ಟಿ ಸುಭಾಷ್ ಚಂದ್ರ,ಎನ್.ಎಂ ಆಂಜನೇಯ ಗುರೂಜಿ,ಲಕ್ಷ್ಮೀದೇವಿ ವೀರಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಟ್ರಸ್ಟ್ ನಿಂದ ವಯೋವೃದ್ದರಿಗೆ, ಬಡವರಿಗೆ ಬ್ಲಾಂಕೆಟ್ ವಿತರಿಸಲಾಗುವುದು ನಂತರ ಅಂಧಮಕ್ಕಳು ಮತ್ತು ಅಂಗವಿಕಲ ಮಕ್ಕಳಿಗೆ ಹಣ್ಣು ಹಂಪಲು ಸಿಹಿವಿತರಣೆ ಮಾಡಲಾಗುವುದು ಹಾಗೂ ಜನ್ಮದಿನದ ಸಂಭ್ರಮಾಚರಣೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ.
