unemployment; ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಲು ಹೊರಟ ವ್ಯಕ್ತಿ ವಿರುದ್ದ ಕ್ರಮಕ್ಕೆ ಆಗ್ರಹ

ದಾವಣಗೆರೆ, ಆ.29: ಜಿಲ್ಲಾಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ (unemployment)  ಮಾಡಲು ಹೊರಟ ಹರಿಹರದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಸ್ಪತ್ರೆಯ ಹೊರ ಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಅರ್ಪಿಸಿದರು.

ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರಿಗೆ ಮನವಿ ಅರ್ಪಿಸಿದ ಜಿಲ್ಲಾಸ್ಪತ್ರೆಯ ಹೊರ ಗುತ್ತಿಗೆ ನೌಕರರು, ರಾಯಚೂರಿನ ಮೆ.ದೀಕ್ಷಾ ಕನ್ಸಲೆನ್ಸಿ ಹೆಸರಿನ ಮ್ಯಾನ್ ಪವ್ ಏಜೆನ್ಸಿಯಡಿ ಹೊರ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕೆಲಸಕ್ಕೆ ಕುತ್ತು ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಹೊರ ಗುತ್ತಿಗೆ ನೌಕರರು, ರಾಯಚೂರು ಮೂಲದ ದೀಕ್ಷಾ ಕನ್ಸಲ್ಟೆನ್ಸಿ ಸಂಸ್ಥೆ ಯಾವುದೇ ತಾರತಮ್ಯವಿಲ್ಲದೇ ಪಾರದರ್ಶಕವಾಗಿ ಕಾರ್ಮಿಕ ಸಿಬ್ಬಂದಿಗಳಾದ ತಮಗೆ ಪ್ರತಿ ತಿಂಗಳು ವೇತನ ನೀಡುತ್ತಿದ್ದಾರೆ. ಸರಿಯಾದ ರೀತಿ ಪಿಎಫ್, ಇಎಸ್ಐ ಕಟ್ಟುತ್ತಿದ್ದಾರೆ. ಸಮವಸ್ತ್ರ, ಬ್ಯಾಡ್ಜ್ ಸೇರಿದಂತೆ ಎಲ್ಲಾ ಸೌಲಭ್ಯ ನೀಡುತ್ತಿದ್ದಾರೆ. ಈವರೆಗೆ ತಮಗೆ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಸಂಸ್ಥೆಯವರು ಯಾವುದೇ ಲೋಪವನ್ನೂ ಎಸಗಿಲ್ಲ ಎಂದರು.

Gruha Lakshmi; ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಚಾಲನಾ ಸಿದ್ದತೆ, ಪರಿಶೀಲನೆ

ಆದರೆ, ಹರಿಹರದ ಆಶ್ರಯ ಕಾಲನಿಯ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಮತ್ತು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ರಾಯಚೂರು ಮೂಲದ ಏಜೆನ್ಸಿ ವಿರುದ್ಧ ಹಾಗೂ ಏಜೆನ್ಸಿ ಸಿಬ್ಬಂದಿಗಳ ವಿರುದ್ಧ ದುರುದ್ದೇಶದಿಂದ ಟೆಂಡರ್ ರದ್ಧುಪಡಿಸಿ, ಬೇರೆಯವರಿಗೆ ಅವಕಾಶ ಮಾಡಿಕೊಡುವ ಹುನ್ನಾರದಿಂದ, ಬೇರೆ ಏಜೆನ್ಸಿಯವರ ಕುಮ್ಮಕ್ಕಿನಿಂದ, ಪ್ರಚೋದನೆಗೊಳಪಟ್ಟು, ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ತಾವ್ಯಾರೂ ಯಾವುದೇ ದೂರು ಪತ್ರಕ್ಕೆ ಸಹಿ ಹಾಕದಿದ್ದರೂ, ತಮ್ಮ ಸಹಿಗಳನ್ನು ಸೃಷ್ಟಿಸಿಕೊಂಡು, ಮೆ.ದೀಕ್ಷಾ ಕನ್ಸಲ್ಟೆನ್ಸಿ, ರಾಯಚೂರು ಮೂಲದ ಸಂಸ್ಥೆಯ ವಿರುದ್ಧ ಮತ್ತು ದಾವಣಗೆರೆ ಶಾಖೆಯ ಸಿಬ್ಬಂದಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಬೇರೆ ಸಂಘಟನೆಗಳಿಂದಲೂ ಇದೇ ರೀತಿ ದೂರು ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವೆಲ್ಲರೂ ಹೊಟ್ಟೆಪಾಡಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಹೊರ ಗುತ್ತಿಗೆ ಡಿ ಗ್ರೂಪ್, ನಾನ್ ಕ್ಲಿನಿಕಲ್ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡು, ಬರುವ ತಿಂಗಳ ಸಂಬಳದಲ್ಲೇ ಜೀವನ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

Siddaramaiah; ಯಾವುದೇ ವೃತ್ತಿಯಾದರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿ: ಸಿದ್ದರಾಮಯ್ಯ

ಒಂದು ವೇಳೆ ಯಾವುದೇ ಸಂಘಟನೆಯಿಂದ ಬರುವ ದುರುದ್ದೇಶಪೂರಿತ ದೂರಿನ ವಿಷಯಗಳು ಅಥವಾ ಸಂಗತಿಗಳನ್ನು ಜಿಲ್ಲಾಡಳಿತ, ಸರ್ಕಾರ ಮಾನ್ಯ ಮಾಡಿದರೆ ನಮಗೆಲ್ಲರಿಗೂ ಏನಾದರೂ ತೊಂದರೆಯಾಗಿ, ನಿರುದ್ಯೋಗಿಯಾದರೆ ಕುಟುಂಬ ಸಮೇತ ತೀವ್ರ ಸಂಕಷ್ಟಕ್ಕೆ ಸಿಲುಕುತ್ತೇವೆ. ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಒಂದು ಹೊತ್ತಿನ ಊಟಕ್ಕಾಗಿ ಹಗಲಿರುಳು ದುಡಿಯುತ್ತಿದ್ದೇವೆ. ಕಾರ್ಮಿಕರ ಅನ್ನವನ್ನು ಕಸಿಯುವ ಕೆಲಸ ಮಾಡುತ್ತಿರುವ ಹಾಗೂ ನಮ್ಮೆಲ್ಲರ ಹೆಸರನ್ನು ದುರುಪಯೋಗಪಡಿಸಿಕೊಂಡು, ನಮ್ಮ ಕೆಲಸಕ್ಕೆ ತೊಂದರೆ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಸ್ಪತ್ರೆ ಹೊರ ಗುತ್ತಿಗೆ ನೌಕರರಾದ ತಿಪ್ಪೇಸ್ವಾಮಿ, ಎಚ್.ಡಿ.ಸುರೇಂದ್ರ, ಉಮೇಶ, ರತ್ನಮ್ಮ, ನಿಂಗರಾಜ, ಪಿ.ನವೀನ, ಎಚ್.ದೇವರಾಜ, ಮಣಿಕಂಠ, ಎಚ್.ರೇಣುಕಮ್ಮ, ಸಿ.ವೀರೇಶ, ಎಚ್.ಕರಿಬಸಪ್ಪ, ಅನುಕುಮಾರ, ಜಯಮ್ಮ, ಆರ್.ತಿಪ್ಪೇಶ ನಾಯ್ಕ, ಎ.ರೂಪಾ, ಲಾಲ್ ಸಾಬ್, ನಿರ್ಮಲಮ್ಮ, ಲಲಿತಮ್ಮ, ಸುರೇಶ, ಸುಧಾ, ರತ್ನಮ್ಮ, ಶಕುಂತಲಮ್ಮ, ಎಚ್.ರುದ್ರಪ್ಪ, ಆರ್.ಮಧು, ಬಿ.ಸೋಮೇಶ್ವರ, ಟಿ.ಪರಮೇಶ, ಬಿ.ಶಂಕರ, ಬಿ.ನವೀನ, ಅರುಮ, ದುರುಗಮ್ಮ, ಕೆ.ಜಿ.ವಿಶಾಲ, ಎನ್.ಎಚ್.ಮಂಜುಳಾ, ಡಿ.ರತ್ನಮ್ಮ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!