Gruha Lakshmi; ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಚಾಲನಾ ಸಿದ್ದತೆ, ಪರಿಶೀಲನೆ

ದಾವಣಗೆರೆ; ಆ. 29: ಕರ್ನಾಟಕದ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi) ಆಗಸ್ಟ್ 30ರಂದು ರಾಜ್ಯದ್ಯಾಂತ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಸಿದ್ಧತೆಯನ್ನು ಪರಿಶೀಲಿಸಿದರು.

ದಾವಣಗೆರೆ ನಗರದ 11 ಕಡೆ ವಿವಿಧ ಸ್ಥಳಗಳಲ್ಲಿ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ವೇದಿಕೆ ಹಾಗೂ ನೇರಪ್ರಸಾರದ ಸಿದ್ದತೆ ಸೇರಿದಂತೆ ಆಗಮಿಸುವ ಫಲಾನುಭವಿಗಳಿಗೆ ಊಟೋಪಚಾರದ ಬಗ್ಗೆ ಕೈಗೊಂಡಿರುವ ಸಿದ್ದತೆಯನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಪರಿಶೀಲನೆ ನಡೆಸಿದರು.

ನಗರದಲ್ಲಿ ಜರುಗುವ ಕಾರ್ಯಕ್ರಮ ಸ್ಥಳಗಳು:

ಮಹಾನಗರ ಪಾಲಿಕೆ ಕಛೇರಿ, ಪಿ.ಬಿ ರಸ್ತೆ ವಾರ್ಡ್ ನಂ.25, 17, ಮಹಾನಗರ ಪಾಲಿಕೆ ಕಛೇರಿ ೩ ವಿಭಾಗ ವಾರ್ಡ್ ನಂ.25, ನೂರಾನಿ ಶಾದಿ ಮಹಲ್, ಇಮಾಂ ನಗರ, ವಾರ್ಡ್ ನಂ.11, ಆಯಿಷಾ ಶಾದಿಮಹಲ್, ಅಕ್ಸ ಮಸೀದಿ ಪಕ್ಕ, ವಾರ್ಡ್ ನಂ.12, ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂದಿರ, ಗಡಿಯಾರ ಕಂಬದ ಹತ್ತಿರ ವಾರ್ಡ್ ನಂ. 18, ಮಲ್ಲಿಕಾರ್ಜುನ ಸಮುದಾಯ ಭವನ, ಆರ್.ಎಂ.ಸಿ. ರಸ್ತೆ, ಬಂಬೂ ಬಜಾರ್ ವಾರ್ಡ್ ನಂ.20, 21, ಗೋಲ್ಡನ್ ಪ್ಯಾಲೇಸ್ ಬೂದಾಳ್ ರೋಡ್, ರಿಂಗ್ ರಸ್ತೆ, ವಾರ್ಡ್ ನಂ. 5, ಯಲ್ಲಮ್ಮ ದೇವಿ ಸಮುದಾಯ ಭವನ, ಜಾಲಿನಗರ ವಾರ್ಡ್ ನಂ. 0.7, ಚಿದಂಬರ ದೇವಸ್ಥಾನ ಸಮುದಾಯ ಭವನ , ನಿಟ್ಟುವಳ್ಳಿ ವಾರ್ಡ್ ನಂ. 0.29, ಅಂಬೇಡ್ಕರ್ ಸಮುದಾಯ ಭವನ, ಗಾಂಧಿ ನಗರ ವರ‍್ಡ್ ನಂ.1 ಇಲ್ಲಿ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!