school; ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ | ನೂತನ ಅಧಿಕಾರಿಗೆ ಅಭಿನಂದನೆ

ದಾವಣಗೆರೆ, ಆ.30 : ಇಂದು ಬೆಂಗಳೂರಿನಿಂದ ಹಿರಿಯ ಸಮಾಜ ಸೇವಕರು, ಗೋ ಪ್ರೇಮಿಗಳಾದ ಮಹೇಂದ್ರ ಮುನೋತ್ ರವರು ದಾವಣಗೆರೆಗೆ ಆಗಮಿಸಿ ಇಲ್ಲಿರುವ ರಶ್ಮಿ ಶಾಲೆಗೆ(school) ಭೇಟಿ ನೀಡಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದರು.

ಈ ವೇಳೆ ದಾವಣಗೆರೆಯ ಜೈನ್ ಸಮಾಜದ ಮುಖಂಡರಾದ ಗೌತಮ್ ಜೈನ್, ಅಶೋಕ್ ಜೈನ್, ದೀಪಕ್ ಜೈನ್, ಸುನಿಲ್ ಜೈನ್, ಪ್ರೀತಮ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

****

ದಾವಣಗೆರೆ ಜಿಲ್ಲಾ ಆರೋಗ್ಯ -ಕುಟುಂಬ ಕಲ್ಯಾಣ ಇಲಾಖೆ ನೂತನ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ||ಷಣ್ಮುಖಪ್ಪ ನವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಹಿಂದಿನ ಸದಸ್ಯರಾದ ಟಿಂಕರ್ ಮಂಜಣ್ಣ,ಮಾಜಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಮಧುರಾ ಕೊಟ್ರೇಶ್,ಕರುನಾಡ ಸಮರ ಸೇನೆ ಜಿಲ್ಲಾ ಅಧ್ಯಕ್ಷರಾದ ಮಾಲತೇಶ್ ಜಿ.ಎಚ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!