ಪಾಲಿಕೆಯಲ್ಲಿ ಅಕ್ರಮ ಡೋರ್ ನಂಬರ್ ಹಗರಣ ತನಿಖೆಗೆ ಸ್ವಾಗತ – ಮಾಜಿ ಮೇಯರ್ ಉಮಾ ಪ್ರಕಾಶ್

ನನ್ನ ಆರೋಪ ಸುಳ್ಳು ಎಂದು ಸಾಬೀತು ಮಾಡಿದರೆ ಸದಸ್ಯತ್ವಕ್ಕೆ ರಾಜೀನಾಮೆ : ಉಮಾ ಪ್ರಕಾಶ್

ದಾವಣಗೆರೆ : ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯರು ಪತ್ರಿಕೆ ಗೋಷ್ಠಿ ನಡೆಸಿ ಅಕ್ರಮ ಡೋರ್ ನಂಬರ್ ಹಗರಣಗಳನ್ನು ತನಿಖೆಗೆ ಒಳ ಪಡಿಸಲು ಒತ್ತಾಯಿಸಿರುವುದನ್ನು ಸ್ವಾಗತಿಸುತ್ತೇನೆ. 2013 ರಿಂದ 18ರವರೆಗೂ ನಡೆದ ಹಗರಣಗಳನ್ನೂ ಸಹ ತನಿಖೆಗೆ ಒಳಪಡಿಸಲು ಒತ್ತಾಯಿಸುತ್ತೇನೆ. 2017 ರಿಂದ 18 ರವರೆಗೆ ಈಗಿನ 32 ಅಂದಿನ 35 ನೇ ವಾರ್ಡ್ ನ ಅವರಗೆರೆ ಸರ್ವೇ ನಂಬರ್ 240 ರಿಂದ 244 ರಲ್ಲಿ ನಡೆದಿರುವ ಅಕ್ರಮಗಳನ್ನು ದಾಖಲೆ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿರುತ್ತೇನೆ.

ಸದರಿ ಅಕ್ರಮದ ಬಗ್ಗೆ ಮಾನ್ಯ ಉಪಾಯುಕ್ತರು ಈಗಾಗಲೇ ಸೂಕ್ತ ಕ್ರಮ ವಹಿಸಿ ಡೋರ್ ಡೋರ್ ನಂಬರ್ ರದ್ದುಪಡಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿರುತ್ತಾರೆ. ಅಕ್ರಮ ಡೋರ್ ನಂಬರ್ ವಿಷಯದಲ್ಲಿ ದಾಖಲೆ ತಿದ್ದಿ , ತಪ್ಪಿತಸ್ಥ ರಾಗಿರುವ ಸಿಬ್ಬಂದಿಯನ್ನು ನಿರ್ಧಾಕ್ಷಿಣ್ಯವಾಗಿ ಅಮಾನತು ಮಾಡಿ ಕ್ರಮ ಕೈಗೊಳ್ಳುತ್ತಿರುವ ಮಾನ್ಯ ಆಯುಕ್ತರಾದ ಶ್ರೀಮತಿ ರೇಣುಕಾ ರವರ ಕ್ರಮವನ್ನು ಅದೇ ರೀತಿ ಉಪಯುಕ್ತರಾದ ಶ್ರೀಮತಿ ಲಕ್ಷ್ಮಿ ಅವರು ಸಹ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದನ್ನು ಸ್ವಾಗತಿಸುತ್ತೇನೆ.

ತಪ್ಪಿತಸ್ಥರಿಗೆ ಕೇವಲ ಅಮಾನತು ಶಿಕ್ಷೆ ಆಗಬಾರದು. ಕಳೆದ ಐದು ತಿಂಗಳಲ್ಲಿ ಮಹಾನಗರ ಪಾಲಿಕೆಯ ನಾಲ್ಕು ಜನ ಸಿಬ್ಬಂದಿಗಳು ಬೇರೆ ಬೇರೆ ಸಮಯದಲ್ಲಿ ಅಮಾನತುಕೊಂಡಿದ್ದರೂ ಸಹ ಅಕ್ರಮಗಳನ್ನು ನಡೆಸುವ ಧೈರ್ಯ ತೋರುತ್ತಿದ್ದಾರೆ. ಅವರನ್ನು ಸರ್ಕಾರಿ ಸೇವೆಯಿಂದಲೇ ವಜಾ ಮಾಡುವ ದಿಟ್ಟ ಕ್ರಮವನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕಾಗಿದೆ. ಆದಷ್ಟು ಬೇಗ 32ನೇ ವಾರ್ಡಿನಲ್ಲಿರುವ ದಾವಣಗೆರೆ ಹರಿಹರ ನಗರದಿಂದ ಅನುಮೋದಿತವಾಗಿರುವ ನಕಾಶೆ ಪ್ರಕಾರ ಬಿಟ್ಟಿರುವ ಬಯಲು ಜಾಗಕ್ಕೆ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಿ ಮಹಾನಗರ ಪಾಲಿಕೆಯಿಂದ ಬೇಲಿ ಹಾಕಿಸಿ ಸ್ವಾಧೀನಕ್ಕೆ ಪಡೆಯಲು ಈ ಮೂಲಕ ಒತ್ತಾಯಿಸುತ್ತೇನೆ.

Leave a Reply

Your email address will not be published. Required fields are marked *

error: Content is protected !!