ಲೋಕಲ್ ಸುದ್ದಿ

ನುಡಿದಂತೆ ನಡೆದು ತನ್ನ ಕಾರ್ಯಕರ್ತರನ್ನು ತಲೆಯೆತ್ತಿ ನಡೆಯುವಂತೆ ಮಾಡಿದ ಕಾಂಗ್ರೆಸ್ ಪಕ್ಷ – ಕೆ.ಎಲ್.ಹರೀಶ್ ಬಸಾಪುರ.

ಕಾಂಗ್ರೆಸ್, ಬಿಜೆಪಿ, ಕೆಎಲ್ ಹರೀಶ್ ಬಸಾಪುರ, 5 ಗ್ಯಾರಂಟಿ,

ದಾವಣಗೆರೆ; ಚುನಾವಣೆ ಬಂದ ತಕ್ಷಣ ರಾಜಕೀಯ ಪಕ್ಷಗಳು ನಾನಾ ರೀತಿಯ ಆಶ್ವಾಸನೆಗಳನ್ನು ಮತದಾರರಿಗೆ ನೀಡುತ್ತವೆ ಆಶ್ವಾಸನೆಗಳನ್ನು ಮನೆಮನೆಗೆ ತೆರಳಿ ಮತದಾರರಿಗೆ ತಿಳಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ಮಾಡುವ ಕಾರ್ಯಕರ್ತರಿಗೆ ಗೆದ್ದು ಅಧಿಕಾರಕ್ಕೆ ಬಂದ ನಂತರ ತಮ್ಮ ಪಕ್ಷ ಆಶ್ವಾಸನೆ ಈಡೇರಿಸದಿದ್ದರೆ ಮನೆ ಮನೆಗೆ ತೆರಳಿ ಮತಯಾಚಿಸಿದ ಕಾರ್ಯಕರ್ತರ ಗತಿ ಊಹಿಸಲು ಸಾಧ್ಯವೇ.?

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು, ತಾನು ನೀಡಿದಂತಹ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ತನ್ನ ಪಕ್ಷದ ಕಾರ್ಯಕರ್ತರು ತಮ್ಮ ವಾರ್ಡ್ ಹಾಗೂ ಗ್ರಾಮಗಳಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಿ, “ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ” ಎಂದು ಹೆಮ್ಮೆಯಿಂದ ಹೇಳುವ ಸ್ಥಿತಿ ನಿರ್ಮಾಣ ಮಾಡಿರುವುದಂತೂ ಸತ್ಯ.

ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಯೋಜನೆ, ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ, ಐದು ಕೆಜಿ ಅಕ್ಕಿಯ ಹಣ (10 ಕೆಜಿ ಅಕ್ಕಿ), ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ತನಕ ಉಚಿತ ವಿದ್ಯುತ್ ಯೋಜನೆ, ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಮನೆ ಯಜಮಾನಿಗೆ 2000 ನೀಡುವ ಮೂಲಕ ದೇಶದಲ್ಲಿಯೇ ಯಾವುದೇ ರಾಜ್ಯದಲ್ಲಿ, ಯಾವುದೇ ಸರ್ಕಾರ ಮಾಡದಂತಹ ದಾಖಲೆ ನಿರ್ಮಿಸಿದೆ.

ಸುಳ್ಳು ಆಶ್ವಾಸನೆಗಳ ನೀಡುವ ಮೂಲಕ ಚುನಾವಣೆಯಲ್ಲಿ ಗೆದ್ದು, ಭ್ರಷ್ಟಾಚಾರ ಮಾಡುವ ಮೂಲಕ ಮತದಾರರಿಗೆ ಹಾಗೂ ತನ್ನ ಕಾರ್ಯಕರ್ತರಿಗೆ ಉತ್ತರಿಸಲಾಗದೇ… ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತಿ, ಕಂದಕ ನಿರ್ಮಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ನಡುವೆ ನುಡಿದಂತೆ ನಡೆದು ತನ್ನ ಕಾರ್ಯಕರ್ತರನ್ನು ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಿದ ನನ್ನ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳು.

-ಕೆ.ಎಲ್.ಹರೀಶ್ ಬಸಾಪುರ.

Click to comment

Leave a Reply

Your email address will not be published. Required fields are marked *

Most Popular

To Top