Lingayat; ವೀರಶೈವ ಲಿಂಗಾಯತ ಮಹಾಸಭಾ; ಅ.6ಕ್ಕೆ ಪೂರ್ವಭಾವಿ ಸಭೆ

ದಾವಣಗೆರೆ, ಅ.04: ಅಖಿಲ ಭಾರತ ವೀರಶೈವ ಲಿಂಗಾಯತ (Lingayat) ಮಹಾಸಭಾ ವತಿಯಿಂದ ಬರುವ ಡಿಸೆಂಬರ್ ತಿಂಗಳಲ್ಲಿ 24ನೇ ಮಹಾ ಅಧಿವೇಶನವು ದಾವಣಗೆರೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ಅಕ್ಟೋಬರ್ 6 ರಂದು ದಾವಣಗೆರೆ ನಗರದ ಎಂ.ಬಿ.ಎ.ಕಾಲೇಜು ಆವರಣದಲ್ಲಿ ಮಧ್ಯಾಹ್ನ 12-30 ಗಂಟೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Lingayat; ಶಾಮನೂರು ಶಿವಶಂಕರಪ್ಪ ಮಾತಿಗೆ ಧ್ವನಿಗೂಡಿಸಿದ ಜಯ ಮೃತ್ಯುಂಜಯ ಸ್ವಾಮೀಜಿ

ಈ ಸಭೆಯಲ್ಲಿ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ರಾಷ್ಟ್ರೀಯ ಉಪಾಧ್ಯಕ್ಷರು ಎನ್. ತಿಪ್ಪಣ್ಣ, ಅಥಣಿ ವೀರಣ್ಣ, ಎಸ್.ಎಸ್.ಗಣೇಶ್, ಅಣಬೇರು ರಾಜಣ್ಣ, ವಿನಯ್ ಕುಲಕರ್ಣಿ, ಪ್ರಭಾಕರ್ ಕೋರೆ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹಾಗೂ ಇತರರು ಉಪಸ್ಥಿತರಿರುತ್ತಾರೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!