ದಾವಣಗೆರೆ ನಗರದ, 24 ನೇ ವಾರ್ಡಿನ ಮೋದಿ ‌ರಸ್ತೆಯಲ್ಲಿ ವಿಶ್ವ ಯೋಗ ದಿನ‌ ಆಚರಣೆ

ದಾವಣಗೆರೆ: ದಾವಣಗೆರೆ ನಗರದ, ವಾರ್ಡ್ 24 ರಲ್ಲಿ, ವಿಶ್ವ ಯೋಗ ದಿನದ ಅಂಗವಾಗಿ, ಯುವ ಸಂಕಲ್ಪ ಪ್ರತಿಷ್ಟಾನದ ವತಿಯಿಂದ, ಡಾ. ಎಂ.ಸಿ ಮೋದಿ‌ ರಸ್ತೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ, ಶ್ರೀ Prasanna Kumar  ರವರ ನೇತೃತ್ವದಲ್ಲಿ, ಯೋಗ ಸಂಕಲ್ಪ ಅಭಿಯಾನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು ಯೋಗ ಮತ್ತು ಆಯುರ್ವೇದ, ಭಾರತ ಸಂಸ್ಕೃತಿಯ‌ ಪ್ರತೀಕ ಹಾಗು ಪ್ರಾಚೀನ ಪರಂಪರೆಗಳು, ಇವುಗಳನ್ನು ವಿಶ್ವ ಮಟ್ಟಕ್ಕೆ ಶ್ರೀ Narendra Modi ನೇತೃತ್ವದ ಸರ್ಕಾರ ಕೊಂಡೊಯ್ದಿದೆ, ಇದು ನಮಗೆ ಹೆಮ್ಮೆಯ ಸಂಗತಿ ಎಂದರು, ನಂತರ ಮಾತನಾಡಿದ

ಪಾಲಿಕೆ ಸದಸ್ಯರಾದ ಶ್ರೀ ಪ್ರಸನ್ನ ಕುಮಾರ್, ಯೋಗ ಎಂಬುದು ವ್ಯಕ್ತಿಯ ಪ್ರಜ್ಞೆಯನ್ನು ಆಂತರಿಕ ಆತ್ಮಕ್ಕೆ ಅರ್ಪಿಸುವ ಕ್ರಿಯೆಯನ್ನು ಸೂಚಿಸುತ್ತದೆ, ವ್ಯಕ್ತಿಯ ಮನಸ್ಸು ಮತ್ತು ದೇಹದ ನಡುವೆ ಶಾಂತಿಯನ್ನು ತರಲು ಕೇಂದ್ರೀಕರಿಸುತ್ತದೆ. ಸಂಸ್ಕೃತದ ಯುಜ್ ಮತ್ತು ಯುಜಿರ್ ಪದದಿಂದ ಯೋಗ ಶಬ್ಧ ಬೆಳೆದುಬಂದಿತು. ‘ಒಗ್ಗೂಡಿಸಲು’ /ಒಟ್ಟಿಗೆ ಸೇರಲು ಅರ್ಥ ಹೊಂದಿದೆ. ಈ ಹಿಂದೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಂಬಿಸುವ ದಿನಗಳನ್ನು ಆಚರಿಸುತ್ತಿದ್ದರು. ಆದರೆ, ಪ್ರಧಾನಿಗಳು ನಮ್ಮ ಸನಾತನ ಸಂಸ್ಕೃತಿಯನ್ನು ಭಾರತೀಯರ ಮನದಲ್ಲಿ ಬೇರೂರುವಂತೆ ಮಾಡಿ, ಇಂದು ಭಾರತೀಯರೂ ಸೇರಿ ವಿಶ್ವವೇ ನಮ್ಮ ಸಂಸ್ಕೃತಿಯ ಅಂಗವಾಗಿರುವ ಯೋಗವನ್ನು ಒಪ್ಪಿಕೊಂಡು, ವಿಶ್ವ ಸಂಸ್ಥೆಯಿಂದ ಜೂನ್ 21 ವಿಶ್ವ ಯೋಗ ದಿನಾಚರಣೆಯನ್ನು ಘೋಷಣೆ ಮಾಡಿ ಐತಿಹಾಸಿಕ ಬದಲಾವಣೆ ಇದಾಗಿದೆ, ಇದಕ್ಕೆ ಸಂಪೂರ್ಣವಾಗಿ ಕಾರಣೀ ಭೂತರಾದ ಶ್ರೀ ನರೆಂದ್ರ ಮೋದಿರವರಿಗೆ ಧನ್ಯವಾದಗಳನ್ನು ಅರ್ಪಿಸಿದರು  ಹಾಗು ಈ ಬಾರಿ ಯೋಗಾ ದಿನವನ್ನು Service For Humanity ಎಂಬ ಧೇಯದೊಂದಿಗೆ ಆಚರಿಸಲು ಮಾನ್ಯ ಪ್ರಧಾನಿಗಳು ಸೂಚಿಸಿದ್ದಾರೆ‌ ಎಂದು ತಿಳಿಸಿದರು.

ಆನಂತರ ಡಾ. ಶಿವಯೋಗಿ ಸ್ವಾಮಿ ಯೋಗ ಮಾತನಾಡಿ, ಯೋಗ ವೆಂಬುದು ಕೇವಲ ವ್ಯಯಾಮವಲ್ಲ ಅದು ಇಂದು ಜೀವನ ಪದ್ದತಿ, ಇದನ್ನು ಪ್ರತಿ ನಿತ್ಯ ರೂಢಿಸಿಕೊಳ್ಳಬೇಕು ಎಂದು ಹೇಳಿದರು, ಆರೋಗ್ಯಕರ ಜೀವನಕ್ಕೆ ಯೋಗ ಮಾತ್ರ ಒಂದೇ ಉಪಾಯ ಎಂದರು. ಈ‌ ಸಂದರ್ಭದಲ್ಲಿ ಮಾಜಿ ಮೇಯರ್ ಸುಧಾ ಜಯರುದ್ರೇಶ್, ನಿಕಟಪೂರ್ವ ಮಹಾ ಪೌರದಾದ ಶ್ರೀ ಎಸ್.ಟಿ ವೀರೇಶ್, ಪಾಲಿಕೆ ಸದಸ್ಯರಾದ ಪೈಲ್ವಾನ್ ವಿರೇಶ್, ದೂಡಾ ಅಧ್ಯಕ್ಷರಾದ ಸುರೇಶ್, ಬಿಜೆಪಿ ಮುಖಂಡರಾದ ಶಿವರಾಜ್ ಪಾಟಿಲ್, ಮಹಾ ಶಕ್ತಿ ಕೇಂದ್ರ ಪ್ರಮುಖ್ ಪದ್ಮನಾಭ ಶೆಟ್ರು, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ಕಿರಣ್, ಶಂಕರ್, ಸುನೀಲ್ ಮತ್ತು ಇತರೆ ಮುಖಂಡರು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

error: Content is protected !!