ಬೆಣ್ಣೆನಗರಿಯಲ್ಲಿ ಜೀ ಕನ್ನಡದ ಲಕ್ಷ್ಮೀನಿವಾಸ ಕನಸಿನಜಾತ್ರೆ

ಲಕ್ಷ್ಮೀನಿವಾಸ

ಜೀಕನ್ನಡ ವಾಹಿನಿಯ ಹೊಚ್ಚ ಹೊಸ ಧಾರಾವಾಹಿ ಲಕ್ಷ್ಮೀನಿವಾಸ ಇತ್ತೀಚೆಗಷ್ಟೆ ವೀಕ್ಷಕರ ಮುಂದೆ ಬಂದು ಜನ ಮೆಚ್ಚಿಗೆಗಳಿಸುತ್ತಿರುವ ಈಹೊತ್ತಲ್ಲೆ, ವಾಹಿನಿಯು ಮಧ್ಯಮ ವರ್ಗದ ಕನಸನ್ನ ನನಸು ಮಾಡಲು ಒಂದು ವಿಭಿನ್ನ ಮೇಳವನ್ನ ಆಯೋಜಿಸಿದೆ.

ಇತ್ತೀಚೆಗಷ್ಟೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಆಯೋಜಿಸದ್ದ ಈ ಕನಸಿನ ಜಾತ್ರೆಗೆ ಉತ್ತಮ ಪ್ರತಿಕ್ರಿಯೇ ಬಂದ ಹಿನ್ನೆಲೆಯಲ್ಲಿ ಜೀ ಕನ್ನಡ ವಾಹಿನಿಯು ಈ ಕನಸಿನ ಜಾತ್ರೆಯನ್ನ ಬೆಣ್ಣೆನಗರಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದೆ.

ಲಕ್ಷ್ಮೀನಿವಾಸ ಕನಸಿನಜಾತ್ರೆ ಎಂಬ ಹೆಸರಿನ ಈ ಮೇಳದಲ್ಲಿ,ನಿಮ್ಮಕನಸಿನ ಮನೆಯನ್ನ ಕಟ್ಟಲು ಸೂಕ್ತ ಹಣದ ಸವಲತ್ತನ್ನ ನೀಡುವ ಬ್ಯಾಂಕುಗಳು, ನಿಮ್ಮಬಯಕೆಯ ವಡೆವಗಳನ್ನ ಮನೆಗೆ ಕೊಂಡೊಯ್ಯಲು ಉತ್ತಮ ಗುಣಮಟ್ಟದ ಸ್ಕೀಮ್ ನೀಡುವ ಆಭರಣದ ಅಂಗಡಿಗಳು,ವಧುವರರನ್ನ ಒಂದಾಗಿಸು ನಾಡಿನ ಪ್ರತಿಷ್ಟಿತ ಮ್ಯಾಟ್ರಿಮೋನಿ ಸಂಸ್ಥೆಗಳು ಸೇರಿದಂತೆ, ನಿಮ್ಮಬಾಯ್ ರುಚಿಗೆ ತಕ್ಕಂತೆ ವಿವಿಧ ಬಗೆಯ ತಿಂಡಿತಿಸಿಸುಗಳ ಮಳಿಗೆಗಳು ಈ ಮೇಳದಲ್ಲಿ ನಿಮಗಾಗಿ ಕಾದಿದೆ.

ಜೀ ಕನ್ನಡ ವಾಹಿನಿಯ ನೆಚ್ಚಿನ ರಿಯಾಲಿಟಿ ಶೋಗಳಾದ ಸರಿಗಮಪ-20 ಮತ್ತು ಡ್ರಾಮಾ ಜೂನಿಯರ್ಸ್ ಸ್ಪರ್ಧಿಗಳು ನಿಮ್ಮನ್ನ ಮನೋರಂಜಿಸಲು ಲಕ್ಷ್ಮೀನಿವಾಸ ಕನಸಿನ ಜಾತ್ರೆ ಮೇಳದಲ್ಲಿ ನಿಮಗಾಗಿ ಕಾದ್ದಿದ್ದಾರೆ ಇದೇ ಶನಿವಾರ 3-02-2024 ಸಂಜೆ 6 ಗಂಟೆಗೆ ಮುರುಘರಾಜೇಂದ್ರ ಮಠದ ಮೈದಾನ, ಜಯದೇವ ಸರ್ಕಲ್,ಪಿ.ಜೆ ಬಡಾವಣೆ ದಾವಣಗೆರೆಯಲ್ಲಿ ಆಯೋಜಿಸಿರುವ ಈ ಮೇಳದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನ ಒಗ್ಗರಣೆಡಬ್ಬಿ ಖ್ಯಾತಿಯ ನಿರೂಪಕ ಮುರುಳಿ ನಿರ್ವಹಿಸಲ್ಲಿದ್ದು,ಈ ಕನಸಿನ ಜಾತ್ರೆಯು ಮುಂದಿನ ದಿನಗಳಲ್ಲಿ ಕರುನಾಡಿನ ಆಯ್ದ ಜಿಲ್ಲೆಗಳಲ್ಲಿ ನಡೆಸಲು ಜೀ ಕನ್ನಡ ವಾಹಿನಿ ನಿರ್ಧರಿಸಿದೆ.

Leave a Reply

Your email address will not be published. Required fields are marked *

error: Content is protected !!