ಎಸ್. ಎಸ್. 91 ನೇ ಹುಟ್ಟು ಹಬ್ಬ ಹಿನ್ನೆಲೆ, ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿದ ಪಾಲಿಕೆ ಕಾಂಗ್ರೆಸ್ ಸದಸ್ಯರು

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರ ವತಿಯಿಂದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಜನ್ಮದಿನದ ಅಂಗವಾಗಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸದಸ್ಯರಿಗೆ ದಿನಸಿ ಕಿಟ್‌ನ್ನು ವಿತರಿಸಲಾಯಿತು. ನಗರದ ಐಎಂಎ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಆಗಮಿಸಿ, ಕಾಂಗ್ರೆಸ್ ಮುಖಂಡರು ತಂದಿದ್ದ ಕೇಕ್‌ನ್ನು ಕಟ್ ಮಾಡಿದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ, ಅಬ್ದುಲ್ ಲತೀಫ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕಾಂಗ್ರೆಸ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಯೂಬ್ ಫೈಲ್ವಾನ್, ಮುಖಂಡ ಗಣೇಶ್ ಹುಲ್ಲಮನಿ ಇದ್ದರು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ, ಹಿರಿಯ ಪತ್ರಕರ್ತರಾದ ತಾರಾನಾಥ್, ಬಸವರಾಜ್ ದೊಡ್ಡಮನಿ, ವಿವೇಕ್ ಬದ್ಧಿ, ಹೆಚ್.ಎಂ.ಪಿ. ಕುಮಾರ್, ಪ್ರಕಾಶ್, ರಮೇಶ್ ಜಾಗೀರದಾರ್, ಬಸವರಾಜ್, ರಾಮಪ್ಪ, ವಿಜಯ ಜಾಧವ್, ರವಿ ಬಾಬು, ನಂದೀಶ್, ಸಿದ್ದಯ್ಯ ಒಡೆಯರ್, ಬದರಿನಾಥ, ಚನ್ನಬಸವರ ಶೀಲವಂತ್, ಸಾಗರ್,  ಮತ್ತಿತರರು ಭಾಗವಹಿಸಿ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಶುಭ ಕೊರಿದರು.

Leave a Reply

Your email address will not be published. Required fields are marked *

error: Content is protected !!