land grabbing; ಬೀಡಿ ಕಾರ್ಮಿಕರ ಸಂಘದ ಜಮೀನು ಕಬಳಿಸಲು ಯತ್ನ; ಎಂ.ರಾಜಾಸಾಬ್ ಆರೋಪ  

ದಾವಣಗೆರೆ, ಅ.23: ದಾವಣಗೆರೆ ಬೀಡಿ ಕಾರ್ಮಿಕರ ಹಾಗೂ ಅಲ್ಪಸಂಖ್ಯಾತರ ವಿವಿಧೋದ್ದೇಶ ಕಲ್ಯಾಣ ಸಹಕಾರ ಸಂಘ ನಿಯಮಿತದ ಹೆಸರಿನಲ್ಲಿ ಸದಸ್ಯರಿಗೆ ಆರ್‌ಸಿಸಿ ಮನೆ ಮತ್ತು ನಿವೇಶನ ಮಾಡಿ ಹಂಚಿಕೆ ಮಾಡುವ ಉದ್ದೇಶದಿಂದ ಸಂಘದ ಸದಸ್ಯರ ಹೂಡಿಕೆಯ ಹಣದಿಂದ ಖರೀದಿಸಲಾದ ಜಮೀನಿನ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಜಮೀನು ಕಬಳಿಸಲು (land grabbing) ಕೆಲವು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಮೀನು ಉಳಿಸಿಕೊಡಬೇಕೆಂದು ಸಂಘದ ಅಧ್ಯಕ್ಷ ಎಂ. ರಾಜಾಸಾಬ್ ಕೋರಿದ್ದಾರೆ.

ದೊಡ್ಡ ಬೂದಾಳ್ ಸರ್ವೇ ನಂಬರ್ 45/1.2 ಮತ್ತು 46/2 ಮತ್ತು 47/1ಎ ಹಾಗೂ 47/1ಬಿ ರ ಒಟ್ಟು 8.23 ಎಕರೆ ಜಮೀನನ್ನು ಸಂಘದ ಸದಸ್ಯರ ಹೂಡಿಕೆಯ ಹಣದಿಂದ ನಮ್ಮ ಸಂಘದ ಹೆಸರಿನಲ್ಲಿ ಖರೀದಿಸಿ, ಸಾಲ ಪಡೆಯಲು ತಹಶೀಲ್ದಾರ ದಾವಣಗೆರೆ ಇವರ ಹೆಸರಿಗೆ ಜಮೀನನ್ನು ಆಧಾರ ಮಾಡಿರುತ್ತೇವೆ. ಆದರೆ ಆಸ್ತಿಯನ್ನು ಕಬಳಿಸಲು ಪಹಣಿಯನ್ನು ಆಶ್ರಯ ಯೋಜನೆ ಸಮಿತಿ ದಾವಣಗೆರೆ ಇವರ ಹೆಸರಿಗೆ ವರ್ಗಾವಣೆ ಮಾಡಿಸಿರುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

teachers; ಪ್ರಾಥಮಿಕ ಶಿಕ್ಷಕರ ಸ್ಥಳ ಆಯ್ಕೆಯ ಕೌನ್ಸಿಲಿಂಗ್ ಪ್ರಕ್ರಿಯೆ

ಈ ಸಂದರ್ಭದಲ್ಲಿ ಟಿ.ಅಸ್ಗರ್, ಕೋರ್ಟ್ ಅಕ್ಬರ್, ಖಾಸಿಂ ಸಾಬ್, ಫೈರೋಜ್, ರಿಯಾಜ್, ಇಬ್ರಾಹಿಂ, ಮಹಮ್ಮದ್ ಅಲಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!