ಅವಮಾನ ಸವಾಲಾಗಿ ಸ್ವೀಕಾರ : ಸೊಪ್ಪಿನಿಂದ ಸಂಪಾದ ಅನ್ನದಾತ

ದಾವಣಗೆರೆ ( ಹರಪನಹಳ್ಳಿ ): ಅಪಮಾನವನ್ನೂ ಸವಾಲಾಗಿ ಸ್ವೀಕರಿಸಿ, ಕೆಲಸದಲ್ಲಿ ನಿಷ್ಠೆ, ಶ್ರದ್ಧೆವಹಿಸ, ಶ್ರಮ ಹಾಕಿದರೆ ಸನ್ಮಾನ ಖಚಿತ ಎಂಬ ನಾಣ್ನುಡಿಗೆ ಇಲ್ಲೊಬ್ಬ ರೈತ ನಿದರ್ಶನವಾಗಿ ನಿಂತಿದ್ದಾರೆ..!

ಹೌದು, ಗೆಳೆಯನ ಹೊಲದಲ್ಲಿ ಬೆಳೆದಿದ್ದ ಸೊಪ್ಪು ಮಾರಾಟ ಮಾಡಲು ಹೋಗಿದ್ದ ಸಂದರ್ಭದಲ್ಲಿ ಮಧ್ಯವರ್ತಿ ಮತ್ತು ರೈತರ ನಡುವೆ ಚೌಕಾಸಿ ನಡೆದಿತ್ತು, ಮಧ್ಯ ಪ್ರವೇಶಿಸಿ ಬೆಲೆ ಕುದುರಿಸಲು ಪ್ರಯತ್ನಿಸಿದ ರೈತ ಸುಣಗಾರ ಕೆಂಚಣ್ಣ ಅವರಿಗೆ ಮಧ್ಯವರ್ತಿ ಅಪಮಾನ ಮಾಡಿ ಕಳಿಸಿದ. ಅದನ್ನೇ ಸವಾಲಾಗಿ ಸ್ವೀಕರಿಸಿದ ರೈತ ‘ಕೆಂಚಣ್ಣ‘ ಈಗ ಸೊಪ್ಪುಗಳನ್ನು ಬೆಳೆದು, ವಿವಿಧ ಗ್ರಾಮಗಳ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಲಕ್ಷಾಂತರ ರೂ., ಸಂಪಾದಿಸುವುದಷ್ಟೆ ಅಲ್ಲ, ಎಂಟು ಕುಟುಂಬಗಳಿಗೆ ಕೆಲಸ ನೀಡಿ ಅನ್ನದಾತರು ಆಗುವ ಮೂಲಕ ಅಂದಿನ ಅವಮಾನವನ್ನ ಸವಾಲಾಗಿ ಸ್ವೀಕರಿಸಿ, ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ಸುಣಗಾರ ಕೆಂಚಣ್ಣ (40) ಇವರು ಆರು ವರ್ಷಗಳಿಂದ ತಮ್ಮ ಸಹೋದರನ ಒಂದು ಎಕರೆ ಹೊಲವನ್ನೂ ಸೇರಿ ಮೂರು ಎಕರೆ ಜಮೀನಿನಲ್ಲಿ ಪಾಲಕ್, ರಾಜಗಿರಿ, ಸಬ್ಬಾಸಕಿ, ಉಳಿಸೊಪ್ಪು, ಮೂಲಂಗಿ ಬೆಳೆದು ಹಣ ಸಂಪಾದಿಸುತ್ತಿದ್ದಾರೆ. ಇವರಿಗೆ ಇವರ ಕುಟುಂಬವೂ ಸಾಥ್ ಕೊಟ್ಟಿದೆ.

ಮೂರು ಎಕರೆಯಲ್ಲಿ ಪ್ರತಿ ದಿನ 4 ಸಾವಿರದಿಂದ 5 ಸಾವಿರ ಸಿವುಡು ಸೊಪ್ಪು ಕಠಾವು ಮಾಡುತ್ತಾರೆ. ನಿತ್ಯ ಹತ್ತಿರದ ಕೊಟ್ಟೂರು, ಹಡಗಲಿ, ಹರಪನಹಳ್ಳಿ, ಇಟ್ಟಿಗಿ ಸೇರಿ ವಿವಿಧ ಗ್ರಾಮದ ಸಂತೆಗಳಿಗೆ ಬೈಕ್‌ನಲ್ಲಿಯೇ ಸೊಪ್ಪು ತೆಗೆದುಕೊಂಡು ಹೋಗಿ ನೇರವಾಗಿ ವ್ಯಾಪಾರಸ್ಥರಿಗೆ ಹೋಲ್‌ಸೇಲ್‌ ದರದಲ್ಲಿ ಮಾರಾಟ ಮಾಡುತ್ತಾರೆ.

ವಾರದ ಏಳು ದಿನವೂ ಪ್ರತಿ ಹತ್ತು ಮಡಿಗೆ ಒಂದು ಅಂಕಣ ಮಾಡಿ, ಅದರಲ್ಲಿ 28 ದಿನಗಳ ಅಂತರದಲ್ಲಿ ಸೊಪ್ಪಿನ ಬೀಜ ನಾಟಿ ಮಾಡಿದ್ದಾರೆ. ಎಕರೆಗೆ 15 ಸಾವಿರ ರೂ., ದಿಂದ 20 ಸಾವಿರ ರೂ., ಖರ್ಚು ಮಾಡಿ ಪ್ರತಿ ದಿನವೂ 5 ಸಾವಿರ ರೂ., ಸಿವುಡಿನಷ್ಟು ಸೊಪ್ಪು ಕತ್ತರಿಸಿ ಮಾರುತ್ತಾರೆ. ಹೊಸ ತಳಿಯ ಬಗ್ಗೆಯೂ ಆಸಕ್ತಿ ಹೊಂದಿರುವ ಇವರು, ಹೊಸ ಹೊಸ ಬೆಳೆಗಳನ್ನು ಬೆಳೆಯಬೇಕೆನ್ನುವ ಹಂಬಲ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!