ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢವಾಗಬಹುದು –  ಶಾಸಕರಾದ ಬಸವರಾಜು ವಿ ಶಿವಗಂಗಾ

ಚನ್ನಗಿರಿ : ಹೈನುಗಾರಿಕೆಗೆ ನಮ್ಮ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ರೈತ ಕುಟುಂಬಗಳು ಆರ್ಥಿಕಾವಾಗಿ ಸದೃಢವಾಗಬಹುದು ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ತಾಲ್ಲೂಕಿನ ಹಿರೇಕೋಗಳೂರು ಗ್ರಾಮದಲ್ಲಿ  ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ  ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ನಡೆದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಆರೋಗ್ಯ ಶಿಬಿರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಈ ವಿಷಯ ತಿಳಿಸಿದರು.

ಮಿಶ್ರ ತಳಿಯ ಪಶು ಸಾಕಾಣಿಕೆಯಿಂದ ಲಾಭ ಪಡೆದು ಒಂದು ಕುಟುಂಬವನ್ನು ನಿರ್ವಹಣೆ ಮಾಡಬಹುದು. ಕೃಷಿ ಜೊತೆ ಉಪ ಕಸುಬಂತೆ ರೈತರು ಮಾಡಬೇಕು ಎಂದರು. ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಉತ್ತಮವಾಗಿ ಸುಂದರವಾಗಿದ್ದ ಕರುಗಳಿಗೆ ಬಹುಮಾನ ಕೂಡ ನೀಡಲಾಯಿತು.ಈ ವೇಳೆ ಪಶು ವೈದ್ಯಾಧಿಕಾರಿಗಳು ಗ್ರಾಮದ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಪಕ್ಕದ ತಾಲೂಕಿನ ಪಶು ವೈದ್ಯಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!