ರಿಯಲ್ ಎಸ್ಟೇಟ್ ಬಿಟ್ಟು ಕೃಷಿ ಮಾಡಿ, ಯುವಕರಿಗೆ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ್ ಶಿವಗಂಗಾ ಕರೆ

ಚನ್ನಗಿರಿ :  ನಲ್ಲೂರು ಜಾಮೀಯ ಮಸೀದಿಗೆ ಸಂಬಂಧಿಸಿದ 5 ಎಕೆರೆ ಜಮೀನಿನಲ್ಲಿ  ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ರವರು ಹೊಸ ತೋಟಕ್ಕೆ ಮೊದಲ ಅಡಿಕೆ ಸಸಿ ನೆಟ್ಟರು. ಈ ವೇಳೆ ಮಾತನಾಡಿದ ಅವರು ಮಸೀದಿಗೆ ಸಂಬಂಧಿಸಿದ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದು ಸಂತಸದ ವಿಚಾರ. ಮಸೀದಿಯಲ್ಲಿ ಕೇವಲ ಪ್ರಾರ್ಥನೆ ಮಾತ್ರವಲ್ಲ ಕೃಷಿ ಚಟುವಟಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಈ ಮೂಲಕ ದೇಶದ ರೈತರಿಗೆ ಸಲ್ಲಿಸಿಸ ಗೌರವ ಎಂದರು. ಇತ್ತೀಚೆಗೆ ಸ್ವಲ್ಪ ಜಮೀನಿದ್ದರು ಕಮರ್ಷಿಯಲ್ ಹಾಗೂ ರಿಯಲ್ ಎಸ್ಟೇಟ್ ಮಾಡುವಂತವರೇ ಹೆಚ್ಚು ಇಂಥವರ ನಡುವೆಯೂ ಕೃಷಿ ಮಾಡುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದರು. ಈ ಮೊದಲು ಕೂಡ ಮಸೀದಿಗೆ ಸಂಬಂಧಿಸಿದ ಜಮೀನಿನಲ್ಲಿ ಅಡಿಕೆ ತೋಟ ಮಾಡಲಾಗಿತ್ತು. ಇದೀಗ ಉಳಿದ ಜಮೀನಿನಲ್ಲೂ ಅಡಿಕೆ ತೋಟ ಮಾಡಲಾಗುತ್ತಿದೆ. ಇದರಿಂದ ಆರ್ಥಿಕವಾಗಿಯೂ ಬೆಳವಣಿಗೆ ಕಾಣಬಹುದು ಎಂದರು.

ದೇವಸ್ಥಾನ, ಮಠ ಮಂದಿರಗಳು ಶಿಕ್ಷಣ, ದಾಸೋಹ ಜೊತೆಗೆ ಕೃಷಿ ಕೂಡ ಮಾಡುತ್ತಿವೆ. ಇದೀಗ ನಲ್ಲೂರಿನ ಜಾಮಿಯಾ ಮಸೀದಿಯ ಮುಸ್ಲಿಂ ಬಾಂಧವರು ಜಮೀನಿನಲ್ಲಿ ಅಡಿಕೆ ತೋಟ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ಈ ತೋಟ ಮುಂದಿನ ದಿನಗಳಲ್ಲಿ ಉತ್ತಮ ಸಂವೃದ್ಧಿಯಾಗಿ ಬೆಳೆದು ಆರ್ಥಿಕವಾಗಿ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಾಮೀಯ ಮಸೀದಿ ಅಧ್ಯಕ್ಷರಾದ ಅಜೀಜ್ ಅಹ್ಮದ್, ಕಾರ್ಯದರ್ಶಿಗಳಾದ ಜಾಕೀರ್, ತಾ.ಪಂ.ಸದಸ್ಯರಾದ ಇಮ್ತಿಯಾಜ್ ಬೇಗ್, ತಾ.ಪಂ. ಮಾಜಿ ಸದಸ್ಯರಾದ ಮನ್ಸೂರ್ ಬೇಗ್ ಹಾಗೂ ನಿಸಾರ್ ಬೇಗ್ ಸನಿವುಲ್ಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!