ಕೊಲೆ ಆರೋಪಿಗಳಿಗೆ ಸಹಾಯ ಧಾರವಾಡ ಪತ್ರಕರ್ತನ ಬಂಧಿಸಿದ ದಾವಣಗೆರೆ ಪೊಲೀಸ್

ಕೊಲೆ ಆರೋಪಿಗಳಿಗೆ ಸಹಾಯ ಧಾರವಾಡ ಪತ್ರಕರ್ತನ ಬಂಧಿಸಿದ ದಾವಣಗೆರೆ ಪೊಲೀಸ್

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ – ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದ ಬಳಿ ನಡೆದ ಡಬ್ಬಲ್​ ಅಟ್ಯಾಕ್​ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ದಾವಣಗೆರೆ ಎಸ್​ಪಿ ರಿಷ್ಯಂತ್ ಈ ಕೇಸ್​ನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಮುಖ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಹಿನ್ನೆಲೆ ದೊರೆತಿದ್ದರಿಂದ ಮೆಹಬೂಬ್ ಮುನವಳ್ಳಿ ಎಂಬ ದಾರವಾಡದ ಪತ್ರಕರ್ತನನ್ನ ಬಂಧಿಸಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ನಡೆದ ಶಿವಮೊಗ್ಗ ರೌಡಿಸಂನ ಪ್ರತಿಕಾರದ ದಾಳಿಯಲ್ಲಿ ಆರೋಪಿಗಳು ಯಾರು ಸಹ ತಪ್ಪಿಸಿಕೊಳ್ಳಬಾರದು ಎಂದು ಬೇರೆಯದ್ದೆ ಬಲೆಯನ್ನು ದಾವಣಗೆರೆ ಪೊಲೀಸರು ಹೆಣೆದು ಮಟ್ಟ ಹಾಕಲು ನಿಂತಿದ್ದಾರೆ.

ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಮರ್ಡರ್ ನಡೆದ ದಾಳಿಯ ಹಿಮ್ಮೇಳದಲ್ಲಿ ಯಾರ್ಯಾರಿದ್ದಾರೆ? ಫೈನಾನ್ಶಿಯಲ್ ಸಪೋರ್ಟ್ ಮಾಡಿದ್ದು ಯಾರು? ಎಂಬಂತಹ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟಿದ್ದಾರೆ ದಾವಣಗೆರೆ ಪೊಲೀಸರು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಆರೋಪಿಗಳನ್ನ ಸೆರೆಂಡರ್ ಮಾಡಿಸಲು ವೇದಿಕೆ ಕಲ್ಪಿಸಿದ ಆರೋಪದ ಮೇಲೆ ಓರ್ವ ಪ್ರಖ್ಯಾತ ಖಾಸಗಿ ಟಿವಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿ ಎಂಬುವವರನ್ನು ವಶಕ್ಕೆ ಪಡೆದಿದೆ. ಧಾರವಾಡದ ಪತ್ರಕರ್ತ ನನ್ನ ಎತ್ತಾಕಿಕೊಂಡು ಬಂದಿರುವ ನ್ಯಾಮತಿ ಪೊಲೀಸರು, ಆತನನ್ನ ಠಾಣೆಯಲ್ಲಿ ಕೂರಿಸಿಕೊಂಡು, ಆರೋಪಿಗಳ ಶರಣಾಗತಿ ಬಗ್ಗೆಯ ಎಲ್ಲ ರೀತಿಯ ಪ್ಯಾಕೆಜ್​ ಬಗ್ಗೆ ಇನ್ವೆಸ್ಟಿಗೆಷನ್ ನಡೆಸ್ತಿದೆ. ಅಷ್ಟೆಅಲ್ಲದೆ, ದಾಳಿ ವೇಳೆ ಇದ್ದ ಉಳಿದ ಆರೋಪಿಗಳಿಗಾಗಿ ತಲಾಶ್ ನಡೆಸಿದೆ.

ಈ ಬಗ್ಗೆ ದಾವಣಗೆರೆ ಎಸ್ ಪಿ ರಿಷ್ಯಂತ್ ಅವರಿಗೆ ಪತ್ರಕರ್ತನ ಬಂಧನದ ವಿಚಾರವಾಗಿ ಅನೇಕ ರಾಜಕಾರಣಿಗಳು, ಅಧಿಕಾರಿಗಳು, ಮಾಹಿತಿ ಕೇಳಿದ್ದಾರೆ, ಕೆಲವರಂತು ಒಂದು ಹೆಜ್ಜೆ ಮುಂದೆ ಹೋಗಿ ಏನಾದ್ರೂ ಮಾಡೋಕೆ ಸಾಧ್ಯನ ಅಂತಾ ಕೇಳಿದ್ದಾರೆ, ಇವೆಲ್ಲವನ್ನೂ ಮೀರಿ ಎಸ್ ಪಿ ರಿಷ್ಯಂತ್ ಅವರ ಸ್ಟೈಲ್ ನಲ್ಲಿ ಅವರಿಗೆ ಸರಿಯಾದ ಉತ್ತರ ಹೇಳಿದ್ದಾರಂತೆ. ಇದರಿಂದ ಕೆಲವರು‌ ಊರಿದು ಹೋಗಿದ್ದಾರಂತೆ. ಏನಪ್ಪಾ ನಿಮ್ಮ ಎಸ್ ಪಿ ಇಷ್ಟೊಂದಾ..? ಅಂತಾ ಪ್ರಶ್ನೆಗಳನ್ನ ಕೇಳುತ್ತಿದ್ದಾರಂತೆ.

ಒಟ್ಟಾರೆ ಸತ್ಯಕ್ಕೆ‌ ಜಯದ ಉತ್ತರ ಸಿಗುತ್ತೆ ತಪ್ಪಿತಸ್ಥರಿಗೆ ಶಿಕ್ಷೆ ನಿಜ ಅಂತಾ ಮಾತಾಡಿಕೊಳ್ಳುತ್ತಿರುವುದು ಸತ್ಯ.

Leave a Reply

Your email address will not be published. Required fields are marked *

error: Content is protected !!