ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ..!
ಬೆಂಗಳೂರು: ಬೆಂಗಳೂರಲ್ಲಿ ಶಂಕಿತ ಐವರು ಉಗ್ರರನ್ನು ಕರ್ನಾಟಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್ ಜುನೇದ್ ಮುದಾಶಿರ್ ಜಾಹಿದ್ ಬಂಧಿತ ಆರೋಪಿಗಳು. ಇವರು ಬೆಂಗಳೂರಲ್ಲಿ ಭಾರೀ ವಿದ್ವಂಸಕ ಕೃತ್ಯ ಕ್ಕೆ ಸಂಚು ಹಾಕಿದ್ದು ಇವರಿಗೆ ವಿದೇಶದಿಂದ ಫಂಡಿಂಗ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಹಾಗು ಆರ್ ಟಿ ನಗರದಲ್ಲಿ 2017 ರ ಅಕ್ಟೋಬರ್ ನಲ್ಲಿ ಆದಂತಹ ಮರ್ಡರ್ ಕೃತ್ಯದಿಂದ ಪರಪ್ಪನ ಅಗ್ರಹಾರದ ಪಾಲಾಗಿದ್ದ ಅನೇಕ ಖೈದಿಗಳು ಉಗ್ರರ ಜೊತೆ ಸಂಪರ್ಕ ಕಲ್ಪಿಸಿ ಕೊಂಡಿದ್ದರು ಅವರಲ್ಲಿ 5 ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ಎಂಬುವುದಾಗಿ ಬೆಂಗಳೂರು ಕಮಿಷನರ್ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರ್ ಟಿ ನಗರ ಹೆಬ್ಬಾಳ ಡಿಜೆಹಳ್ಳಿಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದು ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳ ಠಾಣೆಯಲ್ಲಿನ ಸುಲ್ತಾನ್ ಪಾಳ್ಯ ನಗರದ ಮಸೀದಿ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿರುವಾಗ ಬಂಧಿತರ ಬಳಿ ಇದ್ದ 7 ಪಿಸ್ತೂಲ್ ಮದ್ದುಗುಂಡುಗಳು 2 ಡ್ಯಾಗರ್ ಅಮೋನಿಯಾ 2 ಸ್ಯಾಟಲೈಟ್ ಫೋನ್ 4 ವಾಕಿಟಾಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಯುಪಿಎ ಶಸ್ತ್ರಾಸ್ತ್ರ ಕಾಯ್ದೆ ಸೇರಿ ಹಲವು ಪ್ರಕರಣ ದಾಖಲಾಗಿದೆ.
ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಜನೈದ್ ಅಹಮ್ಮದ್ ನಾಪತ್ತೆಯಾಗಿದ್ದು ಈತ ಕೊಲೆ ಕಿಡ್ನಾಪ್ ಪ್ರಕರಣದಿಂದ ಜೈಲಿನಿಂದ ಹೊರ ಬರುವಾಗ ಉಗ್ರನಾಗಿದ್ದ. ಈತನೇ ವಿದೇಶದಿಂದ ಫಂಡಿಂಗ್ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.