Exclusive: ಪೂರ್ವ ವಲಯ ಐಜಿಪಿ ತಂಡದಿಂದ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಡಿಟೊನೆಟರ್, ಜಿಲೆಟಿನ್,ಟ್ರಾಕ್ಟರ್ ವಶಕ್ಕೆ ಪಡೆದ ದಾವಣಗೆರೆ ಪೊಲೀಸ್

GARUDAVOICE EXCLUSIVE

 ದಾವಣಗೆರೆ : ಶಿವಮೊಗ್ಗ ಹುಣಸೋಡು ಸ್ಪೋಟದಿಂದ ರಾಜ್ಯವೇ ತಲ್ಲಣಗೊಂಡಿದ್ದ ಪ್ರಕರಣ ನಂತರ, ರಾಜ್ಯಾದ್ಯಂತ ಸ್ಫೊಟಕ ವಸ್ತು ಸಾಗಾಟ, ಬಳಕೆ, ದಾಸ್ತಾನು, ಬಗ್ಗೆ ಸರ್ಕಾರ ಹಲವು ರಿತೀಯ ಕಾನೂನುಗಳನ್ನ ಜಾರಿಗೆ ತಂದಿದೆ. ಇಷ್ಟೆಲ್ಲಾ ಬಿಗಿ ಕಾನೂನು ಇದ್ದರೂ ಅಕ್ರಮವಾಗಿ ಸ್ಪೊಟಕ ವಸ್ತುಗಳನ್ನ ಮಾರಾಟ,ಸಾಗಾಟ,ಬಳಕೆ ಎಗ್ಗಿಲ್ಲದೆ ನಡೆದಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕ ವಸ್ತುಗಳಾದ ಜಿಲೆಟಿನ್, ಎಲೆಕ್ಟ್ರಿಕಲ್ ಡಿಟೋನೇಟರ್ ಗಳನ್ನು ಅಕ್ರಮವಾಗಿ ತರುತ್ತಿದ್ದಾರೆ. ಅಲ್ಲದೆ ಇಂತಹ ವಸ್ತುಗಳು ಜನರ ಜೀವಕ್ಕೆ ತುಂಬಾ ಅಪಾಯ ಅಂತಾ ಗೊತ್ತಿದ್ದರು ರಾಜಾರೋಷವಾಗಿ ಬಳಕೆ ಮಾಡುತ್ತಿದ್ದ್ದು
ಕಾನೂನನ್ನ ಗಾಳಿಗೆ ತೂರಿದ್ದಾರೆ. ಬಿಗಿಯಾದ ಕಾನೂನು ಕೇವಲ ದಾಖಲೆಗಳಿಗೆ ಮಾತ್ರ ಎಂಬಂತಾಗಿದೆ ಎಂಬುದಕ್ಕೆ ಹಲವು ಸಾಕ್ಷ್ಯಾಧಾರಗಳು ಸಿಗುತ್ತಿವೆ.

ಹೌದು ಅಕ್ರಮ ಸ್ಫೊಟಕ ಬಳಕೆ ನಿಷೇದ ಕೇವಲ ಕಾಗದದ ದಾಖಲೆಗೆ ಮಾತ್ರ ಎಂಬುದಕ್ಕೆ ಪುಷ್ಠಿ ಎಂಬಂತೆ ದಾವಣಗೆರೆಯಲ್ಲಿ ಬುಧವಾರ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ ಸ್ಫೊಟಕ ಸಾಗಾಟ ಮಾಡುತ್ತಿದ್ದಂತಹ ಪ್ರಕರಣ ದಾಖಲಾಗಿದೆ.ದಾವಣಗೆರೆ ತಾಲ್ಲೂಕಿನ ಅಲೂರು ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಕಲ್ಲು ಬಂಡೆಯನ್ನ ಸ್ಫೋಟ ಮಾಡುವ ಉದ್ದೇಶದಿಂದ ಅಪಾಯಕಾರಿಯಾಗಿ ಯಾರ ಭಯವಿಲ್ಲದೇ ಟ್ರಾಕ್ಟರ್ ನಲ್ಲಿ 100 ಡಿಟೋನೆಟರ್,400 ಜಿಲೆಟಿನ್ ಕಡ್ಡಿಗಳನ್ನ ವಶಕ್ಕೆ ಪಡೆಯಲಾಗಿದೆ.ಪೂರ್ವ ವಲಯ ಐಜಿಪಿ ಕಚೇರಿಯ ಡಿ ವೈ ಎಸ್ ಪಿ ಹಾಗೂ ಸಿಬ್ಬಂದಿ ತಂಡದಿಂದ ಈ ಪ್ರಕರಣವನ್ನ ಬೇಧಿಸಿ ದಾವಣಗೆರೆ
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಲ್ಲು ಗಣಿಗಾರಿಕೆ ನಡೆಸಲು ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುವಾಗ ಪೊಲೀಸರು ಬುಧವಾರ ವಶಪಡಿಸಿಕೊಂಡು, ಟ್ರಾಕ್ಟರ್ ಚಾಲಕನನ್ನ ಬಂಧಿಸಿ 4 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಈ ವಸ್ತುಗಳು ಯಾರಿಗೆ ಸೇರಿದ್ದು ಎಂದು ಟ್ರಾಕ್ಟರ್ ಚಾಲಕನಿಗೆ ಕೇಳಿದಾಗ ಆಲೂರು ಗ್ರಾಮದ ಬಳಿಯಿರುವ ದಾವಣಗೆರೆ ಮೂಲದ ಓರ್ವ ವ್ಯಕ್ತಿಗೆ ಸೇರಿದ ಕಲ್ಲು ಕ್ವಾರಿ ಹಾಗೂ ಕ್ರಷರ್ ಗೆ ಸೇರಿದ್ದು ಎಂದು ತಿಳಿಸಿದ್ದು,ಹಾಗೂ ಇವೆಲ್ಲವೂ ಬಾಗಲಕೋಟೆಯಿಂದ ಸರಬರಾಜಾಗಿದೆ ಎಂದು ಗೊತ್ತಾಗಿದೆ.ಇದೆಲ್ಲಾ ನೋಡಿದ್ರೆ ದಾವಣಗೆರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಸ್ಫಷ್ಟವಾಗಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಇದುವರೆಗೂ ಗಮನಕ್ಕೆ ಬಂದಿಲ್ಲದಿರುವುದು ಯಕ್ಷ ಪ್ರಶ್ನೆಯಾಗಿದೆ.

ಕೊವಿಡ್ ಲಾಕ್ ಡೌನ್ ಹಿನ್ನೆಲೆ ರಾಜ್ಯಾದ್ಯಂತ ಸಂಚಾರ ವ್ಯವಸ್ಥೆಗೆ ಕಡಿವಾಣವಿದೆ ಅಲ್ಲದೇ ಅಧಿಕಾರಿಗಳು ಹೇಳುವ ಪ್ರಕಾರ ಜಿಲ್ಲೆಗೆ ಬರುವ ಹಾಗೂ ಹೋಗುವ ಮಾರ್ಗದ ಚೆಕ್ ಪೋಸ್ಟ್ ನಲ್ಲಿ ಕಠಿಣವಾದ ತಪಾಸಣೆ ನಡೆಯುತ್ತೆ ಅಂತಾ ಹೇಳ್ತಾರೆ, ಆದರೂ ಇಂತಹ ಅಪಾಯಕಾರಿ ಸ್ಫೊಟಕ ವಸ್ತುಗಳು ಹೇಗೆ ಸರಬರಾಜು ಆಯ್ತು ಅಂತಾ ತನಿಖೆಯಿಂದ ಗೊತ್ತಾಗಬೇಕಿದೆ. ದಾವಣಗೆರೆ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಬೇಟಿ ನೀಡುತ್ತಿದ್ದರು ಇವರೆಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿ ಅಕ್ರಮವಾಗಿ ಸ್ಫೋಟಕ ಸಾಗಾಟ ಮಾಡುತ್ತಿದ್ದಾರೆ, ಇಂತವರಿಗೆ ಕಾನೂನಿನ ಮೇಲೆ ಗೌರವ ಇಲ್ಲದಂತಾಗಿದೆ, ಅಲ್ಲದೇ ಇಂತಹ ಅಕ್ರಮದ ಬಗ್ಗೆ ಪೂರ್ವ ವಲಯದ ಐಜಿಪಿ ಗೆ ಮಾಹಿತಿ ಸಿಗುತ್ತೆ, ಆದರೆ ನಮ್ಮ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸದಾ ಗಸ್ತು ಇರುವವರಿಗೆ ಮಾಹಿತಿ ಸಿಗೋದಿಲ್ಲವೇಕೆ..?

ಅದೇನೆ ಇರಲಿ ಸಧ್ಯ ವಶಪಡಿಸಿಕೊಂಡಿರುವ ಸ್ಫೋಟಕಗಳನ್ನ ಆಲೂರು ಗ್ರಾಮದ ಬಳಿ ಇರುವ ಮ್ಯಾಗಜೀನ್ ಕೇಂದ್ರದಲ್ಲಿ ಇಟ್ಟು ತನಿಖೆ ನಡೆಸಲಾಗುತ್ತಿದೆ, ರಾತ್ರಿ ಈ ಮಾಹಿತಿ ತಿಳಿದ ದಾವಣಗೆರೆ ಎಸ್ ಪಿ ರಿಷ್ಯಂತ್ ಮ್ಯಾಗಜೀನ್ ಸ್ಥಳಕ್ಕೆ ಬೇಟಿ ನೀಡಿ ದಾವಣಗೆರೆ ಗ್ರಾಮಾಂತರ ಇನ್ಸಪೆಕ್ಟರ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ, ಅಲ್ಲದೇ ಇಂತಹ ಅಕ್ರಮ ಚಟುವಟಿಕೆ ನಡೆಯದಂತೆ ತಾಕೀತು ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!