ಕೆ ಐ ಎ ಡಿ ಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಶೇಖರ್, ಶಿರಸ್ತೇದಾರ್ ಶ್ರೀನಿವಾಸ್ ಲೋಕಾಯುಕ್ತರ ಬಲೆಗೆ

ದಾವಣಗೆರೆ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಲಯ ಕಚೇರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಜಿ.ಡಿ. ಶೇಖರ್ ಹಾಗೂ ಅವರ ಅಧೀನ ಸಿಬ್ಬಂದಿ ಶಿರಸ್ತೇದಾರ್ ಶ್ರೀನಿವಾಸ್ ವಿ.ಎ. ಇವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರದಿಂದ ಭೂ ಸ್ವಾಧೀನಗೊಂಡ ಕೋಳೂರಿನ ಸಂತೋಷ್ ಗುಡ್ಡಪ್ಪನವರ್ ಅವರ ಜಮೀನಿಗೆ ಸರ್ಕಾರದಿಂದ ಪರಿಹಾರ ಹಣ ಒದಗಿಸಿಕೊಡುವ ಸಲುವಾಗಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.

ವಿಶೇಷ ಭೂ ಸ್ವಾಧೀನಾಧಿಕಾರಿ ಜಿ.ಡಿ. ಶೇಖರ್ ತಮ್ಮ ಅಧೀನ ಸಿಬ್ಬಂದಿ ಶಿರಸ್ತೇದಾರ್ ಶ್ರೀನಿವಾಸ್ ವಿ.ಎ. ಅವರೊಂದಿಗೆ ತಮ್ಮ ಕಚೇರಿಯ ಕೊಠಡಿಯಲ್ಲಿ 30 ಸಾವಿರ ರೂ. ಲಂಚದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರಿದೆ.

ದಾವಣಗೆಲೆ ಲೋಕಾಯುಕ್ತ ಘಟಕ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡವೈಎಸ್ಪಿ ರಾಮಕೃಷ್ಣ ಕೆ.ಜಿ., ಪಿ.ಐ. ರಾಷ್ಟ್ರಪತಿ ಹೆಚ್.ಎಸ್., ಆಂಜನೇಯ ಎನ್.ಹೆಚ್., ಮಹೇಶ್, ಸಿ., ಎನ್.ಆರ್. ಚಂದ್್ರಶೇಕರ್, ಆಂಜನೇಯ ವಿ.ೆಚ್., ಸುರೇಶ್ ಎಂ., ಎಸ್.ಎಂ. ವೀರೇಶಯ್ಯ, ಆಶಾ, ಧನರಾಜ್ ಎನ್., ಲಿಂಗೇಶ್, ಮುಜೀಬ್ ಖಾನ್, ಜಂಷೀದಾ ಖಾನಂ, ಬಸವರಾಜ ಡಿ., ಮೋಹನ್ ಕುಮಾರ್ ಅವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!