interview; ಆ.23ರಂದು ವಾಕ್ ಇನ್ ಇಂಟರ್ವ್ಯೂ
ದಾವಣಗೆರೆ, ಆ. 19: ಜಿಲ್ಲಾ ಉದ್ಯೋಗ (job) ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಆಗಸ್ಟ್ 23 ರಂದು ಬೆಳಗ್ಗೆ10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ.ಸಂ.51)ದಲ್ಲಿ ವಾಕ್-ಇನ್-ಇಂಟರ್ವ್ಯೂ(interview) (ಅಪ್ರೆಂಟಿಷಿಪ್)ಅನ್ನು ಆಯೋಜಿಸಲಾಗಿದೆ.
ವಾಕ್-ಇನ್-ಇಂಟರ್ವ್ಯೂನಲ್ಲಿ ಶಾ ಇನ್‌ಫ್ರಾಟವರ್ಸ್ ಪ್ರೈವೇಟ್ ಲಿ, ಇವರು ಭಾಗವಹಿಸುತ್ತಿದ್ದು, ಅಪ್ರೆಂಟಿಷಿಪ್ ತರಬೇತಿಗೆ ಐ.ಟಿ.ಐ.(ಫಿಟ್ಟರ್, ವೆಲ್ಡರ್, ಎಲೆಕ್ಟ್ರೀಷಿಯನ್, ಸಿಎನ್ ಸಿ ಆಪರೇಟರ್) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ನಿಗದಿತ ಸ್ಥಳ ಮತ್ತು ಸಮಯಕ್ಕೆ ಕನಿಷ್ಠ 2 ಸೆಟ್ ಬಯೋಡಾಟಾ ಮತ್ತು ಆಧಾರ್ ಕಾರ್ಡ್ (aadhar card) ಜೊತೆಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 6361550016, 08192-259446 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ. ಡಿ ತಿಳಿಸಿದ್ದಾರೆ.