ಶೇ.40ರಷ್ಟು ಕಮೀಷನ್ ಬಿಜೆಪಿ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಪ್ರತಿಭಟನೆ
ದಾವಣಗೆರೆ: ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳು ಕಾರಣವೆಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜಿಲ್ಲಾ ಸಚಿವರು, ಸಂಸದರ ವಿರುದ್ಧ ಶನಿವಾರದಂದು ನಗರದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ರಾಜ್ಯಕಮೀಷನ್ದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹಪಹಪಿಸುತ್ತಿರುವ ಬಿಜೆಪಿ ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಶೇ.40% ಭ್ರಷ್ಟಾಚಾರದಿಂದಾಗಿ ಶೋಷಣೆ, ಹಿಂಸೆ, ಬೆಲೆ ಏರಿಕೆ ಜನರ ಬದುಕು ಸರ್ವನಾಶವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆ ದ್ರೋಹ ಮಾಡುವುದನ್ನು ಬಿಟ್ಟು ಏನನ್ನು ಮಾಡಿಲ್ಲ ಎಂದು ಆರೋಪಿಸಿದರು.
ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಕೆಂಪಣ್ಣನವರ ಆರೋಪಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಬಲವಾದ ಸಾಕ್ಷವಾಗಿದೆ. ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ಆಧಾರ ಸಹಿತ ಸಿಕ್ಕಿಬಿದ್ದಿದ್ದರೂ ಸಹ ಭ್ರಷ್ಟಾ ಬಿಜೆಪಿ ಸರ್ಕಾರ ತಪ್ಪೇ ಮಾಡಿಲ್ಲ ಎಂಬಂತೆ ವರ್ತಿಸಿದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ್, ವಕೀಲರ ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್ ಮತ್ತಿತರರು ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳು ಶೇ.40ರಷ್ಟು ಕಮೀಷನ್ ನೀಡದೇ ಯಾವುದೇ ಕಾಮಗಾರಿಗಳು ಆರಂಭವಾಗಲು ಬಿಡುತ್ತಿಲ್ಲ ಎಂದು ದೂರಿದರು.
ಅಶೋಕ ಚಿತ್ರಮಂದಿರ ಬಳಿ ನಡೆಯುತ್ತಿರುವ ರೈಲ್ವೆ ಅಂಡರ್‍ಪಾಸ್ ಕಾಮಗಾರಿಯೇ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದು, ಕೇವಲ 1-2 ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮಗಾರಿಯನ್ನು ಒಂದು ವರ್ಷವಾಗುತ್ತ ಬಂದಿದ್ದರು ಮುಕ್ತಾಯ ಮಾಡುತ್ತಿಲ್ಲ, ಸಂಸದರ ಕಮೀಷನ್ ಆಸೆಯಿಂದ ಕಳಪೆ ಕಾಮಗಾರಿ ನಡೆದು ಈ ಹಿಂದೆಮ್ಮೊ ಕಾಮಗಾರಿ ನಡೆಯುವ ವೇಳೆಯೇ ಕುಸಿತ ಉಂಟಾಗಿತ್ತು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಉಪಾಧ್ಯಕ್ಷ ಹೆಚ್.ಜಯಣ್ಣ, ಮಹ್ಮದ್ ಸಮೀವುಲ್ಲಾ, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಮಾಜಿ ಸದಸ್ಯರುಗಳಾದ ಸೀಮೇಎಣ್ಣೆ ಮಲ್ಲೇಶ್, ಚಂದ್ರಶೇಖರ್, ತಕ್ಕಡಿ ಮಂಜುನಾಥ್, ಜಮ್ನಳ್ಳಿ ನಾಗರಾಜ್, ಖಾಸಿಂಸಾಬ್, ಮೈನುದ್ದಿನ್, ಸಾಗರ್ ಎಲ್‍ಎಂಹೆಚ್, ಅಜ್ಜಪ್ಪ, ಕುಬೇರ, ರಾಘವೇಂದ್ರ ಗೌಡ, ಸಾವನ್ ಜೈನ್, ಲಾಲ್ ಆರೀಫ್, ಸುಭಾನ್‍ಸಾಬ್, ಅಲೆಕ್ಸಾಂಡರ್, ರಾಜಶೇಖರ್ ಬೆಂಡಿಗೇರಿ, ರಾಮಚಂದ್ರ ರಾಯ್ಕರ್, ಸುರೇಶ್ ಜಾಧವ್, ಸೈಯದ್ ಜಿಕ್ರಿಯಾ, ಅಬ್ದುಲ್ ಜಬ್ಬಾರ್,ರುದ್ರಮುನಿ, ಬಡೇಸಾಬ್, ಮಹಿಳಾ ಮುಖಂಡರುಗಳಾದ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಆಶಾರಾಣಿ ಮುರುಳಿ, ಶುಭಮಂಗಳ, ರಾಧಾಬಾಯಿ, ಗೀತಾ ಚಂದ್ರಶೇಖರ್, ಕಮಲಮ್ಮ ಮತ್ತಿತರರಿದ್ದರು.